ಧರ್ಮಾಚರಣೆ ೧೩೬
ಧರ್ಮಾಚರಣೆ-೧೩೬
ದೇವಾತಿಥ್ಯರ್ಚನಕೃತೇ ಗುರುಭೃತ್ಯಾರ್ಥಮೇವ ಚ| ಸರ್ವತಃ ಪ್ರತಿಗೃಹ್ಣೀಯಾದಾತ್ಮವೃತ್ಯರ್ಥಮೇವ ಚ|| ಯಾಜ್ಞವಲ್ಕ್ಯ ಸ್ಮೃತಿ ||
ದೇವಪೂಜೆಯನ್ನು ನಿಯಮಿತವಾಗಿ ಮಾಡಲು, ಅತಿಥಿ ಸತ್ಕಾರಕ್ಕಾಗಿ, ಮಾತಾ-ಪಿತೃಗಳ ಪೋಷಣೆಗಾಗಿ, ಗುರುಗಳು-ಆಶ್ರಿತರು-ಭೃತ್ಯರು ಮೊದಲಾದವರ ಪೋಷಣೆಯ ಸಲುವಾಗಿ ಹಾಗೂ ಆತ್ಮರಕ್ಷಣೆಗಾಗಿ ಪ್ರತಿಗ್ರಹ ಎಂದರೆ ಇನ್ನೊಬ್ಬರು ಕೊಟ್ಟದ್ದನ್ನು ದಾನ ತೆಗೆದುಕೊಳ್ಳುವುದು ತಪ್ಪಲ್ಲ. ಹೀಗೆ ತೆಗೆದುಕೊಂಡದ್ದನ್ನು ಭೋಗಾರ್ಥವಾಗಿ ಅಂದರೆ ಅತಿಯಾದ ಸುಖಲೋಲುಪತೆಗೆ ಬಳಸಿದರೆ ಅದು ಪಾಪಕಾರಕವಾಗುವುದು. ಈ ಪ್ರತಿಗ್ರಹವನ್ನು ನಿಂದ್ಯರಿಂದ ಪಡೆಯುವುದು ಪಾಪಕಾರಕ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ