ಧರ್ಮಾಚರಣೆ ೧೪೨

ದೈವೇ ಪುರುಷಕಾರೇ ಚ ಕರ್ಮಸಿದ್ಧಿರ್ವ್ಯವಸ್ಥಿತಾ | ತತ್ರ ದೈವಮಭಿವ್ಯಕ್ತಂ ಪೌರುಷಂ ಪೌರ್ವದೇಹಿಕಮ್ || ಯಾಜ್ಞವಲ್ಕ್ಯ ಸ್ಮೃತಿ||

ಕರ್ಮದ ಫಲವು ಇಷ್ಟ ಹಾಗೂ ಅನಿಷ್ಟರೂಪದಲ್ಲಿರುತ್ತದೆ. ಅದು ದೈವವನ್ನು ಹಾಗೂ ಪುರುಷಪ್ರಯತ್ನವನ್ನು ಅವಲಂಬಿಸಿರುತ್ತದೆ. ದೈವ ಎಂದರೆ ಕಣ್ಣೆದುರು ಕಂಡ ಫಲ. ಪೌರುಷ ಎಂದರೆ ಪೂರ್ವಜನ್ಮಾರ್ಜಿತ ಕರ್ಮದ ಫಲ. ಬರೀ ಈಗಿನ ಪ್ರಯತ್ನ ಅಥವಾ ಕರ್ಮವೊಂದೇ ನಿರ್ಣಾಯಕ ಅಲ್ಲ. ಈಗಿನ ಪ್ರಯತ್ನ ನಿರರ್ಥಕ ಎನಿಸಲು ಕೆಲವೊಮ್ಮೆ ದೈವ, ಕೆಲವೊಮ್ಮೆ ಪೂರ್ವಜನ್ಮದ ಕರ್ಮಫಲ ಕಾರಣವಾಗುವುದು. ಹಾಗಾಗಿಯೇ ಫಲಾಪೇಕ್ಷೆ ಬಿಟ್ಟು ಕರ್ಮ ಮಾಡಬೇಕು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩