🌹ಶಾಕುಂತಲದ ಸುಂದರ ಶ್ಲೋಕ🌹
*औत्सुक्यमात्रमवसाययति प्रतिष्ठा क्लिश्नाति लब्धपरिपालन वृत्तिरेनम् । नातिश्रमापनयनाय यथा श्रमाय राज्यं स्वहस्तधृतदणडमिवातपत्रम् ।।*
_ದುಷ್ಯಂತನ ಮಾತು.ವಾಸ್ತವವೂ ಹೌದು. ಅಧಿಕಾರದ ಆಯಾಸ ಯಾವ ರೀತಿಯೆಂದರೆ - ಕಾರ್ಯಸಿದ್ಧಿಯು ಆ ಕಾರ್ಯದ ಉತ್ಸಾಹವನ್ನು ತಣಿಸುತ್ತದೆ. ಕಾರ್ಯದಿಂದ ಆದ ಲಾಭದ ರಕ್ಷಣೆಯು ಆಯಾಸವನ್ನೇ ಉಂಟುಮಾಡುತ್ತದೆ. ರಾಜ್ಯದ ಅಧಿಕಾರವು ನಮ್ಮ ಕೈಯಲ್ಲಿ ಹಿಡಿದ ಭಾರವಾದ ದಂಡವಿರುವ ಛತ್ರದಂತೆ ಶ್ರಮವನ್ನು ಪರಿಹರಿಸುವುದಕ್ಕಿಂತ ಹೆಚ್ಚು ಶ್ರಮಕ್ಕೇ ಕಾರಣವಾಗುತ್ತದೆ. ಬಿಸಿಲಿನಲ್ಲಿ ನೆರಳಿಗಾಗಿ ಛತ್ರಿ ಆಶ್ರಯಿಸಬೇಕು.ಆದರೆ ಆ ಛತ್ರಿಯ ದಂಡ ತುಂಬಾ ಭಾರವಿದ್ದರೆ ಬಿಸಿಲಿನಿಂದ ಆಗುವ ಆಯಾಸಕ್ಕಿಂತ ಹೆಚ್ಚು ಆಯಾಸ ಛತ್ರಿಯನ್ನು ಹಿಡಿಯುವುದರಿಂದ ಆಗುತ್ತದೆ.ಅದನ್ನು ನೋಡಿದಾಗ ಛತ್ರಿಯೇ ಬೇಡವೆಂದೆನಿಸುತ್ತದೆ. ರಾಜನ ಅಧಿಕಾರವೂ ಹಾಗೆಯೇ ಇದೆ. ಸ್ವಂತ ಕೈಯಲ್ಲಿ ಹಿಡಿದ ಕೊಡೆ ಬಿಸಿಲು ಅಥವಾ ಮಳೆಯ ಶ್ರಮವನ್ನು ಪರಿಹರಿಸಿದರೂ ಹಿಡಿದು ಕೊಳ್ಳುವ ಶ್ರಮ ಹೆಚ್ಚಾದರೆ ಕಷ್ಟ. ರಾಜ್ಯದಂಡವು ಪ್ರಜೆಗಳಿಗೆ ಶತ್ರುಗಳ ಭಯ ಹೋಗಲಾಡಿಸಿದರೂ. ಜನಪ್ರಿಯತೆ ತಂದುಕೊಟ್ಟರೂ ನಡೆಯಿಸಿಕೊಂಡುಹೋಗುವ ಶ್ರಮವನ್ನೇ ಉಂಟುಮಾಡುತ್ತದೆ. ನಮ್ಮ ಬದುಕೂ ಹೀಗೆಯೇ ಅಲ್ಲವೇ! ಏನಾದರೂ ಕಾರ್ಯ ಕೈಗೊಂಡು ಯಶಸ್ವಿಯಾದರೆ ಆ ಕಾರ್ಯದಲ್ಲಿನ ಉತ್ಸಾಹ ತಣಿಯುತ್ತದೆ. ಸಂಪತ್ತನ್ನು, ಕೀರ್ತಿಯನ್ನು, ಗೌರವವನ್ನು, ಪ್ರತಿಷ್ಠೆಯನ್ನು, ಅಧಿಕಾರವನ್ನು, ಯಶಸ್ಸನ್ನು ಸಂಪಾದಿಸುವ ತನಕ ಉತ್ಸಾಹ ಮೇರೆ ಮೀರಿರುತ್ತದೆ.ಆದರೆ ನಂತರ ಅವುಗಳನ್ನು ಉಳಿಸಿಕೊಳ್ಳಲು ಸಂಪಾದನೆಯ ಕಾಲದಲ್ಲಿ ಅನುಭವಿಸಿದ ಶ್ರಮಕ್ಕಿಂತ ಹೆಚ್ಚು ಪರಿಶ್ರಮ ಅವಶ್ಯಕವಾಗುವುದು.ಅನ್ಯಾಯದಿಂದ ಸಂಪಾದಿಸಿದವರಿಗಂತೂ ಇದು ಅಕ್ಷರಶಃ ಅನ್ವಯವಾಗುತ್ತದೆ. ನ್ಯಾಯವಾಗಿ ಸಂಪಾದಿಸಿದ ಏನನ್ನಾದರೂ ಉಳಿಸಿಕೊಳ್ಳಲು ಬಹು ಶ್ರಮ ಅಗತ್ಯ.ಹಾಗಾಗಿ ರಾಜನ ಅಧಿಕಾರವು ದಂಡದಂತೆ ಅಯಾಸ ಪರಿಹರಿಸುವ ಬದಲು ಅಯಾಸವನ್ನೇ ಉಂಟುಮಾಡುತ್ತದೆ ಎಂಬ ಸುಂದರ ಮಾತು ರಾಜನದ್ದು.ಅನುಮಾನ ಹಾಗೂ ಯಥಾಸಂಖ್ಯಾ ಅಲಂಕಾರಗಳು._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ