ಧರ್ಮಾಚರಣೆ ೧೪೭

ಧರ್ಮಾಚರಣೆ-೧೪೮

ಸತ್ಯಾsಸತ್ಯಾನ್ಯಥಾಸ್ತೋತ್ರೈರ್ನ್ಯೂನಾಗೇಂದ್ರಿಯರೋಗಿಣಾಮ್| ಕ್ಷೇಮಂ ಕರೋತಿ ಚೇದ್ದಂಡ್ಯಃ ಪಣಾನರ್ಧತ್ರಯೋದಶಾನ್|| ಅಭಿಗಂತಾಸ್ಮಿ ಭಗಿನೀಂ ಮಾತರಂ ವಾ ತವೇತಿ ಹ | ಶಪಂತಂ ದಾಪಯೇದ್ರಾಜಾ ಪಂಚವಿಂಶತಿಕಂ ದಮಮ್ ||
||ಯಾಜ್ಞವಲ್ಕ್ಯ ಸ್ಮೃತಿ||

ಯಾರಿಗಾದರೂ ವಿಕಲನಲ್ಲದಿದ್ದರೂ ಕುರುಡ-ಕುಂಟ-ಮೂಗ ಎಂದೆಲ್ಲಾ ನಿಂದಿಸುವುದು, ಉದ್ವೇಗ ಹೆಚ್ಚಾಗುವಂತೆ ಮಾತನಾಡುವುದು, ಅಶ್ಲೀಲ ವಾಕ್ಕನ್ನು ಪ್ರಯೋಗಿಸುವುದು, ಯಾವುದಾದರೂ ರೋಗದ ಹೆಸರಿನಿಂದ ನಿಂದಿಸುವುದು, ನಿನ್ನ ಭಗಿನಿ-ತಾಯಿಯೊಡನೆ ಅಭಿಗಮನ ಮಾಡುವೆನೆಂದು ಕೆಟ್ಟ ಪದಗಳನ್ನು ಪ್ರಯೋಗಿಸುವುದೇ ಮೊದಲಾದ ಮಾತಿನ ತಪ್ಪುಗಳಿಗೆ ಅವನ ಆದಾಯದ ಕೆಲವು ಭಾಗ ದಂಡ ವಿಧಿಸಬೇಕು. ಇಂತಹ ಕರ್ಮಗಳು ಇಹಕ್ಕೂ ಒಳ್ಳೆಯದಲ್ಲ, ಪರಕ್ಕೂ ಪಾಪಕರವೇ ಆಗುತ್ತವೆ. ಹಾಗಾಗಿ ವಿನಾಕಾರಣ ಯಾರನ್ನೂ ನಿಂದಿಸಲು,ಬಿರುನುಡಿಯಲು ತೊಡಗಬಾರದು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩