ಧರ್ಮಾಚರಣೆ ೧೫೫
ಧರ್ಮಾಚರಣೆ-೧೫೫
ಕಾಲೋಗ್ನಿಃ ಕರ್ಮಮೃದ್ವಾಯುರ್ಮನೋ ಜ್ಞಾನಂ ತಪೋ ಜಲಮ್ | ಪಶ್ಚಾತ್ತಾಪೋ ನಿರಾಹಾರಃ ಸರ್ವೇಮೀ ಶುದ್ಧಿಹೇತವಃ || ಯಾಜ್ಞವಲ್ಕ್ಯ ಸ್ಮೃತಿ||
ಉತ್ತಮ ಮುಹೂರ್ತ, ಅಗ್ನಿ, ನಿತ್ಯಕರ್ಮ, ಗಾಳಿ, ಮಣ್ಣು, ಸದ್ವಿಚಾರಯುಕ್ತ ಮನಸ್ಸು, ಒಳ್ಳೆಯ ವಿಷಯದ ಜ್ಞಾನ, ತಪಸ್ಸು, ನೀರು, ಇನ್ನು ತಪ್ಪು ಮಾಡಲಾರೆ ಎಂಬ ಅನನ್ಯ ಭಾವ, ಉಪವಾಸ ಇವೆಲ್ಲವೂ ಅಶೌಚವಿರಲಿ ಯಾವ ಬಗೆಯ ಅಶುದ್ಧಿ ಇರಲಿ ಎಲ್ಲವನ್ನೂ ಶುದ್ಧಗೊಳಿಸುವ ಸಾಧನವಾಗಿವೆ. ಗ್ರಹಸ್ಥಿತಿ ಸರಿಯಾಗಿರುವ ಮುಹೂರ್ತ, ತುಳಸಿ-ಕೊಟ್ಟಿಗೆ ಮೊದಲಾದ ಪ್ರದೇಶದ ಮಣ್ಣು, ತೀರ್ಥಗಳ ನೀರು, ಪರಿಶುದ್ಧ ಚಿಂತನೆ, ತನ್ನ ಕರ್ಮದಲ್ಲಿ ಪೂರ್ಣನಿಷ್ಠೆ, ಯಜ್ಞದ ಬೆಂಕಿ, ನಿರಾಹಾರನಾಗಿರುವುದು ನಮ್ಮ ಎಲ್ಲಾ ಪಾಪಗಳನ್ನು ತೊಳೆಯುತ್ತವೆ. ಹಾಗಾಗಿ ಬದುಕಿನಲ್ಲಿ ಇವುಗಳನ್ನು ರೂಢಿಸಿಕೊಳ್ಳುವುದು ನಮ್ಮನ್ನು ನಾವು ಸ್ವಚ್ಛ ಮಾಡಿಕೊಂಡಂತೆ ಸರಿ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ