ಧರ್ಮಾಚರಣೆ ೧೫೨

ಧರ್ಮಾಚರಣೆ-೧೫೨

ಊನದ್ವಿವರ್ಷಂ ನಿಖನೇನ್ನಕುರ್ಯಾದುದಕಂ ತತಃ
ಅಸ್ಮಶಾನಾದನುವ್ರಜ್ಯ ಇತರೋ ಜ್ಞಾತಿಭಿರ್ವ್ರತಃ 
ಯಮಸೂಕ್ತಂ ತಥಾ ಗಾಥಾ ಜಪದ್ಭಿರ್ಲೌಕಿಕಾಗ್ನಿನಾ
ಸ ದಗ್ಧವ್ಯಉಪೇತಶ್ಚೇದಾಹಿತಾಗ್ನ್ಯಾ ವೃತಾರ್ಥವತ್
ಯಾಜ್ಞವಲ್ಕ್ಯ ಸ್ಮೃತಿ

ಎರಡು ವರ್ಷ ತುಂಬುವ ಮೊದಲು ಮಕ್ಕಳು ಮರಣ ಹೊಂದಿದರೆ ಅವರನ್ನು ಸುಡದೆ ಹೂಳಬೇಕು. ಅಂತ್ಯಕರ್ಮಗಳನ್ನು ಮಾಡಬಾರದು. ಸ್ಮಶಾನವಲ್ಲದ ಉತ್ತಮ ಸ್ಥಳದಲ್ಲಿ ತಗ್ಗು ತೆಗೆದು ಹೂಳಬೇಕು. ಎರಡು ದಾಟಿದ ಮಗುವಾದರೆ ಸ್ಮಶಾನಕ್ಕೆ ಯಮಸೂಕ್ತ ಪಠಿಸುತ್ತಾ ತೆಗೆದುಕೊಂಡು ಹೋಗಿ ಸಾಮಾನ್ಯ ಬೆಂಕಿಯಿಂದ ಸುಡಬೇಕು. ಉಪನಯನದ ಮೊದಲು ಅಥವಾ ಶಾಲೆಗೆ ಸೇರುವ ಮೊದಲ ಮರಣವಾದಲ್ಲಿ ಅಮಂತ್ರಕವಾಗಿ ಅಂತ್ಯಕ್ರಿಯೆ ನಡೆಸಬೇಕು. ಬುದ್ಧಿ ಹಾಗೂ ದೇಹದ ಬೆಳವಣಿಗೆ ಹೊಂದದ ಮಕ್ಕಳ ಸಾವಿನಲ್ಲಿ ಪೋಷಕರು ಮೊದಲೇ ದುಃಖಿಸುತ್ತಿರುತ್ತಾರೆ.‌ಇನ್ನೂ ಸರಿಯಾಗಿ ಆಟ ಪಾಠವಾಡದ ಆ ಮಕ್ಕಳ ಮರಣವೇ ಸಹಿಸಲು ಅಶಕ್ಯ. ಸಂಸ್ಕಾರ ಆದವರು ಮರಣ ಹೊಂದಿದರೆ ಮರಣಕ್ಕೂ ಸಂಸ್ಕಾರ ಎಂಬ ನಮ್ಮ ಋಷಿಗಳ ಚಿಂತನೆ ಅದ್ಭುತ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩