ಧರ್ಮಾಚರಣೆ ೧೫೩
ಧರ್ಮಾಚರಣೆ-೧೫೩
ಪಾಖಂಡ್ಯನಾಶ್ರಿತಾಃ ಸ್ತೇನಾ ಭರ್ತೃಘ್ನ್ಯಃ ಕಾಮಗಾದಿಕಾಃ | ಸುರಾಪ್ಯ ಆತ್ಮತ್ಯಾಗಿನ್ಯೋ ನಾಶೌಚೋದಕಭಾಜನಾಃ || ಯಾಜ್ಞವಲ್ಕ್ಯ ಸ್ಮೃತಿ||
ಬ್ರಹ್ಮಚಾರಿಯನ್ನು ಬಿಟ್ಟು ಉಳಿದವರೆಲ್ಲರೂ ಒಬ್ಬರು ಮೃತರಾದರೆ ಸಪಿಂಡ-ಸಗೋತ್ರರಂತೆ ತಾಯಿಯ ತಂದೆ, ಗುರು, ಮಿತ್ರ,ಮದುವೆಯಾದ ಮಗಳು, ಸಹೋದರಿ ಹಾಗೂ ಅವಳ ಮಗ, ಮಾವ, ಕುಲಪುರೋಹಿತ ಇವರನ್ನು ಉದ್ದೇಶಿಸಿ ಜಲಾಂಜಲಿಯನ್ನು ನೀಡಬೇಕು. ಹಚ್ಚೆ ಮೊದಲಾದ ವೇದನಿಷಿದ್ಧ ಚಿಹ್ನಾಧಾರಿ-ಉಚಿತ ಸೌಲಭ್ಯ ಇದ್ದರೂ ಉಪಯೋಗಿಸದೇ ತಿರುಗುವವನು, ಬಂಗಾರ ಮೊದಲಾದವನ್ನು ಕದ್ದವನು, ಪತಿಗೆ ಅಥವಾ ಪತ್ನಿಗೆ ದ್ರೋಹ ಬಗೆದವರು, ಗರ್ಭಪಾತ ಹಾಗೂ ಬ್ರಹ್ಮಹತ್ಯೆ ಮಾಡುವವರು, ಮದ್ಯಪಾನ ಮೊದಲಾದ ದುರಾಚಾರಿ, ಆತ್ಮಹತ್ಯೆ ಮಾಡಿಕೊಂಡವರು ಸತ್ತರೆ ಅಶೌಚವೂ ಬೇಡ. ಜಲಾಂಜಲಿಯೂ ಬೇಡ. ಅಂತಹವರ ವಿಷಯದಲ್ಲಿ ಸುಮ್ಮನಿದ್ದರೇ ಹೆಚ್ಚು ಪುಣ್ಯ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ