ಧಾರ್ಮಿಕ ವಿಷಯ

ದೌಹಿತ್ರಪ್ರತಿಪಚ್ಛ್ರಾದ್ಧ

ಜಾತಮಾತ್ರೋಪಿ ದೌಹಿತ್ರೋ ವಿದ್ಯಮಾನೇಪಿ ಮಾತುಲೇ ಕುರ್ಯಾನ್ಮಾತಾಮಹಶ್ರಾದ್ಧಂ ಪ್ರತಿಪದ್ಯಾಶ್ವಿನೇ ಸತಿ. ಎಂಬ ನಿರ್ಣಯಸಿಂಧುವಿನ ಮಾತಿನಂತೆ ಮಾವ ಇದ್ದರೂ ಅಜ್ಜನ ಶ್ರಾದ್ಧ ಮಾಡಲೇಬೇಕು. ಉಪನಯನ ಆಗದವರು ಕೂಡ ಇದನ್ನು ಮಾಡಬಹುದು. ಚಂದ್ರಿಕಾಕಾರರು ಪಿಂಡ ಸಹಿತ ಎಂದರೆ ಕಮಲಾಕಾರನು ಪಿಂಡರಹಿತ ಎನ್ನುತ್ತಾನೆ. ಪ್ರತಿಪದೆಯ ಶ್ರಾದ್ಧದಲ್ಲಿ ಪಿಂಡದ ನಿಷೇಧ ಹೇಳಿರುವ ಕಾರಣ ಕಮಲಾಕರನ ಮಾತು ಸಮ್ಮತವೆನಿಸುತ್ತದೆ. ಅಲ್ಲದೆ ತಂದೆ ತಾಯಿ ಬದುಕಿದ್ದವರು ಪಿಂಡ ಕೊಡಬಾರದೆಂಬ ನಿಷೇಧವೂ ಇದಕ್ಕೆ ಪೂರಕ. ಪಿತೃಗಳು ಇದ್ದವರೇ ಇದನ್ನು ಮಾಡಬೇಕು.     

ಗರ್ಭಾಚ್ಯುತೋ ಹಿ ದೌಹಿತ್ರಃ ಕುರ್ಯಾತ್ಪಿತರಿ ಜೀವತಿ. ಶ್ರಾದ್ಧಂ ಮಾತಾಮಹಾನಾಂ ಚ ಪಕ್ಷಾಂತಾದಪರೇಹನಿ. 

ಪಕ್ಷಪಾಸದ ಮರುದಿನ ಈ ಶ್ರಾದ್ಧ ಮಾಡಬೇಕೆಂದು ಬಹು ಉಕ್ತಿಗಳು ಇವೆ. 

ಪ್ರತಿಪದ್ಯಾಶ್ವಿನೇ ಶುಕ್ಲೇ ದೌಹಿತ್ರಸ್ವ್ತೇಕಪಾರ್ವಣಮ್ ಶ್ರಾದ್ಧಂ ಮಾತಾಮಹಂ ಕುರ್ಯಾತ್ಸಪಿತಾ ಸಂಗವೇ ಸದಾ. 

ಇದನ್ನು ಕುತಪ ಕಾಲದಲ್ಲಿ ಅಲ್ಲದೇ ಸಂಗವ ಕಾಲ ಅಂದರೆ ದಿನದ ದ್ವಿತೀಯ ಭಾಗದಲ್ಲಿ ಮಾಡಬೇಕು. ತಂದೆ ಇದ್ದವರು ಸಂಗವ ಕಾಲ ಹೀಗೆ ಎರಡು ಅನ್ವಯ. 

ಒಂದು ವೇಳೆ ತಂದೆ ಹೋಗಿಯೂ ಮಾಡುವುದಾದರೆ ಅಪರಾಹ್ನ ಮಾಡಬೇಕು. 

ಕೌಸ್ತುಭಕಾರರು ಪಾರ್ವಣ ವಿಧಿಯಲ್ಲಿ ಜೀವತ್ಪಿತೃಕನು ಅಪರಾಹ್ಣವೇ ಮಾಡಬೇಕೆನ್ನುತ್ತಾನೆ. 

ಪ್ರಯೋಗ: ಅಸ್ಮನ್ಮಾತಾಮಹ ....... ಏತೇಷಾಂ   ತೃಪ್ತ್ಯರ್ಥಂ.... ಸಾಂಕಲ್ಪವಿಧಿನಾ ... ಎಂದು ಆರಂಭಿಸಿ ಪುರೂರವ ಆರ್ದ್ರವ ದೇವತೆಗಳು ಇಲ್ಲಿಯೂ.

ಅಂದೇ ಬಿಳಿ ಎಳ್ಳಿನಿಂದ ತರ್ಪಣ ಕೊಟ್ಟು ಇಷ್ಟರೊಡನೆ ಭೋಜನ.

ಶ್ರೀನಿಧಿ ಅಭ್ಯಂಕರ್. ಮೂಲ ಶ್ರಾದ್ಧ ಮಂಜರೀ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩