💐ಪ್ರತಿಮಾನಾಟಕದ ಸುಂದರ ಸುಮ💐

*नारीणां पुरुषाणां च निर्मर्यादो यदा ध्वनि: । सुव्यक्तं प्रभवामीति मूले दैवेन ताडितम् ।।*

_ಹಿನ್ನೆಲೆಯಲ್ಲಿ ಅಯ್ಯೋ ಮಹಾರಾಜ ಎಂಬ ಧ್ವನಿ ಕೇಳಿಬರುತ್ತಿದೆ. ರಾಮಾದಿಗಳು ಸಂತೋಷದಿಂದ ತಮಾಷೆ ಮಾಡುತ್ತಿರುವ ಸಂದರ್ಭದಲ್ಲಿ ಕೇಳಿಬರುವ ಈ ಮಾತು ಎಲ್ಲರಿಗೂ ಗಾಬರಿಯನ್ನುಂಟುಮಾಡುತ್ತದೆ. ಸ್ತ್ರೀಯರ ಹಾಗೂ ಪುರುಷರ ಧ್ವನಿ ಯಾವಾಗ ಸೀಮೆಯನ್ನು ದಾಟುವುದೋ ಆಗ ಖಂಡಿತವಾಗಿ ಮೂಲದಲ್ಲಿಯೇ ಏನೋ ಅನಾಹುತ ಉಂಟಾಗಿದೆಯೆಂದು ಭಾವಿಸುವೆನು. ಜೋರಾದ ದು:ಖದ ಧ್ವನಿಯನ್ನು ಕೇಳಿದ ರಾಮನು ಹೀಗೆ ಅನುಮಾನ ಪಡುತ್ತಾನೆ. ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ತುಂಬಾ ಗಾಬರಿಯಿಂದ ಜೋರಾಗಿ ಅರಚಿದರೆ ಅಥವಾ ಕೂಗಿದರೆ ಏನೋ ಮಹತ್ತರವಾದ ಅನಾಹುತ ಸಂಭವಿಸಿದೆಯೆಂದು ಶಂಕಿಸುತ್ತೇನೆ ಅಥವಾ ತರ್ಕಿಸುತ್ತೇನೆ. ಅದಕ್ಕೆ ಕಾರಣ ವಿಧಿ.ಹಾಗಾಗಿಯೇ ದೈವೇನ ತಾಡಿತಮ್ ಎನ್ನುವ ಮಾತು. "ಸರ್ವಸಾಮರ್ಥ್ಯಶಾಲೀ ಮತ್ಪ್ರಭಾವ:" ಎನ್ನುವ ವಿಧಿಯ ಮಾತು ರಾಮನ ನಿರೂಪಣೆಯಲ್ಲಿ ಕಂಡುಬರುತ್ತದೆ. ರಾಮನಾಗಲಿ ಕೃಷ್ಣನಾಗಲಿ ವಿಧಿಯ ನಿರ್ಣಯದ ಮುಂದೆ ನಿಂತವರಲ್ಲ.ನಾವು ನೀವು ಯಾವ ಲೆಕ್ಕ ವಿಧಿಗೆ. ರಾಜನಿಗೆ ಏನೋ ಆಪತ್ತು ನಡೆದಿರುವ ಶಂಕೆ ಸೂಕ್ಷ್ಮವಾಗಿ ಕಂಡುಬರುತ್ತದೆ.ನಿರ್ಮರ್ಯಾದೋ ಎನ್ನುವ ಪದ ದು:ಖದಾಯಕ, ಕಳವಳದ ಸಂಕೇತ ಇತ್ಯಾದಿ ಅರ್ಥ ತಂದುಕೊಡುತ್ತದೆ.ನಾವೂ ಯಾರ ಕೂಗಿಗಾದರೂ ಒಂದು ಕ್ಷಣ ಓಗೊಟ್ಟು ಗಾಬರಿ ಪಡುವುದಿಲ್ಲವೇ ಹಾಗೆಯೇ ಪ್ರಕೃತ ರಾಮಾದಿಗಳ ಸ್ಥಿತಿ._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩