ಧರ್ಮಾಚರಣೆ ೧೨೪
ಧರ್ಮಾಚರಣೆ-೧೨೪
ಭೂಶುದ್ಧಿಮಾರ್ಜನಾದ್ದಾಹಾತ್ಕಾಲಾದ್ಗೋಕ್ರಮಣಾಸ್ತಥಾ | ಸೇಕಾದುಲ್ಲೇಪಾದ್ಗೃಹಂ ಮಾರ್ಜನಲೇಪನಾತ್ || ಯಾಜ್ಞವಲ್ಕ್ಯ ಸ್ಮೃತಿ||
ಭೂಶುದ್ಧಿ ಮಾಡಬೇಕಾದರೆ ಪೊರಕೆಯಿಂದ ಗುಡಿಸಬೇಕು. ಹೋಮ-ಹವನ ಮಾಡುವುದರಿಂದ ಶುದ್ಧವಾಗುತ್ತದೆ. ಉದಕಶಾಂತಿ ಮೊದಲಾದವುಗಳ ಜಲಪ್ರೋಕ್ಷಣೆಯಿಂದ ಶುದ್ಧವಾಗುವುದು. ಗೋ ಸಂಚಾರದಿಂದ ಸರ್ವಶುದ್ಧಿ ಉಂಟಾಗುವುದು. ಗೋಮೂತ್ರ-ಗೋಮಯದ ಸಿಂಪಡಣೆಯಿಂದ ಪವಿತ್ರವಾಗುವುದು. ಸೆಗಣಿ ಸಾರಿಸುವುದರಿಂದಲೂ ಇದನ್ನು ಸಾಧಿಸಬಹುದು. ಹೆರಿಗೆಯಾದಾಗ-ಮೃತರಾದಾಗ-ಸ್ನಾನ,ಪೂಜೆ ಮಾಡದೇ ಉಣ್ಣಾಗ- ನಾಯಿ,ಹಂದಿ, ಕತ್ತೆ ಪ್ರವೇಶಿಸಿದಾಗ- ಇದ್ದಿಲು,ತೌಡು, ಕೂದಲು, ಕೆಟ್ಟ ಬೂದಿಯಿಂದ- ಒಂಟೆ,ಕೋಳಿ ಮೊದಲಾದವುಗಳ ವಾಸದಿಂದ ಅಶುದ್ಧವೆನಿಸಿದಾಗ ಈ ಮೇಲಿನ ಉಪಾಯಗಳನ್ನು ಅನುಸರಿಸಬೇಕು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ