📃ವೇದ- ಧರ್ಮ ಭಾಗ -೩
*ವೇದದ ದೇವತೆಗಳು*
ಮುಂದುವರೆದ ಭಾಗ- ಸವಿತೃ. ಸೂರ್ಯನನ್ನು ಹೃದ್ರೋಗವನ್ನು ಪರಿಹರಿಸು ಎಂದೂ ಸ್ತುತಿಸಿದೆ ವೇದ. *ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ* ಮಂತ್ರದಲ್ಲಿ. *ದ್ವಿಷಂತಂ ಮಮ ರಂಧಯನ್ ಮೋ ಅಹಂ ದ್ವಿಷತೇ ರಧಮ್* ಎಂಬ ಮಂತ್ರವಂತೂ ಸುಂದರವಾಗಿದೆ. ನನ್ನ ಶತ್ರುಗಳನ್ನು ಅಥವಾ ನನ್ನ ದ್ವೇಷಿಗಳನ್ನು ನಿಗ್ರಹಿಸು, ನಾನು ಕೂಡ ದ್ವೇಷ ಬಿಟ್ಟು ಪ್ರೀತಿ ಬೆಳೆಸಿಕೊಳ್ಳುವಂತೆ ಬುದ್ಧಿ ನೀಡು ಎಂಬ ಪ್ರಾರ್ಥನೆ. ಸೂರ್ಯ ನಮಸ್ಕಾರವಂತೂ ಸರ್ವಾಂಗೀಣ ಆರೋಗ್ಯದ ಸಾಧನ. ಮಂತ್ರ ಅಥವಾ ಶ್ಲೋಕಗಳನ್ನು ಅಥವಾ ಹೆಸರುಗಳನ್ನು ಹೇಳಿ ಮಾಡಿದಾಗ ದೇವನ ಕೃಪೆಗೆ ಕಾರಣವಾಗುತ್ತದೆ.
೩.ವಿಷ್ಣು. ಸ್ವರ್ಗದಲ್ಲಿನ ದೇವತೆ. ಹೆಸರೇ ಹೇಳುವಂತೆ ಸರ್ವವ್ಯಾಪಕ.ಆದಿದೇವ ಇವನು. *ಪೂರ್ವೋ ಯೋ ದೇವೇಭ್ಯೋ ಜಾತ:* ಎಂಬ ಪುರುಷಸೂಕ್ತದ ಉತ್ತರ ಭಾಗ ಇದನ್ನೇ ಹೇಳುತ್ತದೆ. ಸುಮಾರು ೫ ಸೂಕ್ತಗಳು ಇವನನ್ನು ಸ್ತುತಿಸಿವೆ. *ವಿಚಕ್ರಮಾಣಸ್ತ್ರೇಧೋರುಗಾಯ:* *ಯಸ್ಯೋರುಷು ತ್ರಿಷು ವಿಕ್ರಮಣೇಷು* *ಉರುಕ್ರಮಸ್ಯ ಸ ಹಿ ಬಂಧುರಿತ್ಥಾ* *ಸಧಸ್ಥಮೇಕೋ ತ್ರಿಭಿರಿತ್ಪದೇಭಿ:* *ತ್ರೀಣಿ ಪದಾ ವಿಚಕ್ರಮೇ* ಇತ್ಯಾದಿ ಮಂತ್ರಗಳಲ್ಲಿ ವಾಮನಾವತಾರದ ವರ್ಣನೆಯೊಂದೇ ಪ್ರಮುಖವಾಗಿ ಕಂಡುಬರುವುದು ವಿಶೇಷ. ತನ್ನ ಮೂರು ಕಾಲುಗಳಿಂದ ಲೋಕವ್ಯಾಪಿಯಾದ ಆ ವಿಷ್ಣುವು ನಮ್ಮನ್ನು ಹರಸಲಿ ಎಂಬ ಮಾತು ಸುಮಾರು ಹದಿನೈದು ಮಂತ್ರಗಳಲ್ಲಿ ಕಂಡುಬರುವುದು. ಇವನ ವಾಸ ಜೇನಿನ ಸರೋವರದಲ್ಲಿ, ಅಲ್ಲಿ ಸುಂದರವಾದ ಕೊಂಬುಗಳಿರುವ ಸಾವಿರಾರು ಗೋವುಗಳಿವೆ.ಹಾಗಾಗಿಯೇ ಗೋಪಾಲನೂ ಇವನೇ. ಈ ಧಾಮದ ಎಲ್ಲೆಡೆ ಕಣ್ಣುಕುಕ್ಕುವ ಪ್ರಕಾಶ ಕಂಡುಬರುತ್ತದೆ. ಪುಣ್ಯಾತ್ಮರು ಈ ಲೋಕವನ್ನು ಪ್ರವೇಶಿಸಲು ಬಯಸುತ್ತಾರೆ. ಸೂರ್ಯನ ಕ್ರಿಯಾಶೀಲ ರೂಪವನ್ನು ಪ್ರತಿನಿಧಿಸುವವನು ಇವನೇ. ಹಾಗಾಗಿಯೇ ಸೂರ್ಯ ನಾರಾಯಣ. ವೇದವು ಇವನನ್ನು ಇಂದ್ರನ ಮಿತ್ರನೆಂದೂ , ದೇವತೆಗಳ ರಕ್ಷಕನೆಂದೂ, ಉಪೇಂದ್ರನೆಂದೂ ಹೊಗಳಿದೆ. ಗರ್ಭರಕ್ಷಕನೆಂಬ ಬಿರುದು ಇವನಿಗಿದೆ. ಗರ್ಭಾಧಾನದ ಪ್ರಕರಣದಲ್ಲಿ ಉಳಿದ ದೇವತೆಗಳ ಜೊತೆಗೆ ಮುಖ್ಯ ಸ್ತುತಿ ವಿಷ್ಣುವಿನ ಕುರಿತಾಗಿದೆ. ಸರ್ವರ ರಕ್ಷಕ, ಉದಾರಿ ಇವನ ವಿಶೇಷಣಗಳು. ವಿಶ್ವದ ರಕ್ಷಣೆ ಹಾಗೂ ಪೋಷಣೆ ಇವನ ಹೊಣೆ. ಔರ್ಣನಾಭ ಎಂಬ ಮುನಿಯ ಮಾತಿನಂತೆ ಸೂರ್ಯನ ಮೂರು ಕಾಲದ ಮೂರು ಬಿಂಬಗಳು ವಿಷ್ಣುವಿನ ಮೂರು ಹೆಜ್ಜೆಗಳ ಪ್ರತೀಕಗಳು. ಹಾಗಾಗಿ ಮೂರು ಲೋಕಗಳು ಅವನ ಅಧೀನ. ಭಕ್ತರ ಕಾಮನೆಗಳನ್ನು ಬೇರೆಲ್ಲಾ ದೇವತೆಗಳಿಗಿಂತ ಮಿಗಿಲಾಗಿ ಪೂರೈಸುವವನು ಎಂಬುದಾಗಿಯೂ ಸ್ತುತಿಸಿದೆ ವೇದ.ವಿಶ್ವವನ್ನೇ ಅಳೆದವನು ವಿಷ್ಣು. ವಿಷ್ಣುವು ಅಗಲವಾದ ಕಾಲುಗಳಿಂದ ದಾಪುಗಾಲು ಹಾಕುತ್ತಾ ಭೂಮಿಯಲ್ಲಿನ ಜೀವಿಗಳಿಗೆ ಸಮೃದ್ಧಿ ಕೊಡಿಸಿದ ಎಂದೆಲ್ಲ ಸ್ತುತಿಸುತ್ತದೆ ವೇದ. ವಿಷ್ಣುವಿನ ಮೂರನೇ ಹೆಜ್ಜೆಯೇ ಪರಮಪದ.ಅದು ಸಾಮಾನ್ಯರಿಗೆ ನಿಲುಕದು.ಜ್ಞಾನಿಗಳಿಗೆ ಯೋಗಿಗಳಿಗೆ ಮಾತ್ರ ಆ ಪದ ಕಾಣುವುದು. *ವೀಷ್ಣೋರ್ನುಕಂ ವೀರ್ಯಾಣಿ ಪ್ರವೋಚಂ* *ಪ್ರತದ್ವಿಷ್ಣುಸ್ತವತೇ ವೀರ್ಯಾಯ* ಇತ್ಯಾದಿ ಮಂತ್ರಗಳು ಶಕ್ತಿ ಕೊಡುವಂತೆ ದೇವನನ್ನು ಸ್ತುತಿಸುತ್ತವೆ. ದೇಹಶಕ್ತಿ ಬುದ್ಧಿಶಕ್ತಿ ವಿಷ್ಣುವಿನ ಅನುಗ್ರಹದಿಂದ ವೃದ್ಧಿಸುತ್ತದೆ. *ಯ: ಪಾರ್ಥಿವಾನಿ ವಿಮಮೇ ರಜಾಂಸಿ* ಪಾರ್ಥಿವ ವಸ್ತುಗಳನ್ನು ಅಂದರೆ ಈ ಜೀವ- ಜಡ ವಸ್ತುಗಳನ್ನು ರಜೋಗುಣವನ್ನು ಆಶ್ರಯಿಸಿ ಸೃಷ್ಟಿಸಿದನು ಈ ವಿಷ್ಣು. ಅವನ ತಲೆಗಳು ಕೈಗಳು ಕಣ್ಣುಗಳು ಎಲ್ಲವೂ ಅಸಂಖ್ಯಾತ. ಸಾವಿರ ಅನ್ನುವ ಸಂಖ್ಯೆ ಒಂದು ಸಂಕೇತ. ನಕ್ಷತ್ರಗಳ ಗಣನೆಯಂತೆ ದೇವರ ಸಾಮರ್ಥ್ಯ ಸ್ವರೂಪ ಕಲ್ಪನಾತೀತ. *ಸಹಸ್ರಶೀರ್ಷಾ ಪುರುಷ:, ಸಹಸ್ರಾಕ್ಷ: ಸಹಸ್ರಪಾತ್* *ವಿಶ್ವಾಕ್ಷಂ ವಿಶ್ವಶಂಭುವಮ್* ಇತ್ಯಾದಿ ಮಂತ್ರಗಳು ಇದನ್ನೇ ಸಾರುತ್ತವೆ. ಮೋಕ್ಷ ಕೊಡುವ ದೇವನಿವನು. *ವಿಷ್ಣೋ ತ್ವಂ ನೋ ಅಂತಮ ಶರ್ಮ ಯಚ್ಛ* ಕೊನೆಯ ಪದವಿ ಅಥವಾ ಪರಮ ಸುಖ ನೀಡು.ಜನ್ಮ ಮರಣ ಚಕ್ರದಿಂದ ಬಿಡುಗಡೆ ಕೊಡಿಸು ಎಂಬ ಪ್ರಾರ್ಥನೆ.ಇದನ್ನೇ ಹೇಳುತ್ತದೆ ಈ ಮಂತ್ರವೂ - *ತಮೇವಂ ವಿದ್ವಾನಮೃತ ಇಹ ಭವತಿ*. ದೇವತೆಗಳ ಪುರೋಹಿತನಿವನು.ದೇವತೆಗಳ ಪುರಕ್ಕೆ ಅಹಿತವಾದಾಗಲೆಲ್ಲ ರಾಕ್ಷಸರ ಮದವನ್ನು ದಮನ ಮಾಡುವ ದೇವ. *ಯೋ ದೇವಾನಾಂ ಪುರೋಹಿತ:* ಪುರೋಹಿತನ ಕೆಲಸವೂ ಇದೇ ಆಗಿದೆ.ಜನರ ಕಷ್ಟಗಳಿಗೆ ಸ್ಪಂದಿಸಿ ಜ್ಞಾನ ಪ್ರಸಾರದಿಂದ ಅವರನ್ನು ಉದ್ಧರಿಸುವವ ನಿಜವಾದ ಪುರೋಹಿತ. *ಹ್ರೀಶ್ಚತೇ ಲಕ್ಷ್ಮೀಶ್ಚ ಪತ್ನ್ಯೌ*ಎಂಬ ಮಂತ್ರದಂತೆ ಇಬ್ಬರು ಹ್ರೀ ಮತ್ತು ಶ್ರೀ ಯರು ಮಡದಿಯರು.ನಾವು ಭೂ ಹಾಗೂ ಶ್ರೀಯೆಂದು ಈಗ ಕರೆಯುವುದು ಇವರನ್ನೇ ಇರಬಹುದು. ಇವನ ದೇಹದ ಅಂಗಾಂಗಗಳಿಂದ ನಾನಾ ದೇವತೆಗಳು, ನಾಲ್ಕು ವರ್ಣದ ಜನರೂ, ಆಕಾಶ - ಭೂಮಿಗಳೂ , ಯಜ್ಞ ಯಾಗಾದಿಗಳೂ , ದ್ರವ್ಯಗಳೂ , ಸೂರ್ಯ ಚಂದ್ರರೂ ಜನಿಸಿದರು ಎನ್ನುತ್ತದೆ ಪುರುಷಸೂಕ್ತ.
೪. ಇಂದ್ರ. ಇದಿ ಪರಮೈಶ್ವರ್ಯೇ ಧಾತುವಿನಿಂದ ಹುಟ್ಟಿದ ಶಬ್ದ. ಮಹಾನ್ ಶ್ರೀಮಂತ ಎಂಬ ಮೇಲ್ನೋಟದ ಅರ್ಥ. ಗುಣಗಳನ್ನು, ಕರ್ತವ್ಯನಿಷ್ಠೆಯನ್ನೂ , ಭಗವಂತನಲ್ಲಿ ಭಕ್ತಿಯನ್ನೂ ,ಅತುಲ ಪರಾಕ್ರಮವನ್ನೂ ಹೊಂದಿದ ವಿಶಿಷ್ಟ ವ್ಯಕ್ತಿ. ಅಂತರಿಕ್ಷದ ದೇವತೆ. ಋಗ್ವೇದ ಇವನನ್ನು ಮಾತ್ರ ೨೫೦ ಕ್ಕಿಂತಲೂ ಹೆಚ್ಚು ಸೂಕ್ತಗಳಲ್ಲಿ ಕೊಂಡಾಡಿದೆ. ರಾಜರಿಗೆಲ್ಲಾ ಇಂದ್ರನ ಆಡಳಿತ ಮಾದರಿ. ರಾಜರಿಗಿವನು ಆದರ್ಶ ಪುರುಷ. ಕೆಲವು ಸೂಕ್ತಗಳಲ್ಲಿ ಪೂರ್ಣವಾಗಿ ಕೆಲವೆಡೆ ಜಂಟಿಯಾಗಿ ಇವನ ಸ್ತೋತ್ರ ಮಂತ್ರಗಳಲ್ಲಿದೆ. ಇವನ ಆಯುಧ ವಜ್ರ. ಹಾಗಾಗಿಯೇ ವಜ್ರಿನ್ , ವಜ್ರಬಾಹು ಇತ್ಯಾದಿ ಹೆಸರುಗಳು. ಸೋಮರಸದಿಂದ ತುಂಬಿರುವ ದೊಟ್ಟಹೊಟ್ಟೆಯವ ಇವನು. ಸೋಮರಸ ಇವನಿಗೆ ಅತ್ಯಂತ ಪ್ರಿಯ. ದೇವತೆಗಳ ನಿಯಾಮಕ. ತುಟಿಗಳು ಬಹಳ ಸುಂದರ. ಸುಶಿಪ್ರ ಎಂಬ ಹೆಸರು ಈ ಕಾರಣದಿಂದ ಇವನಿಗೆ ಬಂದಿದೆ. ಮನೋವೇಗದಿಂದ ಚಲಿಸುವ ಹಸಿರು ಅಶ್ವಗಳು ಇವನ ರಥಕ್ಕೆ ಜೋಡಿಸಲ್ಪಟ್ಟಿವೆ.ಶತ್ರುನಾಶಕ್ಕೆ ಇಂದ್ರನ ಸ್ತೋತ್ರ ಪ್ರಮುಖವಾದುದು. ಅಗ್ನಿಯಂತೆ ಇವನೂ ಕೂಡ ವಿರಾಟ್ ಪುರುಷನ ಮುಖದಿಂದ ಜನಿಸಿದವನು. *ಮುಖಾದಿಂದ್ರಶ್ಚಾಗ್ನಿಶ್ಚ* ಅಸುರರ ವಿನಾಶಕ, ಮರುತ್ ದೇವತೆಗಳ ಮಿತ್ರ. ಹಾಗಾಗಿಯೇ ಮರುತ್ಥಾನ, ಮರುತ್ಸಖಾ ಇತ್ಯಾದಿ ಹೆಸರು. ಇವನು ಚಲಿಸುತ್ತಿರುವ ಪರ್ವತಗಳನ್ನು ಸ್ಥಿರವಾಗಿಸಿ ನಡುಗುವ ಭೂಮಿಯನ್ನು ದೃಢವಾಗಿಸಿದನು. ಇವನ ಮಹತ್ವದ ಕಾರ್ಯ ವೃತ್ರನ ವಧೆ. ಸರಸ್ವತಿಯು ಯಜ್ಞದಲ್ಲಿ ಇಂದ್ರಶತ್ರುರ್ವಧಯಸ್ವ ಎನ್ನುವಲ್ಲಿ ಸ್ವರವ್ಯತ್ಯಾಸ ಮಾಡಿಸಿ ಇಂದ್ರನನ್ನು ಕೊಲ್ಲುವ ಬದಲು ಇಂದ್ರನಿಂದ ಕೊಲ್ಲಲ್ಲಡುವ ವ್ಯಕ್ತಿ ಹುಟ್ಟುವನು.ವೇದ ಈ ಕಥೆ ಹೇಳಿದೆ. *ತ್ವಷ್ಟಾ ಹತಪುತ್ರೋವೀಂದ್ರಗ್ಂ* ಇತ್ಯಾದಿ ಅನುವಾಕಗಳಲ್ಲಿ ಈ ಕಥನದ ಸುಂದರ ನಿರೂಪಣೆ ಇದೆ. ಹೀಗಾಗಿ ಮಂತ್ರಗಳನ್ನು ಉಚ್ಚರಿಸುವಾಗ ತುಂಬಾ ಜಾಗರೂಕತೆ ಅವಶ್ಯಕ. ಸ್ವರ ಹೆಚ್ಚು ಕಡಿಮೆ ಆದರೆ ಸಂಪತ್ತು ಸಿಗುವ ಬದಲು ನಷ್ಟವಾಗಬಹುದು.ಮಕ್ಕಳು ಜನಿಸುವ ಬದಲು ಇರುವ ಮಕ್ಕಳು ಸಾಯಬಹುದು. ಮಂತ್ರಗಳ ಪಠನೆ ಹೇಗಿರಬೇಕೆಂದರೆ ಹುಲಿಯು ತನ್ನ ಮರಿಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದರೂ ಅದಕ್ಕೆ ಎಳ್ಳಷ್ಟೂ ನೋವಾಗದಂತೆ ನೋಡಿಕೊಳ್ಳುವುದೋ ಹಾಗೆಯೇ ಪಠಿಸುವ ಮಂತ್ರಗಳು ಬಾಯಿಯಲ್ಲಿ ಸಾವಕಾಶವಾಗಿ ಸ್ವರಸಹಿತ ಸ್ಪಷ್ಟತೆಯಿಂದ ಉಚ್ಚರಿತವಾಗಬೇಕು.ಆಗ ಮಾತ್ರ ಬಯಸಿದ ಫಲ ದೊರಕುವುದು.ಇಲ್ಲದಿದ್ದರೆ ಸಮಯ ಶ್ರಮ ವ್ಯರ್ಥವಷ್ಟೇ ಹೊರತು ಇನ್ನೇನಲ್ಲ. ಪಣಿ ಹೆಸರಿನ ದುಷ್ಟರನ್ನು ವಧಿಸಿ ಅಕ್ರಮವಾಗಿ ಕೂಡಿಟ್ಟ ಗೋವುಗಳನ್ನು ಬಂಧಮುಕ್ತಿಗೊಳಿಸಿದನು. *ಯೋ ಸೂರ್ಯ ಉಷಸಂ ಜಜಾನ* ಎಂಬ ಮಂತ್ರದಂತೆ ಸೂರ್ಯ ಹಾಗೂ ಉಷಾದೇವಿಯರ ಹುಟ್ಟಿಗೆ ಇವನೇ ಕಾರಣ. ಪರಾಕ್ರಮಕ್ಕೆ ಸಂಬಂಧಿಸಿದ ಕಥೆಗಳೆಲ್ಲ ಇಂದ್ರನದೇ ಆಗಿವೆ. ಯುದ್ದದಲ್ಲಿ ಎರಡೂ ಕಡೆಯ ಸೈನಿಕರು ಏಕಕಾಲದಲ್ಲಿ ಮೊದಲು ಇವನನ್ನು ಸ್ತುತಿಸಿ ಯುದ್ಧಕ್ಕೆ ತೊಡಗುತ್ತಿದ್ದರು. ಅವನ ಅನುಗ್ರಹವಿದ್ದವರು ವಿಜಯಿಯಾಗುತ್ತಿದ್ದರು. ಶತ್ರುಗಳ ಪುರವನ್ನು ಧ್ವಂಸ ಮಾಡಿ ಪುರಂದರನೆನಿಸಿದನು. ಸೋಮಪಾ, ಹರಿಕೇಶ, ಪುರುಹೂತ, ಧನಂಜಯ, ಆಖಂಡಲ ಮುಂತಾದ ಅನೇಕ ಹೆಸರುಗಳಿವೆ ಇವನಿಗೆ. *ಇಂದವೇ ದ್ರವತಿ* *ಇಂದೌ ರಮತೇ* *ಇತ್ = ಶತ್ರೂಣಾಂ ದಾರಯಿತಾ* *ಇರಾಂ ದದಾತಿ* *ಇರಾಂ ಧಾರಯತೇ* ಇತ್ಯಾದಿ ವ್ಯುತ್ಪತ್ತಿಗಳಿಂದ ಐಶ್ವರ್ಯ ಕರುಣಿಸುವವನು, ಪರಾಕ್ರಮ ಉಂಟುಮಾಡುವವನು, ಶತ್ರುಗಳನ್ನು ತರಿಯುವವನು, ಯುದ್ಧ ಮಾಡುತ್ತಾ ಆನಂದಿಸುವವನು, ಭಕ್ತರಿಗೆ ಒಲಿಯುವವನು ಹೀಗೆ ಇಂದ್ರ ಶಬ್ದಕ್ಕೆ ಸೂಕ್ತಕ್ಕನುಗುಣವಾಗಿ ನಾನಾ ಅರ್ಥ ಹೇಳಬಹುದು. ಸಂಪತ್ತಿನ ಒಡೆಯನಿವನು. ಪೂರ್ವದಿಕ್ಕಿನ ಪ್ರಭು. ಜಯಂತ ಋಷಭ ಮೀಢ್ವ ಎಂಬ ಮೂವರು ಮಕ್ಕಳು. ಇಂದ್ರನ ವರ್ಣನೆ ವೇದಗಳಲ್ಲಿ ಎಷ್ಟಿದೆಯೆಂದರೆ ಸುಮಾರು ಐವತ್ತು ಪುಟಗಳಷ್ಟಾಗಬಹುದು. ಇಂದ್ರಿಯಗಳ ಬಯಕೆಗಳಂತೆ ಅವು ಮುಗಿಯುವ ಸರಕಲ್ಲ. ಇಂದ್ರಿಯಗಳ ಅಭಿಮಾನಿ ಇಂದ್ರನ ಪ್ರಾರ್ಥನೆಯಿಂದ ನಾವೂ ಅವುಗಳ ನಿಯಂತ್ರಣ ಸಾಧಿಸಿ ಉನ್ನತಿಯನ್ನು ಹೊಂದಬಹುದು.ಅರ್ಜುನ ಈ ಕಾರಣದಿಂದಲೇ ಮೊದಲಿಗೆ ಇಂದ್ರನನ್ನು ಪ್ರೀತಿಗೊಳಿಸಿ ಜಿತೇಂದ್ರಿಯನಾಗಿ ಶಿವನ ತಪಸ್ಸು ಮಾಡಿದ. ಮುಂದುವರೆಯುವುದು. . .
📙ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ