💐ಪ್ರತಿಮಾನಾಟಕದ ಒಂದು ಸುಮ💐
*शत्रुघ्नलक्ष्मणगृहीतघटाभिषेके छत्रे स्वयं नृपतिना रुदता गृहीते । सम्भ्रान्तया किमपि मन्थरया च कर्णै: राज्ञ: शनैरभिहितं च न चास्मि राजा ।।*
_ಭಾಸನ ಕಥನಶೈಲಿ ಇಂತಹ ಸಂದರ್ಭಗಳಲ್ಲಿ ಹೆಚ್ಚು ಇಷ್ಡವಾಗುತ್ತದೆ.ಮೂಲರಾಮಾಯಣಕ್ಕೆ ವಿರೋಧ ಬರದಂತೆ ಕೆಲವನ್ನು ಮಾತ್ರ ವ್ಯತ್ಯಾಸ ಮಾಡಿ ಹೇಳುತ್ತಾನೆ. ರಾಮನು ಅಭಿಷೇಕ ಒಪ್ಪದಿದ್ದಾಗ ದಶರಥ ವಯಸ್ಸಿನ ಕಾರಣ ಹೇಳಿ ಒಪ್ಪಿಸುತ್ತಾನೆ. ಅನಂತರ ಲಕ್ಷ್ಮಣ ಶತ್ರುಘ್ನರು ತೀರ್ಥ ತುಂಬಿದ ಕೊಡಗಳನ್ನು ಕೈಗಳಲ್ಲಿ ಹಿಡಿದು ಅಭಿಷೇಕ ಮಾಡಲು ಸಿದ್ಧರಾಗಿರುವಂತೆ, ಆನಂದ ಬಾಷ್ಪ ಸುರಿಸುತ್ತಿರುವ ರಾಜ ದಶರಥ ತಾನೇ ಸ್ವತ: ಬಿಳಿಯ ಬಣ್ಣದ ದೊಡ್ಡ ರಾಜರಿಗೆ ಯೋಗ್ಯವಾದ ಛತ್ರವನ್ನು ಹಿಡಿದು ಇನ್ನೇನು ರಾಜನಾದೆ ಎನ್ನುವಷ್ಟರಲ್ಲಿ , ಬೇಗ ಬೇಗನೇ ಬಂದು ದಶರಥನನ್ನು ಸಮೀಪಿಸಿದ ಮಂಥರೆ ಅವನ ಕಿವಿಯಲ್ಲಿ ಏನನ್ನೋ ಗುಟ್ಟಾಗಿ ಹೇಳಲಾಗಿ ರಾಜನು ಮೆಲ್ಲನೆ ನಿಟ್ಟುಸಿರು ಬಿಡುತ್ತಾ ನುಡಿದ ಆಗ ತಿಳಿಯಿತು ನಾನು ರಾಜನಲ್ಲ, ಅಥವಾ ಆಗ ಅರುಹಿದಳು ಮಂಥರೆ ನೀನು ರಾಜನಾಗಲಾರೆ ಎಂದು. ರಾಮಾಯಣದಲ್ಲಿ ಇಲ್ಲದ ದೃಶ್ಯ ಸೃಷ್ಟಿಸಿ ಭಾಸ ಅದಕ್ಕೊಂದು ಹಠಾತ್ ತಿರುವು ಕಲ್ಪಿಸಿದ್ದಾನೆ.ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಬಳಸುವ ಅನಿರೀಕ್ಷಿತ ಬದಲಾವಣೆಯ ತಂತ್ರ ಭಾಸನು ಇಲ್ಲೇ ಒಂದನೇ ಶತಮಾನದಷ್ಟು ಹಿಂದಿನ ಕಾಲದಲ್ಲಿ ಬಳಸಿದ್ದಾನೆ.ಎಲ್ಲರೂ ನಿರೀಕ್ಷಿಸುತ್ತಿದ್ದಾರೆ ರಾಮಾಭಿಷೇಕವನ್ನು.ಲಕ್ಷ್ಮಣ ಶತ್ರುಘ್ನರು ಅಣ್ಣನ ಮೇಲಿನ ಪ್ರೀತಿಯಿಂದ ತಾವೇ ಅಭಿಷೇಕದ ಕೊಡಗಳನ್ನು ಹಿಡಿದಿರುವರು.ರಾಜನು ಶ್ವೇತಚ್ಛತ್ರ ಹಿಡಿದಿದ್ದಾನೆ. ಹೀಗೆ ಮುಹೂರ್ತ ಸಮೀಪಿಸಲು ಅಲ್ಲೊಂದು ಘಟನೆ ನಡೆದು ಅಭಿಷೇಕ ನಿಲ್ಲುತ್ತದೆ.ಮಂಥರೆಯೆಂಬ ಕೈಕೇಯಿಯ ದಾಸಿಯೊಬ್ಬಳು ರಾಜನ ಕಿವಿಯಲ್ಲಿ ಏನೋ ಗುನುಗಲಾಗಿ ಎಲ್ಲರ ಗಮನ ಅತ್ತ ಸರಿದು ಕ್ಷಣಮಾತ್ರದಲ್ಲಿ ಅರಳುತ್ತಿದ್ದ ರಾಜನ ಮೊಗ ವಿವರ್ಣವಾಗಿ ನನಗೆ ಅರುಹಿದನು ರಾಮ ನೀನಿನ್ನು ರಾಜನಲ್ಲ. ಎರಡು 'ಚ' ಬಳಸಿ ಮಂಥರೆಯ ಮಾತು ಹಾಗೂ ವ್ಯತ್ಯಾಸವಾದ ರಾಜನ ಭಾವ ಇವನ್ನು ಕವಿ ಸೂಚಿಸಿದ್ದಾನೆ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ