ಧರ್ಮಾಚರಣೆ ೧೩೯

ಧರ್ಮಾಚರಣೆ-೧೪೦

ದಾತಾರೋ ನೋಭಿವರ್ಧಂತಾಂ ವೇದಾಃ ಸಂತತಿರೇವ ಚ | ಶ್ರದ್ಧಾ ಚ ನೋ ಮಾಗಮದ್ಬಹುದೇಯಂ ನೋ ಅಸ್ತ್ವಿತಿ || ಯಾಜ್ಞವಲ್ಕ್ಯ ಸ್ಮೃತಿ||

ಶ್ರಾದ್ಧದ ಅಂತ್ಯದಲ್ಲಿ ನಮ್ಮ ಪ್ರಾರ್ಥನೆ ಎಷ್ಟು ಉತ್ಕೃಷ್ಟವಾಗಿದೆಯೆಂದರೆ- ನಮ್ಮ ಮನೆಯಲ್ಲಿ, ಕುಟುಂಬದಲ್ಲಿ ದಾನಿಗಳು ಹೆಚ್ಚಾಗಲಿ. ದಾನ ಮಾಡಲು ಸಂಪತ್ತು ಹಾಗೂ ಉದಾರತೆ ಎರಡೂ ಇರುವವರು ಹೆಚ್ಚಲಿ. ಅಧ್ಯಯನ-ಅಧ್ಯಾಪನ ಮೊದಲಾದ ಸತ್ಕರ್ಮಗಳಲ್ಲಿ ತೊಡಗಿಕೊಳ್ಳುವವರ ಸಂತತಿ ಹೆಚ್ಚಾಗಲಿ. ನಮ್ಮ ಸಂತತಿ ಸಮಾಜಕ್ಕೆ ಹಾನಿ ತರದಿರಲಿ. ನಾವು ಮಾಡುವ ಯಾವ ಕರ್ಮದಲ್ಲೂ ಶ್ರದ್ಧೆ ಕಡಿಮೆಯಾಗದಿರಲಿ. ಕರ್ಮದ ಸಾಫಲ್ಯಕ್ಕೆ ಅದೇ ಕಾರಣ. ನಾವು ಇನ್ನೂ ಹೆಚ್ಚು ದಾನ ಮಾಡುವಂತೆ ಅನುಗ್ರಹಿಸಿರಿ. ಶ್ರಾದ್ಧದ ಫಲ ಸಿರಿಸಂಪತ್ತನ್ನೂ-ಆಮುಷ್ಮಿಕ ಫಲವನ್ನೂ ಕೊಡುವುದು.


ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩