🌹ಶಾಕುಂತಲದ ಸುಂದರ ಪುಷ್ಪ 🌹
*उत्पक्ष्मणोर्नयनयोरुपरुद्धवृत्तिं बाष्पं कुरु स्थिरतया विहतानुबन्धम् । अस्मिन्नलक्षितनतोन्नतभूमिभागे मार्गे पदानि खलु ते विषमीभवन्ति ।।*
_ಮತ್ತೊಂದು ಭಾವನಾತ್ಮಕ ಶ್ಲೋಕ. ಕಾಶ್ಯಪರ ಎಚ್ಚರಿಕೆಯ ಪ್ರೀತಿಯ ಮಾತು.ಶಕುಂತಲೆ ಗಮನಕ್ಕೆ ಹೆಜ್ಜೆ ಇಡುತ್ತಿದ್ದಾಳೆ.ಶಕುಂತಲೆ- ರೆಪ್ಪೆಗಳನ್ನು ಮೇಲಕ್ಕೆತ್ತಿದ ನಿನ್ನ ಕಣ್ಣುಗಳ ಕಾರ್ಯವನ್ನು ಪ್ರತಿಬಂಧಿಸುತ್ತಿರುವ ಕಣ್ಣೀರನ್ನು ಗಟ್ಟಿ ಮನಸ್ಸಿನಿಂದ ತಡೆದುಕೋ.ತಗ್ಗು ದಿನ್ನೆಗಳಿರುವ ಈ ಮಾರ್ಗದಲ್ಲಿ ಅವುಗಳನ್ನು ಕಾಣದೇ ನಿನ್ನ ಹೆಜ್ಜೆಗಳು ಎಡವುತ್ತಿವೆ.ಮಗಳಿಗೆ ತಿಳಿಹೇಳುವ ಹೀಗೊಂದು ಬಗೆ ಕಾಳಿದಾಸನ ಅದ್ಭುತ ಶೈಲಿ.ಸರಳ ವಾಕ್ಯ ವಿಶಾಲ ಅರ್ಥ.ಶಕುಂತಲೆ ಆಶ್ರಮದ ಅಗಲುವಿಕೆಯನ್ನು ನೆನೆದು ಅಳುತ್ರಿದ್ದಾಳೆ.ಆಗ ಅಪ್ಪನ ಮಾತು.ಪ್ರಯಾಣದ ಪೂರ್ವದಲ್ಲಿ ಕಣ್ಣೀರು ತರವಲ್ಲ.ಅದನ್ನು ದೃಢ ಮನಸ್ಸಿನಿಂದ ತಡೆದುಕೊ.ಈ ಕಾನನದ ದಾರಿಯಲ್ಲಿ ಸಹಜವಾಗಿ ತಗ್ಗು ಕೆಲವೆಡೆ,ದಿನ್ನೆ ಕೆಲವೆಡೆ ಇದೆ.ಕಣ್ಣೀರುಗೈಯುತ್ತಿದ್ದರೆ ನೀನು ಬೀಳಬಹುದು.ಹೆಜ್ಜೆಗಳು ಎಡವಿ ಜಾರಬಹುದು.ಹಾಗಾಗಿ ಕಣ್ಣೀರನ್ನು ದೃಷ್ಟಿ ಸುಗಮವಾಗಲು ಪ್ರತಿಬಂಧಿಸು.ಅಳು ಅಮಂಗಲ,ಹಾಗಾಗಿ ಈಗ ಅಳು ಬೇಡ ಎನ್ನುವ ಭಾವ.ನೀನು ಜೀವನವೆಂಬ ದಾರಿಯನ್ನು ಇನ್ನೂ ತುಂಬಾ ಸವೆಸಲಿಕ್ಕಿದೆ.ಅದರ ಮಧ್ಯದ ಅನೇಕ ಘಟನೆಗಳಲ್ಲಿ ಕಣ್ಣೀರು ಹಾಕದೇ ಮುಂದುವರೆ.ಹಾಗೆ ಮಾಡದಿದ್ದರೆ ತಗ್ಗು ದಿನ್ನೆಗಳಲ್ಲಿ ಬಿದ್ದು ನಿನಗೆ ಗಾಯವಾದೀತು.ಪರರ ನಿಂದೆ,ಅವಮಾನ,ಹಿಂಸೆ,ಪತಿಯ ತಿರಸ್ಕಾರ, ಸವತಿಯರ ಭರ್ತ್ಸನೆ,ಅತ್ತೆ ಮಾವಂದಿರ ತಾತ್ಸಾರ ಮುಂತಾದ ಸಾಕಷ್ಟು ಕ್ಷಣಗಳು ಬಂದಾಗ ಅಳದೇ ಅವೆಲ್ಲ ಕ್ಷಣಿಕವೆಂದು ಮುನ್ನಡೆ.ಆಗ ಆ ದಾರಿ ಸಾಗಲು ಸುಗಮವಾದೀತು.ಇಲ್ಲದೇ ಹೋದರೆ ಹೆಜ್ಜೆ ಹೆಜ್ಜೆಗೂ ಬೀಳಬೇಕಾದೀತು, ಹಾಗಾಗಿ ಎಚ್ಚರವಿರಲಿ ಎಂಬ ಕಾಳಜಿ.ಕಣ್ವರ ಸ್ಥಿತಿಯೂ ಕಣ್ಣೀರು ತಡೆದೇ ಮಾತನಾಡಿಸುತ್ತಿದೆ.ಕಾವ್ಯಲಿಂಗ ಅಲಂಕಾರ. ಮಗಳನ್ನು ಸಂತೈಸುವುದು,ತನಗೂ ದು:ಖ ಉಂಟಾಗಿದೆಯೆಂಬ ಸೂಕ್ಷ್ಮ ಭಾವವೂ ಇಣುಕಿದೆ.ಇದಕ್ಕೆ ಕುಮಾರಸಂಭವ ಹೇಳಿದ್ದಿರಬೇಕು.*ಅಶೋಚ್ಯಾ ಹಿ ಪಿತು: ಕನ್ಯಾ ಸದ್ಭರ್ತೃಪ್ರತಿಪಾದಿತಾ* ಎಂದು.ಒಳ್ಳೆಯ ಪತಿಗೆ ಕೊಡಲ್ಪಟ್ಟ ಕನ್ಯೆ ಅಪ್ಪನ ದು:ಖವನ್ನೂ ಪರಿಹರಿಸುತ್ತಾಳೆ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ