ಧರ್ಮಾಚರಣೆ ೧೨೯

ಧರ್ಮಾಚರಣೆ-೧೨೯

ಗೋ ಭೂ ತಿಲಹಿರಣ್ಯಾದಿ ಪಾತ್ರೇ ದಾತವ್ಯಮರ್ಚಿತಮ್ | ನಾಪಾತ್ರೇ ವಿದುಷಾ ಕಿಂಚಿದಾತ್ಮನಃ ಶ್ರೇಯ ಇಚ್ಛತಾ || ಯಾಜ್ಞವಲ್ಕ್ಯ ಸ್ಮೃತಿ|| 

ಗೋವು-ಭೂಮಿ-ಎಳ್ಳು-ಸುವರ್ಣ ಮೊದಲಾದವನ್ನು ದಾನ ಮಾಡುವ ಮುನ್ನ ವ್ಯಕ್ತಿಯನ್ನು ಸತ್ಕರಿಸಿ ಶಾಸ್ತ್ರೋಕ್ತವಾಗಿ ನೀಡಬೇಕು. ಯಾವ ದಾನವೇ ಇರಲಿ ಪಾತ್ರತೆ ಇದ್ದಲ್ಲಿ ಮಾತ್ರ ಫಲ ದೊರಕುತ್ತದೆ. ನೀರಿನ ಪಸೆಯೇ ಇರದ ಕಲ್ಲಿನ ಜಾಗದಲ್ಲಿ ಬೀಜ ಬಿತ್ತಿದರೆ ಮೊಳಕೆ ಎಂತು ಬಂದೀತು! ಇದರಂತೆ ವ್ಯಕ್ತಿಯ ಯೋಗ್ಯತೆಯನ್ನು ನೋಡಿ ಬುದ್ಧಿವಂತನಾದವನು ದಾನ ಮಾಡಬೇಕು. ಕೀರ್ತಿಕಾಮನೆಗಾಗಿಯೋ ಪ್ರತಿಫಲಾಪೇಕ್ಷೆಯಿಂದಲೋ ಉಪಕಾರಭಾವದಿಂದಲೋ ಅಪಾತ್ರರಿಗೆ ದಾನ ಮಾಡಿದರೆ ಅದರ ಫಲ ದುಷ್ಟವೇ ಆಗುತ್ತದೆ. ಹೀಗೆ ಕೊಡುವುದಕ್ಕಿಂತ ಕೊಡದಿದ್ದರೂ ತೊಂದರೆ ಇಲ್ಲ. ಪಾತ್ರಾಪಾತ್ರ ವಿವೇಚಿಸಿಯೇ ಎಂದಿಗೂ ದಾನ ಮಾಡಬೇಕು. ಇಲ್ಲದಿದ್ದರೆ ಮತ-ದಾನದಿಂದ ಆಯ್ಕೆಯಾದ ವ್ಯಕ್ತಿ ನಮ್ಮನ್ನೇ ನುಂಗಿದ ಕಥೆ ದಾನದ ವಿಷಯದಲ್ಲೂ ಪುನರಾವರ್ತನೆ ಆಗುತ್ತದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩