ಧರ್ಮಾಚರಣೆ ೧೨೫
ಧರ್ಮಾಚರಣೆ-೧೨೫
ಗೋಘ್ರಾತೇನ್ನೇ ತಥಾ ಕೇಶಮಕ್ಷಿಕಾಕೀಟ ದೂಷಿತೇ | ಸಲಿಲಂ ಭಸ್ಮಮೃದ್ವಾಪಿ ಪ್ರಕ್ಷೇಪ್ತವ್ಯಂ ವಿಶುದ್ಧಯೇ || ಯಾಜ್ಞವಲ್ಕ್ಯ ಸ್ಮೃತಿ||
ಅನ್ನವನ್ನು ಗೋವು ಮೊದಲಾದ ಪ್ರಾಣಿಗಳು ಮೂಸಿದ್ದಾಗ, ಕೂದಲು-ನೊಣ-ಕ್ರಿಮಿಕೀಟಗಳು ಆಹಾರ ಪದಾರ್ಥದ ಮೇಲೆ ಬಿದ್ದಿದ್ದಾಗ ನೀರು-ಭಸ್ಮ-ಮಣ್ಣು ಇವುಗಳ ಸಿಂಪಡಣೆಯಿಂದ ಶುದ್ಧವಾಗುತ್ತದೆ. ಭೋಜನದ ಮೊದಲು ಗಾಯತ್ರಿ ಅಥವಾ ಬೇರೆ ಶ್ಲೋಕಗಳನ್ನು ಪಠಿಸಿ ಆಹಾರದ ಮೇಲೆ ನೀರು ಚಿಮುಕಿಸುವುದು ಇದೇ ಉದ್ದೇಶದಿಂದ, ವೀರಶೈವ ಅಥವಾ ಲಿಂಗಾಯತ ಮಠಗಳಲ್ಲಿ ಭಸ್ಮದಿಂದ ಚಿಮುಕಿಸುವುದು ಇದೇ ಉದ್ದೇಶದಿಂದ, ವಿರಾಗಿಗಳು ಚಿಟಿಕೆಯಷ್ಟು ಶುದ್ಧ ಮಣ್ಣನ್ನು ಸೇರಿಸಿಕೊಳ್ಳುವುದು ಇದೇ ಉದ್ದೇಶದಿಂದ ಹೊರತು ಇದು ಮೂಢನಂಬಿಕೆ ಅಥವಾ ಸಂಪ್ರದಾಯದ ಆಚರಣೆ ಅಲ್ಲ. ಆಹಾರ ಶುದ್ಧವಿದ್ದರೆ ಮನಸ್ಸು ಶುದ್ಧವಿರುತ್ತದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ