🌹ಶಾಕುಂತಲದ ಸುಂದರ ಕುಸುಮ 🌹

*एषापि प्रियेण विना गमयति रजनीं विषाददीर्घतराम् । गुर्वपि विरहदु:खमाशाबन्ध: साहयति ।।*

_ಶಕುಂತಲೆ ಸಖಿಯ ಬಳಿ ಚಕ್ರವಾಕವನ್ನು ತೋರಿಸಿ ಜೊತೆಗಾರನನ್ನು ಕಾಣದೇ ಹೆಣ್ಣು ಚಕ್ರವಾಕ ಜೋರಾಗಿ ಅರಚುತ್ತಿದೆ ನಾನು ಮಾತ್ರ ಪ್ರಿಯನ ಬಗ್ಗೆ ಅಷ್ಟು ಉತ್ಸುಕಳಾಗಿಲ್ಲ ಎಂದಾಗ ಅನಸೂಯೆ ಆಡುವ ಮಾತು.ಗೆಳತಿ ಹಾಗನ್ನಬೇಡ - ಈ ಚಕ್ರವಾಕವೂ ಪ್ರಿಯಕರನನ್ನು ಅಗಲಿ ದು:ಖದಿಂದ ದೀರ್ಘವಾದ ರಾತ್ರಿಯನ್ನು ಕಳೆಯುತ್ತದೆ.ಏಕೆಂದರೆ ಆಶೆಯ ಬಂಧನವು ದು:ಖವು ಬಲವಾಗಿದ್ದರೂ ತಡೆದುಕೊಳ್ಳಯವಂತೆ ಮಾಡುವುದು.ಎಂತಹ ಮಾರ್ಮಿಕ ನೈಜ ಮಾತು.ವಿರಹದು:ಖದಿಂದ ರಾತ್ರಿ ತುಂಬಾ ದೀರ್ಘವೆಂಬಂತೆ ತೋರುತ್ತಿದೆ ಆ ಪಕ್ಷಿಗೆ.ದು:ಖಿತರಿಗೆ ಕ್ಷಣವೊಂದು ಯುಗದಂತೆ ಕಾಣುವುದು. ( ಕನ್ನಡದ ಒಂದು ಚಿತ್ರದಲ್ಲಿ ಹೀಗೆ ಪದ್ಯವೂ ಇದೆ ಕ್ಷಣವೊಂದು ಯುಗವಾಗಿ ನಿನಗಿಂತ ಮಿಗಿಲಾಗಿ ಇತ್ಯಾದಿ) ಅವರಿಗೆ ಕಾಲ ಹೋಗುವುದೇ ಕಷ್ಟ.ಸುಖದಲ್ಲಿದ್ದಾಗ ದೀರ್ಘಕಾಲವೂ ಕ್ಷಣದಂತೆ ಕಳೆದುಹೋಗುತ್ತದೆ.ಮಿಲನದಲ್ಲಿ ಕಾಳಿದಾಸನ ರಘುವಂಶದ ಮಾತು - ರಾಮನಾಡುವುದು ಸೀತೆಯೊಡನೆ ಕಳೆದ ನೆನಪುಗಳ ಬಗ್ಗೆ  ರಾತ್ರಿರೇವ ವ್ಯರಂಸೀತ್ ರಾತ್ರಿ ಕಳೆದುದೇ ತಿಳಿಯಲಿಲ್ಲ. ಆದರೆ ಆಸೆಯೆಂಬ ಬಂಧವು ಆ ನೋವನ್ನು ಸಹಿಸುವ ಶಕ್ತಿ ನೀಡುವುದು.ನಿನಗೂ ಮುಂದೆ ದುಷ್ಯಂತ ದೊರಕುವನು ಎಂಬ ಆಸೆಯಿರುವುದರಿಂದಲೇ  ವಿವರವನ್ನು ಸಹಿಸಿಕೊಂಡಿದ್ದಿ.ಅದೇ ನಿನಗೆ ಔಷಧಿಯಂತೆ ನೆರವಾಗಿದೆ.ಜೀವನದ ಪ್ರತಿಯೊಂದು ಘಟ್ಟಗಳಲ್ಲೂ ಈ ಆಸೆಯೇ ನಮ್ಮನ್ನು ಮುಂದುವರೆಸುತ್ತದೆ.ವಿದ್ಯಾರ್ಥಿ ಅಂಕಗಳ ಆಸೆಯಿಂದ ಹೆಚ್ಚು ಹೊತ್ತು ಓದುತ್ತಾನೆ.ಮಗು ಅಮ್ಮ ಮುದ್ದಾಡಲಿ ಎಂಬ ಆಸೆಯಿಂದ ಅಳುವ ನೋವನ್ನು ಸಹಿಸಿಕೊಳ್ಳುವುದು.ಹೆಣ್ಣು ಮಗುವಿನ ಲಾಲನೆ ಪಾಲನೆಯ ಸುಖಕ್ಕಾಗಿ ಅಸಾಧ್ಯವಾದ ಪ್ರಸವದ ಸುಖವನ್ನು, ಗರ್ಭಧರಿಸುವ ಕಾಲದ ನೋವನ್ನು ಸಹಿಸುತ್ತಾಳೆ.ರೋಗಿ ಗುಣವಾಗುವುದೆಂಬ ಆಸೆಯಿಂದ ಪಥ್ಯವನ್ನೂ ಕಹಿ ಔಷಧವನ್ನೂ ಸಹಿಸಿಕೊಳ್ಳುತ್ತಾನೆ.ಹೀಗೆ ನರನ ಜೀವನದಲ್ಲಿ ಮುಂದೆ ಬರುವ ಯಾವುದೊ ಅಂಶದ ಮೇಲಿನ ಆಸೆಯು ಆ ಕಾಲದ ದು:ಖವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ತಂದುಕೊಡುತ್ತದೆ ಅಲ್ಲವೇ! ಮಿಲನದ ಪ್ರತೀಕ್ಷೆಯು ವಿರಹಿಗಳಿಗೆ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿ ಉಂಟುಮಾಡುತ್ತದೆ.ಕಾಳಿದಾಸನ ಇಂತಹ ಮಾತು ಜೀವನವನ್ನೇ ಉದ್ದೇಶಿಸಿ ಹೇಳಿರುವಂಥಹದ್ದು._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩