ಇಂದಿನ ದೇವಿಯ ರೂಪ ಕೂಷ್ಮಾಂಡಾ ಅಥವಾ ಕೂಷ್ಮಾಂಡಿನೀ.ಶಕ್ತಿಯ ಇನ್ನೊಂದು ರೂಪಧಾರಿ ದೇವಿ.ಸೂರ್ಯನಿಗೆ ಜಗವನ್ನು ಬೆಳಗಲು ಒಡಲೊಳಗೆ ಶಕ್ತಿಯನ್ನು ಕರುಣಿಸುವ ತಾಯಿ.ಕು ಎಂದರೆ ಸಣ್ಣದು,ಶ್ಮಾ ಎಂದರೆ ಶಕ್ತಿ,ಅದನ್ನು ಅಂಡ ರೂಪದಲ್ಲಿ ಲೋಕಕ್ಕೆ ಬಿಡುಗಡೆಗೊಳಿಸುವ ತಾಯಿ.ಸಣ್ಣರೂಪದ ಅಂಡದಿಂದ ದೊಡ್ಡ ಬ್ರಹ್ಮಾಂಡ ಉತ್ಪತ್ತಿಯಾಯಿತು,ಹೀಗೆ ಉತ್ಪತ್ತಿಕಾರಕ ಮಾತೆ ಅವಳು.ಕೂಷ್ಮಾಂಡ ಅಂದರೆ ಕುಂಬಳಕಾಯಿಯ ಬಲಿ ಅವಳಿಗೆ ಪ್ರಿಯವೂ ಹೌದು.ಅಂತಹ ತಾಯಿ ಕೂಷ್ಮಾಂಡದಂತೆ ನಮ್ಮ ಮೈ ಮನಗಳೆರಡನ್ನೂ ಶುದ್ಧವಾಗಿಸಲಿ.ಕುಂಬಳ ಒಳಗೂ ಹೊರಗೂ ಬೆಳ್ಳಗೆ ಇರುವಂತೆ ಕಾಯಾ ವಾಚಾ ಮನಸಾ ಶುದ್ಧಿ, ಭಗವದ್ಭಕ್ತಿ ನಮ್ಮಲ್ಲಿ ಆ ಮಹಾಮಾಯೆ ಉಂಟು ಮಾಡಲೆಂದು ಪ್ರಾರ್ಥಿಸೋಣ.
ಶ್ರೀನಿಧಿ ಅಭ್ಯಂಕರ್.
ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ