ಧರ್ಮಾಚರಣೆ ೧೩೫
ಧರ್ಮಾಚರಣೆ-೧೩೫
ಪ್ರತಿಗ್ರಹಸಮರ್ಥೋಪಿ ನಾದತ್ತೇ ಯಃ ಪ್ರತಿಗ್ರಹಮ್ | ಯೇ ಲೋಕಾ ದಾನಶೀಲಾನಾಂ ತಾನ್ಸಪ್ರಾಪ್ನೋತಿ ಪುಷ್ಕಲಾನ್ || ಯಾಜ್ಞವಲ್ಕ್ಯ ಸ್ಮೃತಿ||
ಷಟ್ಕರ್ಮಗಳಲ್ಲಿ ದಾನ-ಪ್ರತಿಗ್ರಹ ಎರಡೂ ಸೇರಿದೆ. ಹಾಗಿದ್ದರೂ ಯಾರಾದರೂ ಕೊಟ್ಟದ್ದನ್ನು ಸ್ವೀಕರಿಸುವ ಅಂದರೆ ಪ್ರತಿಗ್ರಹದ ಬಗ್ಗೆ ಹೆಚ್ಚು ಆಸಕ್ತಿ ಇರಬಾರದು. ದಾನ ಕೊಟ್ಟದ್ದನ್ನು ಸ್ವೀಕರಿಸಲು ಯೋಗ್ಯತೆ ಇದ್ದರೂ ಯಾರು ಪ್ರತಿಗ್ರಹ ಮಾಡುವುದಿಲ್ಲವೋ ಅಂತಹವರು ದಾನ ಮಾಡುವ ವ್ಯಕ್ತಿ ಹೊಂದುವ ಉತ್ತಮಲೋಕಗಳನ್ನು ಪಡೆಯುವನು. ದಾನಿಯ ಪುಣ್ಯದಷ್ಟೇ ಪುಣ್ಯ ಅಂತಹ ವ್ಯಕ್ತಿಗೆ ಸಿಗುವುದು. ಹಾಗಾಗಿ ಯಾರಾದರೂ ಕೊಡುವರೆಂದ ಕೂಡಲೇ ನಮಗೆ ಅದರ ಅವಶ್ಯಕತೆ ಇದೆಯೋ? ಅದಿಲ್ಲದೆ ನಮ್ಮ ಬದುಕು ಕಷ್ಟವೋ? ಮುಂತಾದುದರ ಬಗೆಗೆ ಸ್ವಲ್ಪ ವಿಚಾರ ಮಾಡಿ ಪ್ರತಿಗ್ರಹ ಮಾಡುವುದು ಇಹ-ಪರ ಶ್ರೇಯಸ್ಕರ. ಎಲ್ಲವನ್ನೂ ನಾವೇ ಪ್ರತಿಗ್ರಹ ಮಾಡುವುದು ಅಥವಾ ಪ್ರತಿಗ್ರಹಕ್ಕಾಗಿ ಕಾಯುವುದು ಯಾವಾಗಲೂ ಒಳ್ಳೆಯದಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ