🌺ಅವಿಮಾರಕದ ಚಿಕ್ಕ ಸುವಾಸಿತ ಮೊಗ್ಗು🌺
*भवन्त्वरजसो गाव: परचक्रं प्रशाम्यतु । इमामपि महीं कृत्स्नां राजसिंह: प्रशास्तु न: ।।*
_ಅವಿಮಾರಕ ನಾಟಕದ ಭರತವಾಕ್ಯ.ನಾಟಕದ ಕೊನೆಗೆ ನಾಟ್ಯಶಾಸ್ತ್ರದ ರಚನೆ ಮಾಡಿದ ಭರತನಿಗೆ ಗೌರವ ಸೂಚಿಸುವ, ಲೋಕದ ಕ್ಷೇಮವನ್ನು ದೇವರಲ್ಲಿ ಬೇಡುವ ವಾಕ್ಯ.ಹೆಚ್ಚಾಗಿ ನಾಂದಿಯೊಂದಿಗೆ ನಾಟಕಕ್ಕೆ ಚಾಲನೆ ಕೊಟ್ಟ ಸೂತ್ರಧಾರನೇ ಈ ಮಾತನ್ನು ಹೇಳುತ್ತಾನೆ. ಇಂದ್ರಿಯಗಳು ರಜೋಗುಣವನ್ನು ತ್ಯಜಿಸಲಿ.ಏಕೆಂದರೆ ಆರಂಭದಲ್ಲಿ ಅಮೃತದಂತೆ ಕಂಡರೂ ಪರಿಣಾಮದಲ್ಲಿ ವಿಷದಂತಿರುವ ವಿಷಯಾನುಭವದ ಸುಖ ರಾಜಸ.( ವಿಷಯೇಂದ್ರಿಯಸಂಯೋಗಾದ್ ..... ಪರಿಣಾಮೇ ವಿಷಮಿವ = ಗೀತೆ) ಹಾಗಾಗಿ ರಜೋಗುಣ ಇಂದ್ರಿಯಗಳನ್ನು ಬಿಟ್ಟು ಬಿಡಲಿ.ಕರ್ಮಫಲ,ಕೀರ್ತಿ ಬಯಸುವುದು,ಲೋಭ,ಪರಪೀಡನೆ,ಬಾಹ್ಯಾಂತರ ಅಶುದ್ಧಿ,ಫಲ ದೊರೆತಾಗ ಅತಿ ಸಂತೋಷ, ಇಲ್ಲದಿದ್ದರೆ ಅತಿ ದು:ಖ ಇವೆಲ್ಲ ರಾಜಸ ಲಕ್ಷಣಗಳು.( ಗೀತೆ) ಅವೆಲ್ಲ ನಮ್ಮನ್ನಾಳದಿರಲಿ.ನಮ್ಮ ಶತ್ರುಗಳೆನಿಸಿದವರೆಲ್ಲ ಕ್ಷೀಣಿಸಲಿ ಅಥವಾ ನಾಶ ಹೊಂದಲಿ.ಈ ಸಂಪೂರ್ಣ ಭೂಮಿಯನ್ನು ಸಿಂಹದ ಗಾಂಭೀರ್ಯ, ಶಕ್ತಿ,ಬೇಟೆಯಲ್ಲಿನ ನಿಷ್ಠೆ, ಪರಿವಾರದ ಮೇಲಿನ ಪ್ರೀತಿ ಉಳ್ಳ ರಾಜನು ಆಳಲಿ.ಇಂದ್ರಿಯಗಳನ್ನು ಪ್ರಜೆಗಳು ಜಯಿಸಿ ಜಿತೇಂದ್ರಿಯರಾದಾಗ ರಾಗದ್ವೇಷಗಳಿಗೆ ಆಸ್ಪದವಿಲ್ಲದೆ,ಅಂತರಂಗ ಬಹಿರಂಗ ಶತ್ರುಗಳು ನಶಿಸಿಹೋದಾಗ,ಈ ಪೃಥ್ವಿಯನ್ನು ಶ್ರೇಷ್ಠನೊಬ್ಬ ಆಳಿದಾಗ ಲೋಕ ಸುಭಿಕ್ಷವೆನಿಸುತ್ತದೆ.ಭಾಸನ ಬಯಕೆಯೂ ಅಮೋಘವಾಗಿದೆ._
📜ಸಂಗ್ರಹ ✍
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ