🌹ಶಾಕುಂತಲದ ಸುಂದರ ಕುಸುಮ🌹
*अभिनवमधुलोलुपो भवान् तथा परिचुम्ब्य चूतमञ्जरीम् । कमलवसतिमात्रनिर्वृत्तो विस्मृतोस्येनां कथम् ।।*
_ಶಕುಂತಲೆ ನಿರ್ಗಮಿಸಿದ್ದಾಳೆ ರಾಜನ ಹೃದಯದ ಅರಮನೆಯಿಂದ. ರಾಜನು ಸುಮ್ಮನೆ ಕುಳಿತು ಏನನ್ನೋ ಚಿಂತಿಸುತ್ತಿದ್ದಾನೆ. ಸಂಗೀತ ಶಾಲೆಯಿಂದ ಒಂದು ರಾಗ ಕೇಳುತ್ತಿದೆ.ಆ ಕಡೆಗೆ ಗಮನ ಕೊಟ್ಟು ಮಧುರವಾದ ಅವಳ ಧ್ವನಿಯನ್ನು ಆಲಿಸುತ್ತಿದ್ದಾನೆ.ಆ ಶ್ಲೋಕ ಹೀಗಿದೆ. ದುಂಬಿಯೇ, ಹೊಸ ಜೇನಿನ ಆಸೆಯಿಂದ ಮಾವಿನ ಹೂವಿನ ಗೊಂಚಲನ್ನು ಅಷ್ಟೊಂದು ಚುಂಬಿಸಿ, ಈಗ ನೋಡಿದರೆ ಕಮಲದ ರಸದಲ್ಲಿ ಮುಳುಗಿದವನಾಗಿ ಅವಳನ್ನು ( ಮಾವಿನ ಹೂವನ್ನು ) ಹೇಗೆ ಮರೆತೆ? ದುಂಬಿಯ ಸ್ವಭಾವ ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುವುದು.ರಾಜನೂ ಅದೇ ಮಾಡುತ್ತಿದ್ದಾನೆಂಬ ಧ್ವನಿ ಅವಳ ಮಾತಿನಲ್ಲಿ ಇದೆ. ಶಕುಂತಲೆಯ ಮೇಲೆ ಹಿಂದೆ ಸಾಕಷ್ಟು ಪ್ರೀತಿ ತೋರಿ ಅವಳಲ್ಲೇ ಅನುರಕ್ತನಾಗಿ ಈಗ ನೋಡಿದರೆ ಅರಮನೆಗೆ ಬಂದು ರಾಣಿಯ ಮುಖವನ್ನು ನೋಡುತ್ತಾ ಅವಳನ್ನು ಮರೆತಿರುವೆಯಲ್ಲಾ! ದುಂಬಿಯಂತೆ ನೀನು ಕೃತಘ್ನತೆಯನ್ನು ತೋರಬಹುದೇ? ಮಾಡುತ್ತಿರುವುದು ಸರಿಯೇ ಎಂಬ ಭಾವ. ಹೇತು ಎಂಬ ಅಲಂಕಾರ ಇಲ್ಲಿ ಕಾಣುತ್ತದೆ.ಕಮಲದ ಹೂವಿನ ಮೇಲಿನ ಪ್ರೀತಿಯ ಕಾರಣ ಅವಳ ನೆನಪು ಮಾಸಿದೆ. ಶಕುಂತಲೆಯನ್ನು ಅಷ್ಟೆಲ್ಲ ಪ್ರೇಮಿಸಿ ಅವಳನ್ನು ಕೂಡಿ ಈಗ ತ್ಯಾಗ ಮಾಡುವುದು ಸರಿಯಲ್ಲ ಎಂಬ ಧ್ವನಿಯೂ ಸೇರಿದೆ.ರಾಜನ ಚಂಚಲತೆಯನ್ನೂ ಮರೆವಿನ ಸ್ವಭಾವವನ್ನೂ ಲೋಲುಪತೆಯನ್ನೂ ಇದು ತೋರಿಸುತ್ತದೆ. ನಮ್ಮ ಸ್ವಭಾವವೂ ಹಾಗೆಯೇ ಅಲ್ಲವೇ.ಹೊಸ ವಸ್ತುಗಳನ್ನು ನೋಡಿದಾಗ ಮನ ಅದನ್ನು ಬಯಸಿ ಮೊದಲೇ ಇರುವುದನ್ನು ಮರೆಸುತ್ತದೆ.ಹೊಸ ವಿಚಾರ ಮನ ಹೊಕ್ಕಾಗ ಹಳೆಯದು ಮರೆತು ಹೋಗುವುದು. ಹೊಸ ಪುಸ್ತಕ ಕಂಡಕೂಡಲೇ ತೆಗೆದುಕೊಳ್ಳುತ್ತೇವೆ.ಇರುವ ಪುಸ್ತಕ ಇಂದಿಗೂ ಓದಿಲ್ಲವೆಂಬ ಸತ್ಯ ನೆನಪಾಗದು.ಹೊಸ ವ್ಯಕ್ತಿಗಳ ಪರಿಚಯ ಆದ ಮೇಲೆ ಹಿಂದಿನ ಪರಿಚಿತರನ್ನು ಅಪರಿವಿತರಂತೆ ಕಾಣುತ್ತೇವೆ.ಹೊಸ ವಸ್ತ್ರಗಳು, ದೃಶ್ಯಗಳು, ವ್ಯಕ್ತಿಗಳು, ವಿಚಾರಗಳು ಯಾವುದು ಬಂದರೂ ಸ್ವಾಗತಿಸುತ್ತೇವೆ.ಇದು ಕೆಟ್ಡದ್ದಲ್ಲ.ಆದರೆ ಹಳೆಯದರ ಜೊತೆಗೆ ಹೊಸದು ಸೇರಿದರೆ ಜೀವನ ಮಧುರವಾಗುವುದು.ಹೊಸ ಹಾಲಿನ ಜೊತೆ ಸೇರಿದ ಹಳೆಯ ಜೇನಿನಂತೆ ಬಾಳು ಹಾಲುಜೇನಾಗುವುದು.ಹಾಲು ಹಳೆತಾದರೆ ರುಚಿ ಇಲ್ಲ. ಜೇನು ಹಳತಾದಷ್ಟೂ ರುಚಿ ಹೆಚ್ಚು. ನಮ್ಮ ಬದುಕೂ ಹಳೆ ಹೊಸತರ ಮಿಶ್ರಣದಿಂದ ಸುಗಮವಾಗಲಿ ಎಂಬುದು ಕವಿಯ ಆಶಯ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ