🌹ಶಾಕುಂತಲದ ಸುಂದರ ಸುಮ🌹
*प्रजा: प्रजा: स्वा इव तन्त्रयित्वा निषेवतेsशान्तमना विविक्तम् । यूथानि सञ्चार्य रविप्रतप्त: शीतं दिवा स्थानमिव द्विपेन्द्र: ।।*
_ಕಂಚುಕಿಯು ರಾಜನ ಜವಾಬ್ದಾರಿಯ ಬಗ್ಗೆ ನುಡಿಯುವ ಮತ್ತೊಂದು ಅಣಿಮುತ್ತು.ಉಪಮಾಲಂಕಾರ ಪ್ರಯೋಗದಲ್ಲಿ ಕಾಳಿದಾಸನಿಗೆ ಇರುವ ಕೌಶಲ್ಯ ಇಲ್ಲಿ ಕಾಣಬಹುದು. ಈ ನಮ್ಮ ರಾಜನು ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಪಾಡಿ ತಾನು ದಣಿದಿದ್ದಾನೆ.ಇದು ಹೇಗಿದೆಯೆಂದರೆ ತನ್ನ ಹಿಂಡನ್ನು ಜತನದಿಂದ ಓಡಾಡಿಸಿ ಅವರಿಗೆಲ್ಲ ಆಹಾರಾದಿ ಒದಗಿಸಿ ಬಿಸಿಲಿನಿಂದ ಬಳಲಿದ ಮದ್ದಾನೆಯು ಮಧ್ಯಾಹ್ನದ ವೇಳೆಯಲ್ಲಿ ತಂಪಾದ ಸ್ಥಾನವನ್ನು ಆಶ್ರಯಿಸುವಂತೆ ಈ ನಮ್ಮ ರಾಜನು ಏಕಾಂತದಲ್ಲಿ ವಿರಮಿಸಿದ್ದಾನೆ. ತನ್ನ ಮಕ್ಕಳೊಡನೆ ಹೇಗೆ ಸಮಾಧಾನದಿಂದ ವ್ಯವಹರಿಸಿ ಅವರ ಬೇಕು ಬೇಡಗಳನ್ನು ವಿಚಾರಿಸುತ್ತಾಯೋ ಹಾಗೆಯೇ ಪ್ರಜೆಗಳ ವಿಷಯದಲ್ಲಿ ರಾಜನ ನಡತೆ ಇರಬೇಕು. *ಪ್ರಜಾರಂಜಕಾತ್ ರಾಜ:* ಎಂಬಂತೆ ಪ್ರಜೆಗಳಿಗೆ ಆನಂದ ಉಂಟುಮಾಡುವುದು ಉತ್ತಮ ಆಡಳಿತದ ಮೂಲಕ ಅದು ರಾಜನ ಕರ್ತವ್ಯ. ಸಲಗವೊಂದು ಹೇಗೆ ತನ್ನ ಗುಂಪನ್ನು ಜಾಗೃತೆಯಿಂದ ಸುತ್ತಿಸಿ ಹಿಂತಿರುಗಿ ತಾನೂ ಬಳಲಿ ವಿರಮಿಸುವುದೋ ಹಾಗೆಯೇ ರಾಜನ ಪ್ರಕೃತ ಸ್ಥಿತಿ.ಸಲಗದಂತೆ ಪರಾಕ್ರಮ ಜವಾಬ್ದಾರಿ ತನ್ನ ನಂಬಿದ ಜನರ ಬಗ್ಗೆ , ಕಾಳಜಿ ಇವೆಲ್ಲಾ ರಾಜನ ಮುಖ್ಯ ಲಕ್ಷಣಗಳು. ನಾವೂ ನಮ್ಮ ರಾಜರ ಆಯ್ಕೆಯಲ್ಲಿ ಜಾಗರೂಕರಾಗೋಣ. ಭಾಗ್ಯವು ಹೇಗೆ ಹೇಗೊ ದೊರಕದೆ ನಮ್ಮ ಕರ್ಮದಿಂದ ದೇವನ ಭಕ್ತಿಯಿಂದ ಸಂಪಾದಿಸುವ ಯೋಗ ಮಾಡಿಕೊಡುವ ರಾಜನ ಬೆನ್ನು ಹಿಡಿಯೋಣ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ