ಧರ್ಮಾಚರಣೆ ೧೨೭
ಧರ್ಮಾಚರಣೆ-೧೨೭
ಸ್ನಾತ್ವಾ ಪೀತ್ವಾ ಕ್ಷುತೇ ಸುಪ್ತೇ ಭುಕ್ತ್ವಾ ರಥ್ಯೋಪಸರ್ಪಣೇ | ಆಚಾಂತಃ ಪುನರಾಚಾಮೇದ್ವಾಸೋ ವಿಪರಿಧಾಯ ಚ || ಯಾಜ್ಞವಲ್ಕ್ಯ ಸ್ಮೃತಿ||
ಸ್ನಾನ ಮಾಡಿದಾಗ, ಏನನ್ನಾದರೂ ಕುಡಿದಾಗ, ಸೀನಿದಾಗ, ಮಲಗಿ ಎದ್ದಾಗ, ಊಟದ ನಂತರ, ದೂರ ಎಲ್ಲಾದರೂ ಹೋಗಿ ಬಂದಾಗ, ಬಟ್ಟೆ ಬದಲಾಯಿಸಿದಾಗ ಹೀಗೆ ಇವಿಷ್ಟೂ ಸಂದರ್ಭದಲ್ಲಿ ಆಚಮನ ಮಾಡಬೇಕು. ಆಚಮನ ಮಾಡುವ ಉದ್ದೇಶ ಭಗವನ್ನಾಮ ಸ್ಮರಣೆಯೇ ಹೊರತು ಬಾಯಾರಿಕೆ ತಣಿಸುವುದು ಅಥವಾ ಕರ್ಮಬಿಡದಿರುವುದು ಅಲ್ಲ. ಆದಷ್ಟೂ ಎಲ್ಲಾ ಸಂದರ್ಭದಲ್ಲಿ ಭಗವಂತನ ನಾಮ ಪಠಿಸುತ್ತಾ ಪದ್ಮಪತ್ರದಂತೆ ಪಾಪವಿಮುಖರಾಗುತ್ತಿರಿ ಎಂಬುದೇ ಮುಖ್ಯ ಉದ್ದೇಶ.ನೀರು ಸಿಗದಿದ್ದಾಗ, ಮಡಿ ಆಗದಿದ್ದಾಗ, ಸ್ಥಳ-ಕಾಲ ಸರಿಯಿಲ್ಲದಿದ್ದಾಗ ದೇವರ ನಾಮ ಸ್ಮರಣೆಯೂ ಇದೇ ಫಲವನ್ನು ತಂದುಕೊಡುತ್ತದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ