📃ವೇದ-ಧರ್ಮ ಭಾಗ-೨
_ವೇದದ ದೇವತೆಗಳು_
ನಮ್ಮ ಹಿರಿಯರು ಒಂದೊಂದು ಕ್ರಿಯೆಗೆ ಸಂಬಂಧಪಟ್ಟಂತೆ ಮೂಲಶಕ್ತಿಯನ್ನು ಅಥವಾ ಕಾರಣಶಕ್ತಿಯನ್ನು ದೇವತೆಗಳ ರೂಪದಲ್ಲಿ ಪ್ರತಿಪಾದಿಸಿದರು. ದೇವತೆಗಳ ರೂಪ ಸಾಕಾರವೂ ಹೌದು ನಿರಾಕಾರವೂ ಹೌದು. ನಮ್ಮ ಮನದಲ್ಲಿ ಧ್ಯಾನಕಾಲದಲ್ಲಿ ಜ್ಯೋತಿಯೊಂದು ಮೂಡಿದರೆ ಅದೇ ದೇವರ ರೂಪ. ಪ್ರಕೃತಿಯ ಪರಿಣಾಮಗಳಲ್ಲೂ ಅದನ್ನೇ ಕಾಣಬಹುದು.ಅದಕ್ಕೆ ನಮ್ಮ ರೂಪವನ್ನು ಕಲ್ಪಿಸಿಕೊಂಡಾಗ ಅಂದರೆ ಸ್ತ್ರೀ ಅಥವಾ ಪುರುಷನ ಆಕಾರ ಕಲ್ಪಿಸಿದಾಗ ಅದು ಮೂರ್ತಿ ಅಥವಾ ವಿಗ್ರಹರೂಪದಲ್ಲಿ ಗೋಚರಿಸುತ್ತದೆ. *ದಾನಾತ್, ದ್ಯೋತನಾತ್, ದೀಪನಾತ್ ವಾ ದೇವತಾ* ಎಂದು ಪದದ ನಿಷ್ಪತ್ತಿ. ನಮಗೆ ಬೆಳಕು ತೋರುವ ಅಥವಾ ನಮ್ಮ ಅಗತ್ಯಗಳನ್ನು ಕರುಣಿಸುವ ಶಕ್ತಿ, ಅಥವಾ ಸ್ವತ: ಬೆಳಗುವ ಶಕ್ತಿ ಹೀಗೆ ಅರ್ಥ ಹೇಳಬಹುದು. ಒಟ್ಟಾರೆ ಯಾವುದೇ ಅಪೇಕ್ಷೆ ಇಲ್ಲದೆ ಅನುಗ್ರಹಿಸುವ ಒಂದು ಅಲೌಕಿಕ ಶಕ್ತಿಯೇ ದೇವತೆ. ಹಾಗಾದರೆ ಹೋಮ ಪೂಜೆ ಅರ್ಚನೆ ಅಲಂಕಾರ ಅಭಿಷೇಕ ಅವೆಲ್ಲವೂ ಯಾಕೆ ಎಂದಾಗ ಅವೆಲ್ಲ ನಮ್ಮ ಮನಸ್ಸಂತೋಷಕ್ಕೆ ,ಭಗವಂತನಿಗೆ ಕೃತಜ್ಞತೆ ತಿಳಿಸುವ ಕ್ರಮಗಳಷ್ಟೇ ಅವುಗಳು. ದೇವ ಶಬ್ದಕ್ಕೆ ಸ್ವಾರ್ಥದಲ್ಲಿ *ತತ್* ಪ್ರತ್ಯಯ ಬಂದಿದೆ. ಆರಾಧಿಸಲ್ಪಡುವ ಮೂರ್ತಿ ಎಂದು ಅರ್ಥ. *ದೀವ್ಯತಿ* ಮಂತ್ರೇಣ ದ್ಯೋತ್ಯತೇ ಮಂತ್ರದಿಂದ ಕಾಣಿಸಲ್ಪಡುವುದು ಅಥವಾ ಸ್ತುತಿಸಲ್ಪಡುವುದು. *ದೇವನಾದ್ವೈ ದೇವತಾತ್ವಂ* ಸಾನ್ನಿಧ್ಯ ಹೊಂದುವುದರಿಂದ ದೇವತೆಯೆಂದೂ ಕರೆಸಲ್ಪಡುತ್ತದೆ. ಮಂತ್ರದ ಆಕಾರವನ್ನು ಪಡೆಯುವುದು ದೇವತಾತ್ವವೇ *ಯಸ್ಯ ಯಸ್ಯ ತು ಮಂತ್ರಸ್ಯ ಉದ್ದಿಷ್ಟಾ ದೇವತಾ ತು ಯಾ ತದಾಕಾರಂ ಭವೇತ್ತಸ್ಯ ದೇವತ್ವಂ ದೇವತೋಚ್ಯತೇ*. ವೇದದ ದೇವತೆಗಳು ಸುಮಾರು ೩೩ ಪ್ರಸಿದ್ಧ ಆಗಿವೆ. ಇದನ್ನೇ ೩೩ ತತ್ವಗಳೆಂದೂ ,ಇವುಗಳ ಪ್ರಾಕೃತಿಕ ರೂಪವೇ ೩೩ ಕೋಟಿ ಸಂಖ್ಯೆಯಲ್ಲಿ ಇರುವುದೆಂದೂ ಜ್ಞಾನಿಗಳ ಅಭಿಪ್ರಾಯ. ಮುಖ್ಯವಾಗಿ ವೈದಿಕ ದೇವತೆಗಳು ಮೂರು.ಅಗ್ನಿ- ವಾಯು- ಆದಿತ್ಯ. ಇದನ್ನೇ ಸ್ಥೂಲವಾಗಿ ನೋಡಿದಾಗ ಹಿಂದಿನ ಜನರ ಪ್ರಕೃತಿ ಪೂಜೆ ಗೋಚರಿಸುತ್ತದೆ. ಪ್ರಕೃತಿಯ ಮೂರು ಮುಖ್ಯ ತತ್ವಗಳಾದ ಗಾಳಿ ಬೆಳಕು ಬೆಂಕಿ ಇವುಗಳೇ ಅವು. ಋಗ್ವೇದದ ಮಾತಿನಂತೆ ಭೂಮಿಗೆ ಸಂಬಂಧಿಸಿದ ೧೧ ದೇವತೆಗಳು, ಅಂತರಿಕ್ಷಕ್ಕೆ ಸಂಬಂಧಿಸಿದ ೧೧ ದೇವತೆಗಳು, ಸ್ವರ್ಗಕ್ಕೆ ಸಂಬಂಧಿಸಿದ ೧೧ ದೇವತೆಗಳು ಸೇರಿ ೩೩ ಆಗುತ್ತವೆ. ಅಷ್ಟ ವಸುಗಳು , ಏಕಾದಶ ರುದ್ರರು, ದ್ವಾದಶ ಆದಿತ್ಯರು, ಇಂದ್ರ ಹಾಗೂ ಪ್ರಜಾಪತಿ ಸೇರಿ ಆ ಸಂಖ್ಯೆ ಸಿಗುತ್ತದೆ. ೩೩ ಕೋಟಿ ಎಂಬ ಸಂಖ್ಯೆಯು ಪ್ರಕೃತಿಯ ಪ್ರತಿಯೊಂದು ಅಂಶದಲ್ಲಿಯೂ ದೇವರನ್ನು ಕಾಣು ಗೌರವಿಸು ಎನ್ನುವ ಸುಂದರ ಸಂದೇಶವನ್ನು ಬಿಂಬಿಸುತ್ತದೆ.ನಮ್ಮ ದೇವತೆಗಳು ನಮಗೇ ಗೊತ್ತಿಲ್ಲವೆಂದು ವಿಡಂಬನೆ ಮಾಡುವುದಕ್ಕಲ್ಲ ವೇದವಚನಗಳು ಹೇಳಿದ್ದು, ಹೊರತು ಎಲ್ಲೆಡೆ ಭಗವಂತನನ್ನು ಕಾಣು ಎಂಬ ಅರ್ಥದಲ್ಲಿ. ಯಜ್ಞವೆಂದರೆ ಇಂಗ್ಲೀಷಿನ sacrifice ಎಂಬ ಅರ್ಥ ಸರಿಯಾಗುತ್ತದೆ.ನೀವು ಮಾಡುವ ಕರ್ಮಗಳನ್ನೆಲ್ಲ ದೇವರಿಗೆ ತ್ಯಾಗ ಮಾಡಿದರೆ ಅವೆಲ್ಲವೂ ಯಜ್ಞವೇ ಆಗುತ್ತದೆ.ಊಟ ನಿದ್ದೆ ಹಾಡು ಕೆಲಸ ಎಲ್ಲವನ್ನೂ ದೇವರಿಗೆ ಅರ್ಪಣೆ ಮಾಡಿದಾಗ ಮಾತ್ರ ನಿಜವಾದ ಯಜ್ಞವಾಗುವುದೇ ಹೊರತು ಸುಮ್ಮನೆ ದುಡ್ಡು ಖರ್ಚು ಮಾಡಿದಾಗ ಅಲ್ಲ.
ವೇದದ ದೇವತೆಗಳಲ್ಲಿ ಮೊದಲನೆಯವನು ಅಗ್ನಿ. ನಾವು ಆಹಾರ ಬೇಯಿಸಲು, ತಿಂದ ಆಹಾರ ಕರಗಿಸಲು, ದೇಹದ ಸ್ಥಿತಿ ಸಮವಾಗಿರಲು ತ್ರಿದೋಷಗಳ ಬಾಧೆಗೆ ಒಳಪಡದಂತೆ ಮಾಡಲು ಎಲ್ಲದಕ್ಕೂ ಅಗ್ನಿ ಕಾರಣ. *ಅಗ್ರ್ಯಂ ಜನ್ಮ ಪ್ರಾಪಯಂತಿ* ಮುಂದಿನ ಜನ್ಮ ಕೊಡಿಸುತ್ತಾನೆ ಸನ್ಮಾರ್ಗದಲ್ಲಿ ನಡೆಸುವ ಮೂಲಕ ಉದ್ಧರಿಸುತ್ತಾನೆ ಎಂಬ ಅರ್ಥ. ಧರ್ಮದೇವತೆಯ ಪುತ್ರನಿವನು. ಅವನ ಮಡದಿ ಸ್ವಾಹಾದೇವಿ. *ಅಂಗತಿ* ಚಲನೆಯಿರುವಂತಹದ್ದು ಎಂಬ ಇನ್ನೊಂದು ಅರ್ಥವೂ ಇದೆ. ಇದರ ಪ್ರಕಾರ ಗತಿಯನ್ನು ಕೊಡಿಸುವವನು ಎಂಬ ಅರ್ಥ. ಪಂಚಭೂತಗಳಲ್ಲಿ ಮೂರನೆಯವನು. ತೇಜಸ್ಸಿಗೂ ಅದರ ಅಭಿಮಾನಿಗೂ ಒಂದೇ ಹೆಸರು ಅಗ್ನಿ. ಅಗ್ನಿಯಿಂದಲೇ ನೀರು ಹುಟ್ಟಿತು ಎನ್ನುತ್ತದೆ ತೈತ್ತಿರೀಯ ಉಪನಿಷತ್ತು.(ಅಗ್ನೇರಾಪ:) ಯಜುರ್ವೇದದಲ್ಲಿ ಇವನ ತಮ್ಮಂದಿರ ಕಥೆ ಬರುತ್ತದೆ. ಇವನ ತಮ್ಮಂದಿರಿಗೆ ಹವಿಸ್ಸು ಸಿಗದಿದ್ದಾಗ ಮುಷ್ಕರ ಹೂಡಿ ಕುಂಡದ ಮೇಖಲೆಯ ಮೇಲೆ ಬಿದ್ದ ದ್ರವ್ಯ ಅವರಿಗೆಂದು ನಿಗದಿಯಾಯಿತು.( ಅಗ್ನೇಸ್ತ್ರಯೋ ಜ್ಯಾಯಾಗ್ಂಸೋ ಭ್ರಾತ ರ ಆಸನ್ - ತೈ ಸಂಹಿತೆ) ಹಾಗಾಗಿಯೇ ಯಜ್ಞದಲ್ಲಿ ಕುಂಡದ ಹೊರಗೆ ಬಿದ್ದ ದ್ರವ್ಯ ಮತ್ತೆ ಹಾಕದೆ ಬೇರೆ ಅಹುತಿ ಕೊಡಬೇಕು ಎಂಬ ನಿಯಮ. ನಮ್ಮ ತಟ್ಟೆಗಾದರೂ ಹೋದಲ್ಲಿ ಹೀಗೆ ಮಾಡಿದರೆ ಸಹಿಸುತ್ತೇವೆಯೇ! ಕೃತ್ತಿಕಾ ನಕ್ಷತ್ರದ ಅಭಿಮಾನಿ ದೇವತೆ. ( ಅಗ್ನಿರ್ನ: ಪಾತು ಕೃತ್ತಿಕಾ: ಯಜು ಬ್ರಾಹ್ಮಣ) ಕಷ್ಟಗಳೆಂಬ ಸಮುದ್ರದಿಂದ ನಾವೆಯಂತೆ ನಮ್ಮನ್ನು ದಾಟಿಸಲಿ ಅಗ್ನಿ ಎಂದು ಸ್ತುತಿಸುತ್ತದೆ ವೇದ. ( ನಾವೇವ ಸಿಂಧುಂ ದುರಿತಾತ್ಯಗ್ನಿ:) ಋಗ್ವೇದದ ಮೊದಲ ಮಂತ್ರವೇ ಇವನನ್ನು ಸ್ತುತಿಸುತ್ತದೆ. *ಅಗ್ನಿಮೀಳೇ ಪುರೋಹಿತಂ* ಅಗ್ನಿಯನ್ನು ನನ್ನ ಉದ್ಧಾರಕನೆಂದು ಪರಿಗಣಿಸುತ್ತೇನೆ. *ಅಗ್ನೇ ನಯ ಸುಪಥಾ ಅಸ್ಮಾನ್* ಎಂಬ ಮಂತ್ರವು ನಮ್ಮನ್ನು ಸರಿದಾರಿಯಲ್ಲಿ ಕೊಂಡೊಯ್ಯುವಂತೆ ಅಗ್ನಿಯನ್ನು ಪ್ರಾರ್ಥಿಸುತ್ತದೆ. *ಅಗ್ನೇ ತ್ವಂ ಪಾರಯಾ*ಅಗ್ನಿಯೇ ನಮ್ಮನ್ನು ವಿಪತ್ತುಗಳಿಂದ ರಕ್ಷಿಸು ಎಂಬ ಮಂತ್ರವೂ ಇದೆ. ಇವನ ಮಕ್ಕಳು ಮೂವರು ಪಾವಕ, ಪವಮಾನ, ಶುಚಿ.ಇವನ ವಾಹನ ಟಗರು. ಆರು ಕಣ್ಣುಗಳು ಇವನಿಗೆ. ಯಜ್ಞದ ಪಾತ್ರಗಳಾದ ಸೌಟು ದರ್ವೀ ಬೀಸಣಿಗೆ ಇತ್ಯಾದಿ ಏಳು ಕೈಗಳಲ್ಲಿ ಧರಿಸಿದ್ದಾನೆ. ವೇದದಲ್ಲಿಯೇ ಇವನ ವರ್ಣನೆ ಸಾಕಷ್ಟು ಸೂಕ್ತಗಳಲ್ಲಿದೆ. *ಚತ್ವಾರಿ ಶೃಂಗಾ* ಎಂಬ ಮಂತ್ರದಲ್ಲಿ ನಾಲ್ಕು ಕೋಡುಗಳು , ಮೂರು ಕಾಲುಗಳು, ಎರಡು ತಲೆಗಳು, ಏಳು ಕೈಗಳು ಹೊಂದಿರುವ ವಿಚಿತ್ರ ರೂಪದ ವರ್ಣನೆ ಇದೆ. ದೇವತೆಗಳ ರೂಪ ಕಲ್ಪನೆಗೆ ಸುಲಭಕ್ಕೆ ನಿಲುಕದು ನಮ್ಮ ತಪ್ಪುಗಳಂತೆ. ಋಗ್ವೇದದಲ್ಲಿ ಅಗ್ನಿಗೆ ಸಂಬಂಧಿಸಿದ ೨೦೦ ಸೂಕ್ತಗಳಿವೆ. ಹೆಚ್ಚಾಗಿ ಪ್ರತಿಯೊಂದು ಮಂಡಲದ ಆರಂಭದ ಸೂಕ್ತ ಯಜ್ಞಕ್ಕೆ ಸಂಬಂಧಿಸಿದ್ದರಿಂದ ಇವನ ಸೂಕ್ತವೇ ಆಗಿದೆ. ( ಸೂಕ್ತ- ಸುಷ್ಟು ಉಕ್ತಂ ಸರಿಯಾದ ಮಾತು. ಸುಮ್ಮನೆ ಹೇಳಿದ್ದಲ್ಲ.) ಇವನ ಶರೀರ ತುಪ್ಪದ್ದೇ ಆಗಿದೆ. ಘೃತಮಯ, ಘೃತಚಕ್ಷು, ಪುರೋಹಿತ, ವಿಶ್ಪತಿ, ಗೃಹಪತಿ ಇತ್ಯಾದಿ ನೂರಕ್ಕೂ ಹೆಚ್ಚು ಹೆಸರುಗಳಿವೆ. ಬಂಗಾರದಂತೆ ಹೊಳೆಯುವವನು. ( ಬಂಗಾರ ತೇಜಸ್ಸಿನ ಒಂದು ರೂಪವೆಂದು ತಾರ್ಕಿಕರ ಮತ) ದಿನಕ್ಕೆ ಮೂರು ಬಾರಿ ಭೋಜನ ಸ್ವೀಕರಿಸುವನು ಇತ್ಯಾದಿ ವರ್ಣನೆ ಇದೆ. ( ದಕ್ಷಿಣಾಗ್ನಿ, ಆಹವನೀಯಾಗ್ನಿ, ಗಾರ್ಹಪತ್ಯಾಗ್ನಿ ಎಂಬ ಮೂರು ರೂಪದಲ್ಲಿ) ಇದು ನಾವು ಮೂರು ಸಲ ದೇವನಿಗೆ ಅರ್ಪಣೆ ಮಾಡಿಯೇ ತಿನ್ನಬೇಕು ಎನ್ನುವುದನ್ನೂ ಸಂಕೇತಿಸುತ್ತದೆ.ಸಮರ್ಪಣೆ ಇಲ್ಲದಿದ್ದಾಗ ಅಥವಾ ಮೂರಕ್ಕಿಂತ ಹೆಚ್ಚು ಬಾರಿ ತಿಂದಾಗ ಅಗ್ನಿ ಕೆಲಸ ಮಾಡದೇ ರೋಗಗಳು ಆಕ್ರಮಿಸುತ್ತವೆ. ಯಜ್ಞಗಳಲ್ಲಿ ಹೇಗೆ ಇಷ್ಟೇ ಸಂಖ್ಯೆಯ ಆಹುತಿ ನೀಡುವೆವೋ ಹಾಗೆಯೇ ದೇಹಕ್ಕೆ ಅಗತ್ಯವಿರುವಷ್ಟೇ ಆಹುತಿ ಅನ್ನಯಜ್ಞದ ಮೂಲಕ ಆಗಬೇಕು. ಅನಗತ್ಯವಾದಷ್ಟೂ ಹೊಗೆ ಜಾಸ್ತಿ. *ಅಗ್ನಿಮುಖಾವೈ ದೇವಾ:* ದೇವತೆಗಳ ಪಾಲಿನ ಹವಿಸ್ಸನ್ನು ತಲುಪಿಸುವ ದೇವದೂತ. *ಸ ನ: ಪಿತೇವ ಸೂನವೇಗ್ನೇ* ಎಂಬ ಮಂತ್ರದಂತೆ ತಂದೆಯಂತೆ ತನ್ನ ಭಕ್ತರನ್ನು ಮಕ್ಕಳೆಂದು ತಿಳಿದು ಪಾಲಿಸುತ್ತಾನೆ. ಸ್ವರ್ಗದಿಂದ ಜನಿಸಿದ ವೀರನಿವನು. ಪರಮಪುರುಷನ ಮುಖದಿಂದ ಹುಟ್ಟಿದವನು. ( ಮುಖಾದಿಂದ್ರಶ್ಚಾಗ್ನಿಶ್ಚ - ಪುರುಷ ಸೂಕ್ತ ) .
*ಎರಡನೆಯ ಮುಖ್ಯ ದೇವತೆ ಸವಿತೃ.*
ಸ್ವರ್ಗದಲ್ಲಿ ಇರುವ ದೇವ. ೧೧ ಸೂಕ್ತಗಳಲ್ಲಿ ಋಗ್ವೇದ ಸ್ತುತಿಸಿದೆ. ಬಂಗಾರದ ಬಣ್ಣದವನಿವನು.ಗಾಯತ್ರೀ ಮಂತ್ರ ಪ್ರತಿಪಾದ್ಯ. ಮೂರು ಲೋಕಗಳನ್ನು ಬೆಳಗಿಸುವ ಎಲ್ಲರ ಬುದ್ಧಿಯನ್ನು ಪ್ರಚೋದಿಸುವ ಆ ಸವಿತೃವನ್ನು ಧ್ಯಾನಿಸುತ್ತೇನೆ ಎಂಬ ಅರ್ಥ ಗಾಯತ್ರೀ ಮಂತ್ರದ್ದು. ಎಲ್ಲರ ಬುದ್ಧಿ ಪ್ರಚೋದಕ. ಸ್ವರ್ಣನೇತ್ರ, ಸ್ವರ್ಣಹಸ್ತ, ಸ್ವರ್ಣ ಪಾದ, ಇತ್ಯಾದಿ ವರ್ಣನೆ ಕಂಡುಬರುತ್ತದೆ. ಮೂರು ಲೋಕಗಳನ್ನು ಬೆಳಗಿಸುವ ದೇವತೆ. ಇವನು ಸಂಚರಿಸುವ ಮಾರ್ಗ ಧೂಳಿಲ್ಲದ್ದು. ದೇವತೆಗಳಿಗೆ ಅಮರತ್ವ ಕೊಡಿಸುವವನು ಇವನೇ. ಪ್ರಸವಕ್ಕೆ ಸಂಬಂಧಿಸಿದ ದೇವತೆ. *ಸರ್ವಸ್ಯ ಪ್ರಸವಿತಾ* ಎಲ್ಲದರ ಹುಟ್ಟಿಗೆ ಕಾರಣ ಎಂಬ ಅರ್ಥದಲ್ಲಿ ಸ್ತುತಿ ಇದೆ. ಅಂಧಕಾರ ನಾಶಪಡಿಸುವವನು ಎನ್ನುವ ಅರ್ಥದಲ್ಲಿಯೂ ಸವಿತಾ ಶಬ್ದವಿದೆ. *ಲೋಕಾದೀನ್ ಸೂತೇ* ಸೃಷ್ಟಿ ಕಾರಣ ಎನ್ನುವ ಅರ್ಥದಲ್ಲಿ ಸ್ತುತಿ. ವಿಷ್ಣುವಿನ ಇನ್ನೊಂದು ರೂಪವೆಂದೂ ಇವನನ್ನು ಸ್ತುತಿಸುತ್ತಾರೆ. *ಸರತಿ ಆಕಾಶೇ ಸುವತಿ ಕರ್ಮಣಿ ಲೋಕಂ ಪ್ರೇರಯತಿ* ಎಂಬ ಮಾತಿನಂತೆ ಕರ್ಮಸಾಕ್ಷಿಯಾಗಿದ್ದುಕೊಂಡು ಪ್ರತಿಯೊಬ್ಬರಿಗೂ ಪ್ರೇರಕನಾಗಿ ಕಾರ್ಯನಿರ್ವಹಿಸುತ್ತಾನೆ. *ನಿವೇಶಯನ್ ಅಮೃತಂ ಮರ್ತ್ಯಂ ಚ* ಎಂಬ ಮಂತ್ರದಂತೆ ಅಮೃತರಾಗಲು ಅಥವಾ ಮೋಕ್ಷ ಹೊಂದಲು ಬೇಕಾದ ಜ್ಞಾನ ಪಡೆಯಲು ಸೂರ್ಯನ ಆರಾಧನೆ ಅತ್ಯವಶ್ಯಕ. *ಮಿತ್ರೋ ದಾಧಾರ ಪೃಥಿವೀಮುತದ್ಯಾಮ್* ಭೂಮಿ ಆಕಾಶಗಳನ್ನು ತನ್ನ ತೇಜಸ್ಸಿನಿಂದ ಧರಿಸಿದವನು ಅಥವಾ ಬೆಳಗಿಸಿದವನು. ಮನುಷ್ಯರು ಮಾತ್ರವಲ್ಲದೆ ದೇವತೆಗಳನ್ನು ನಿಯಮಿಸುತ್ತಾನೆ ಎನ್ನುತ್ತದೆ ವೇದ. ಜೀವ ಜಡ ಪದಾರ್ಥಗಳ ನಿಯಂತ್ರಕ. ಇವನು ಮುಖ್ಯವಾಗಿ ಪ್ರೇರಕ ದೇವತೆ. ಇವನ ಪ್ರೇರಣೆಯಿಂದಲೇ ರಾತ್ರಿ ಆಗುವುದು. ಮುಂದುವರೆಯುವುದು. . . .
📙ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ