ಮಹಾಭಾರತದ ಕೆಲವು ಶ್ಲೋಕಗಳು📃
*ರಾಜಾನಂ ಪ್ರಥಮಂ ವಿಂದೇತ್ ತತೋ ಭಾರ್ಯಾಂ ತತೋ ಧನಮ್.ತ್ರಯಸ್ಯ ಸಂಚಯೇ ಚಾಸ್ಯ ಜ್ಞಾತೀನ್ಪುತ್ರಾಂಶ್ಚ ಧಾರಯೇತ್.*
ಏಕಚಕ್ರದ ಬ್ರಾಹ್ಮಣನಾಡುವ ಮಾತು.ಬುದ್ಧಿವಂತನು ಮೊದಲು ಒಳ್ಳೆಯ ರಾಜನನ್ನು ಪಡೆಯಬೇಕು.ಅಥವಾ ಒಳ್ಳೆಯ ರಾಜನಿದ್ದೆಡೆ ವಾಸಿಸಬೇಕು. ಆಮೇಲೆ ಪತ್ನಿಯನ್ನೂ ಅದಾದ ಮೇಲೆ ಧನವನ್ನೂ ಸಂಪಾದಿಸಬೇಕು.ಈ ಮೂರನ್ನೂ ಪಡೆದ ಮೇಲೆ ಬಂಧುಗಳನ್ನೂ ಮಕ್ಕಳನ್ನೂ ರಕ್ಷಿಸಬೇಕು.ಅದರೆ ನಾನು ಇದಕ್ಕೆ ವಿರುದ್ಧವಾಗಿ ಮಾಡಿ ಈಗ ಪಶ್ಚಾತ್ತಾಪ ಪಡುತ್ತಿರುವೆ.ನಾವೂ ಬ್ರಾಹ್ಮಣನಂತೆ ಮೊದಲು ಧನಕ್ಕೆ ಆದ್ಯತೆ ಅಲ್ಲವೇ! ಆಮೇಲೆ ಏನಾದರೂ ಘಟಿಸಿದಾಗ ಯಾರಮೇಲಾದರೂ ದೂರು ಹಾಕುತ್ತೇವೆ.ಆಯ್ಕೆ ಸರಿ ಇರಲಿಲ್ಲವೆಂದು ನಮ್ಮನ್ನು ತೆಗಳುವುದಿಲ್ಲ ಎಂದಿಗೂ.
*ಬ್ರಹ್ಮವಧ್ಯಾ ಪರಂ ಪಾಪಂ ನಿಷ್ಕೃತಿರ್ನಾತ್ರ ವಿದ್ಯತೇ.ಅಬುದ್ಧಿಪೂರ್ವಂ ಕೃತ್ವಾಪಿ ಶ್ರೇಯೋ ಆತ್ಮವಧೋ ಮಮ.*
ಬ್ರಾಹ್ಮಣನು ಕುಂತಿಯ ಮಕ್ಕಳಿಗಿಂತ ತನ್ನ ಸಾವೇ ಲೇಸು ಎಂದು ಹೇಳುವ ಮಾತು. ಬ್ರಹ್ಮಹತ್ಯೆ ಬಹಳ ದೊಡ್ದ ಪಾಪ.( ಬ್ರಹ್ಮನನ್ನು ಅರಿತವನ ಹತ್ಯೆ ಯಾವುದೇ ಜಾತಿಯವರದ್ದಲ್ಲ) ಇದಕ್ಕೆ ಪ್ರಾಯಶ್ಚಿತ್ತವೂ ಇಲ್ಲ.ಅವಿವೇಕದಿಂದ ತನ್ನ ಪ್ರಾಣ ಬಿಟ್ಟರೂ ಬ್ರಹ್ಮಹತ್ಯೆಗಿಂತ ಆತ್ಮವಧೆಯೇ ಶ್ರೇಯಸ್ಕರವೆಂದು ತೋರುತ್ತದೆ.ಹಿಂಸೆಯ ಬಗೆಗೆ ಧರ್ಮದ ನಡೆಯನ್ನು ಇದು ಎತ್ತಿಹಿಡಿಯುತ್ತದೆ.
*ಆಗತಸ್ಯ ಗೃಹೇ ತ್ಯಾಗಸ್ತಥೈವ ಶರಣಾರ್ಥಿನ: ಯಾಚಮಾನಸ್ಯ ಚ ವಧೋ ನೃಶಂಸಂ ಪರಮಂ ಮತಮ್.*
ಮನೆಗೆ ಬಂದ ಅತಿಥಿಯನ್ನು ,ಶರಣಾಗಿ ಬಂದವನನ್ನು, ಯಾಚಕನನ್ನು ಕೊಲ್ಲುವುದು ಅಥವಾ ಬಲಿಕೊಡುವುದು ಅತ್ಯಂತ ಕ್ರೂರವಾದ ಕರ್ಮ.ಹಾಗಾಗಿ ನಿನ್ನ ಮಗನನ್ನು ನನಗೋಸ್ಕರ ಬಲಿ ಕೊಡಲಾರೆ.ಅವನ ಸ್ವಾಭಿಮಾನ ನಾವು ಕಲಿಯಬೇಕು.ನಾವಾದರೆ ಸಿದ್ಧನಾಗಿದ್ದರೆ ಯಾರನ್ನಾದರೂ ಬಲಿ ಕೊಡುತ್ತೇವೆ.
ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ