ಧರ್ಮಾಚರಣೆ ೧೩೨
ಧರ್ಮಾಚರಣೆ-೧೩೨
ಭೂದೀಪಾಶ್ಚಾನ್ನವಸ್ತ್ರಾಂಭಸ್ತಿಲ ಸರ್ಪಿಃ ಪ್ರತಿಶ್ರಯಾನ್ | ನೈವೇಶಿಕಂ ಸ್ವರ್ಣಧುರ್ಯಂ ದತ್ತ್ವಾ ಸ್ವರ್ಗೇ ಮಹೀಯತೇ || ಯಾಜ್ಞವಲ್ಕ್ಯ ಸ್ಮೃತಿ||
ಧಾನ್ಯ ಮೊದಲಾದ ಫಲಕೊಡುವ ಭೂಮಿಯನ್ನು ದಾನಮಾಡುವುದರಿಂದ ಪಾಪ ನಿವಾರಣೆ, ದೀಪದಾನದಿಂದ ಉತ್ತಮ ದೃಷ್ಟಿ, ಅನ್ನದಾನದಿಂದ ಅಕ್ಷಯ ಸುಖ, ವಸ್ತ್ರದಾನದಿಂದ ಚಂದ್ರಸಾಲೋಕ್ಯ, ಜಲದಾನದಿಂದ ಬದುಕಿನಲ್ಲಿ ತೃಪ್ತಿ, ತಿಲದಾನದಿಂದ ಅನುಕೂಲ ಸಂತಾನ, ಘೃತದಾನದಿಂದ ದೀರ್ಘಾಯುಷ್ಯ, ಧರ್ಮಛತ್ರ ಕಟ್ಟಿಸುವುದರಿಂದ ಸದಾ ಉತ್ತಮ ಮನೆಯಲ್ಲಿ ವಾಸಿಸುವ ಭಾಗ್ಯ, ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವುದರಿಂದ ಅಪಾರ ಪುಣ್ಯ, ಚಿನ್ನದಂತಹ ಬೆಲೆಬಾಳುವ ವಸ್ತುವಿನ ದಾನದಿಂದ ಸ್ವರ್ಗಪ್ರಾಪ್ತಿ. ಆದರೆ ಯಾವ ದಾನವನ್ನೂ ನಾಲ್ಕು ಜನರಿಗೆ ಗೊತ್ತಾಗುವಂತೆ ಹೆಸರು ಹೇಳಿ ಮಾಡಬಾರದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ