💐ಪ್ರತಿಮಾನಾಟಕದ ಒಂದು ಸುಮ💐

*कर्णौ त्वरापहृतभूषणभुग्नपाशौ संस्रंसिताभरणगौरतलौ च हस्तौ । एतानि चाभरणभारनतानि गात्रे स्थानानि नैव समतामुपयान्ति तावत् ।।*

_ಸೀತೆ ನಾರುಬಟ್ಟೆ ಧರಿಸಿದರೆ ಹೇಗೆ ಕಾಣುವೆನೆಂದು ತರ್ಕಿಸಿ ಅದನ್ನು ಧರಿಸಲು ತೊಟ್ಟ ಆಭರಣಗಳನ್ನು ಕಳಚಿ ಸಖಿಯ ಕೈಯಲ್ಲಿ ನೀಡುತ್ತಾಳೆ.ಆ ಸಮಯದಲ್ಲಿ ಬಂದ ಶ್ರೀರಾಮನು ಅವಳ ಅಲಂಕಾರ ರಹಿತ ಸೌಂದರ್ಯವನ್ನು ಪ್ರಶಂಸಿಸಿ ಸನ್ಯಾಸಿನಿಯಂತೆ ಇರುವುದಕ್ಕೆ ಆಕ್ಷೇಪಿಸುತ್ತಾನೆ.ಹಾಗೆಯೇ ಮುಂದುವರೆಯುತ್ತಾ ಈಗ ತಾನೇ ಈ ಆಭರಣಗಳು ತೆಗಯಲ್ಪಂಟಂತಿವೆ ಎಂದು ಈ ಮಾತನ್ನು ನುಡಿಯುವನು. ಕಿವಿಗಳು ಸದ್ಯದಲ್ಲೇ ಕಳಚಿದ ಓಲೆಗಳನ್ನು ಸೂಚಿಸುತ್ತಿವೆ.ಅವುಗಳ ರಂಧ್ರ ಬೇಗನೇ ತೆಗೆದಿದ್ದರಿಂದ ಸ್ವಲ್ಪ ತಿರುಗಿದೆ.ಎರಡೂ ಕಿವಿಗಳ ರಂಧ್ರಗಳೂ ವಕ್ರವಾಗಿರುವುದು ಈಗ ಸ್ವಲ್ಪ ಮುಂಚೆ ಆಭರಣ ತೆಗೆದ ಸಂಕೇತ. ಕೈಗಳಲ್ಲಿ ಬಳೆಗಳ ಇರುವಿಕೆಯಿಂದ ಉಂಟಾದ ಬಿಳಿಬಣ್ಣ ಇನ್ನೂ ಮಾಸಿಲ್ಲ. ನಿರಂತರ ಧರಿಸುವಿಕೆ ಅಲ್ಲಿ ಚರ್ಮದ ವರ್ಣವನ್ನು ಬದಲಾಯಿಸುತ್ತದೆ.ನಿನ್ನ ಕೈಗಳಿನ್ನೂ ಬಿಳಿಯಾಗಿಯೇ ಇವೆ. ಆಭರಣಗಳಿಂದ ಬಾಗಿದ ದೇಹದ ಭಾಗಗಳ ಗುರುತು ಇನ್ನೂ ಹಾಗೆಯೇ ಇದೆ. ಇನ್ನೂ ಅವುಗಳು ಸಹಜ ಸ್ಥಿತಿಯನ್ನು ಪಡೆದಿಲ್ಲ. ಹೀಗಾಗಿ ನೀನು ಕೆಲ ನಿಮಿಷಗಳ ಮುಂಚೆ ಅಲಂಕಾರಮುಕ್ತಳಾಗಿದ್ದಿ ಎಂಬುದು ನಿನ್ನ ದೇಹದ ಅವಸ್ಥೆಯಿಂದಲೇ ತಿಳಿಯುವುದು.ಕವಿಯ ಚಾತುರ್ಯ ಗಮನಿಸಿ.ವರ್ಣನೆಯಲ್ಲಿಯೂ ಒಂದು ನಿಯಮವಿದೆ. ಕಂಠದಲ್ಲಿ ಸೊಂಟದಲ್ಲಿ ಆಭರಣ ಧರಿಸಿದ್ದರೂ ಅದನ್ನು ಅಥವಾ ಅದರ ಪರಿಣಾಮ ವಾಚ್ಯವಾಗಿಲ್ಲ.ಅವೆಲ್ಲ ಧ್ವನ್ಯ ಅಷ್ಟೇ. ತುಂಬಾ ಹತ್ತಿರದಿಂದ ಆಭರಣ ತೆಗೆದಾಗ ಉಂಟಾಗುವ ಪರಿಣಾಮಗಳ ಅಧ್ಯಯನ ಕವಿಯದ್ದು.ಬಹುಶ: ಅವಮ ಮಡದಿಯನ್ನೋ ಪ್ರೇಯಸಿಯನ್ನೋ ಸೂಕ್ಷ್ಮವಾಗಿ ಗಮನಿಸಿಬೇಕು.ಇನ್ನೂ ಸ್ವಾಭಾವಿಕ ಅವಸ್ಥೆ ಪಡೆದಿಲ್ಲ ಅನ್ನುವುದು ಮುಂದೆ ಇದೇ ಅವಸ್ಥೆ ತರಬಹುದೆಂಬ ಸೂಚನೆಯೂ ಕವಿಯ ಮಾತಿನಲ್ಲಿ ಇದೆ._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩