🌹ಶಾಕುಂತಲದ ಸುಂದರ ಕುಸುಮ 🌹
*शुश्रूषस्व गुरून् कुरु प्रियसखीवृत्तिं सपत्नीजने भर्तुर्विप्रकृतापि रोषणतया मा स्म प्रतीपं गम: । भूयिष्ठं भव दक्षिणा परिजने भाग्येष्वनुत्सेकिनी यान्त्येवं गृहिणीपदं युवतयो वामा: कुलस्याधय: ।।*
_ಕಣ್ವರು ಶಕುಂತಲೆಗೆ ಬೋಧಿಸುವ ಮಧುರ ಶ್ಲೋಕ. ಪತಿಗೃಹದಲ್ಲಿ ಹೇಗಿರಬೇಕೆಂದು ನವಿರಾಗಿ ಉಪದೇಶಿಸುತ್ತಿದ್ದಾರೆ.ಮೊದಲನೇ ಮಾತೇ ಗುರುಹಿರಿಯರನ್ನು ಗೌರವಿಸು. ಅದು ಎಲ್ಲರ ಸ್ನೇಹಕ್ಕೆ ಕಾರಣ.(ಈಗಿನ ಹೆಣ್ಣುಮಕ್ಕಳು ಹಿರಿಯರೇ ಇರದಿರಲಿ ಎಂದು ಬಯಸುತ್ತಿದ್ದಾರೆ. ) ಗುರುಹಿರಿಯರ ಸೇವೆ ಅವರ ಮನವನ್ನು ಗೆಲ್ಲುವ ಪರಿಣಾಮಕಾರಿ ಅಸ್ತೃ. ರಾಜಾನೋ ಬಹುವಲ್ಲಭಾ: ಎಂಬಂತೆ ಅವನಿಗೆ ಅನೇಕ ಪತ್ನಿಯರಿರಬಹುದು.ನೀನು ಅವರೆಲ್ಲರಲ್ಲೂ ಪ್ರಿಯಸಖಿಯಂತೆ ವರ್ತಿಸು.ಅಸೂಯಾರಹಿತಳಾಗಿ ಅವರೊಡನೆ ಸ್ನೇಹ ಮಾಡಿದರೆ ಅದೇ ನಿನ್ನ ಒಳಿತನ್ನು ಸಾರುವುದು. ಪತಿಯು ಕೋಪಗೊಂಡಾಗ ಅಥವಾ ತಿರಸ್ಕಾರ ಮಾಡಿದಾಗ ನೀನು ಅದನ್ನೇ ಮಾಡದೇ ಪ್ರೀತಿಯನ್ನೇ ತೋರು.ಕೋಪ ಜೊತೆಗೂಡಿ ಅನಾಹುತವಾಗಬಹುದು.ಇಂದು ತಿರಸ್ಕಾರ ಮಾಡಿದರೂ ನಿನ್ನ ಪ್ರೀತಿಗೆ ಮುಂದೆ ಮಣಿದು ಪ್ರೀತಿಸಬಹುದು.ಹಾಗಾಗಿ ವಿರೋಧಿಸದಿರು ಪತಿಯನ್ನು. ಸೇವಕರ ವಿಷಯದಲ್ಲಿ ಸೌಜನ್ಯದಿಂದಿರಲಿ ನಿನ್ನ ವರ್ತನೆ.ಅವರು ಅಹಂಕಾರ ತೋರಿದೆಯೆಂದು ಚಾಡಿ ಹೇಳುವುದೋ, ಕೇಡು ಮಾಡುವುದೋ ಮಾಡಬಹುದು.ಅವರೊಡನೆಯ ನಯದ ವರ್ತನೆ ಅವರ ವಿಶ್ವಾಸವನ್ನು ಸಂಪಾದಿಸುತ್ತದೆ. ಐಶ್ವರ್ಯದ ಅಹಂಕಾರ ತಾಳಬೇಡ.ಸಂಪತ್ತು ಅಹಂಕಾರದ ಆಪತ್ತು ತರದಿರಲಿ.ಅದು ದಾನಕ್ಕೆ ಭೋಗಕ್ಕೆ ಬಳಸುವ ಸ್ವತ್ತಾಗಲಿ. ಹೀಗೆ ನಡೆದುಕೊಳ್ಳುವ ಗೃಹಿಣಿಯರು ಗೌರವವನ್ನು ಪಡೆಯುವರು.ಇದಕ್ಕೆ ವಿರುದ್ದವಾಗಿ ನಡೆದುಕೊಳ್ಳುವವರು ಅವರ ಕುಲಕ್ಕೆ ದು:ಖವನ್ನು ಕರುಣಿಸುವರು.ಗೃಹಿಣೀಧರ್ಮವನ್ನು ಉಪದೇಶಿಸುವ ಈ ಶ್ಲೋಕ ನಾಲ್ಕು ಉತ್ತಮ ಶ್ಲೋಕಗಳಲ್ಲೊಂದಾಗಿದೆ. ಈ ಮಾತಿನಂತೆ ನಡೆದರೆ ಗೃಹ ಸ್ವರ್ಗ ,ಇಲ್ಲದಿರೆ ಅದೇ ನರಕ. ಎಲ್ಲರ ಮೊದಲ ಕರ್ತವ್ಯ ಮೊದಲಿಗೆ ಗುರುಶುಶ್ರೂಷೆ. ಎರಡನೆಯದು ಪ್ರಿಯಳಾದ ಸ್ನೇಹಿತೆಯಂತೆ ಸವತಿಯರೊಡನೆಯ ವ್ಯವಹಾರ. ಅನಾದರಕ್ಕೊಳಗಾದರೂ ಆದರ ಬಿಡದಿರುವುದು ಮೂರನೆಯ ಗುಣ. ವೈಷಮ್ಯ ಬೆಳೆಸದೇ ಅಲ್ಲಿಗೇ ಬಿಡುವುದು ಶ್ರೇಷ್ಠ ಗುಣಗಳಲ್ಲೊಂದು. ಸೇವಕರಲ್ಲಿ ಸದಾ ಕರುಣೆ ತುಂಬಾ ಮುಖ್ಯ. ಇವೆಲ್ಲವೂ ಆದರ್ಶ ಗೃಹಿಣಿಯ ಲಕ್ಷಣಗಳು. ಇವುಗಳನ್ನು ಪಡೆದವಳು ಗೃಹಿಣಿ ಎಂದು ಕರೆಸಿಕೊಳ್ಳಲು ಯೋಗ್ಯಳು. ವಿರುದ್ಧವಾದವಳು ಮನೆಗೆ ಮುಳ್ಳಿನಂತೆ ಚುಚ್ಚಿ ಬಾಧೆ ಕೊಡುತ್ತಾಳೆ. ವಾತ್ಸಾಯನನ ಕಾಮಸೂತ್ರವೂ ಅನೇಕ ಧರ್ಮಶಾಸ್ತ್ರಗಳೂ ಇದನ್ನೇ ಗೃಹಿಣಿಯ ಧರ್ಮವೆಂದು ಅಂಗೀಕರಿಸುತ್ತವೆ. ಕಣ್ವರ ಉಪದೇಶ ಸಾರ್ವಕಾಲಿಕ ಹಾಗೂ ಸಾರ್ವದೇಶಿಕವಾಗಿ ಮನೋಹರವಾಗಿದೆ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ