ಧರ್ಮಾಚರಣೆ ೧೪೪

ಧರ್ಮಾಚರಣೆ-೧೪೫

ಸಾಹಸಸ್ತೇಯ ಪಾರುಷ್ಯಗೋಭಿಶಾಪಾತ್ಯಯೇ ಸ್ತ್ರಿಯಾಮ್ | ವಿವಾದಯೇತ್ಸದ್ಯ ಏವ ಕಾಲೋsನ್ಯತ್ರೇಚ್ಛಯಾ ಸ್ಮೃತಃ || ಯಾಜ್ಞವಲ್ಕ್ಯ ಸ್ಮೃತಿ||

ವಿಷ ಅಥವಾ ಶಸ್ತ್ರ ಮುಂತಾದವುಗಳಿಂದ ಹಿಂಸೆ ನೀಡುವುದು ಹಾಗೂ ಕೊಲ್ಲುವುದು, ಕಳ್ಳತನ, ಕೆಟ್ಟದಾಗಿ ನಿಂದಿಸುವುದು, ದನಕಳ್ಳತನ ಅಥವಾ ವಧೆ, ಸುಳ್ಳು ಆರೋಪ, ಅತಿಕ್ರಮಿಸುವುದು, ಸ್ತ್ರೀಯರ ಆಚರಣೆಯ ವಿಷಯದಲ್ಲಿ ಅಥವಾ ಸ್ತ್ರೀ  ಯಾರನ್ನು ವರಿಸಿದ್ದಾಳೆ ಮೊದಲಾದ ವಿವಾದಗಳಲ್ಲಿ ಎಷ್ಟು ಶೀಘ್ರವಾಗಿ ಉತ್ತರ ಪಡೆದುಕೊಳ್ಳಲು ಸಾಧ್ಯವೋ ಅಷ್ಟು ಬೇಗ ಆರೋಪಿಗಳಿಂದ ಉತ್ತರ ಪಡೆದು ಕಾಲವ್ಯಯ ಮಾಡದೆ ತೀರ್ಮಾನ ಕೊಡಬೇಕು. ಒಂದು ವೇಳೆ ವಿಚಾರಣೆ-ತೀರ್ಮಾನಗಳು ತಡವಾದರೆ ಪ್ರಾಣ-ಧನ-ಮಾನ ಹಾಗೂ ಸ್ವತ್ವ ಎಲ್ಲವೂ ನಾಶವಾದೀತು. ಹಾಗಾಗಿ ನ್ಯಾಯ ನಿರ್ಣಯಿಸುವಾಗ ಮೊದಲ ಆದ್ಯತೆ ಯಾವುದಕ್ಕೆ ಎಂಬುದನ್ನು ಮಹರ್ಷಿಗಳು ಸ್ಪಷ್ಟವಾಗಿ ಸಾರಿದ್ದಾರೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩