🌹ಶಾಕುಂತಲದ ಒಂದು ಸುಮ🌹

*भवन्ति नम्रास्तरव: फलागमै: नवाम्बुभिर्दूरविलम्बिनो घना: । अनुद्धता: सत्पुरुषा: समृद्धभि: स्वभाव एवैष परोपकारिणाम् ।।*

_ಶಾಂರ್ಗರವನು ದುಷ್ಯಂತನ ಕುರಿತು ನುಡಿಯುವ ಸುಂದರ ಮಾತು. ರಾಜನು ನಿಮಗಾಗಿ ನಿಂತು ಕಾಯುತ್ತಿದ್ದಾನೆ ಎಂದು ಪ್ರತೀಹಾರಿ ಹೇಳುವಾಗ ಈ ಮಾತು ನುಡಿಯುವನು. ಮರಗಳು ತಮ್ಮಲ್ಲಿ ಹಣ್ಣು ತುಂಬಿದಾಗ ಅದರ ಭಾರಕ್ಕೆ ಬಾಗುತ್ತವೆ. ತಾವು ಸಮೃದ್ಧವಾಗಿ ಇದ್ದಾಗಲೂ ಎದೆಯುಬ್ಬಿಸದೇ ತಗ್ಗಿ ನಡೆಯುತ್ತವೆ. ಕಪ್ಪು ಮೋಡಗಳು ನೀರು ತುಂಬಿಕೊಂಡಾಗ ಭೂಮಿಗೆ ಮೊದಲಿಗಿಂತ ಸಮೀಪ ಬರುತ್ತವೆ. ತಾವು ತುಂಬಿದವರೆಂದು ಮೇಲೆ ತೇಲುವುದಿಲ್ಲ. ಹೀಗೆಯೇ ಸತ್ಪುರುಷರು ಸಮೃದ್ಧಿಯಿಂದ ನಿರಹಂಕಾರಿಗಳಾಗುವರು. ತಮ್ಮಲ್ಲಿ ದುಡ್ಡು ಇದೆ, ಜ್ಞಾನ ಇದೆ, ಅಧಿಕಾರ ಇದೆ ಎಂದು ಅಹಂಕಾರ ಪಡದೆ ವಿನಯ ತೋರುತ್ತಾರೆ. ಇದು ಲೋಕದಲ್ಲಿ ಪರೋಪಕಾರಿಗಳ ಸ್ವಭಾವ. ಮರ ತಾನು ಸಂಪಾದಿಸಿದ ಹೂವು ಹಣ್ಣುಗಳನ್ನೆಲ್ಲವನ್ನೂ ದಾನ ಮಾಡಲು ತನ್ನ ದೇಹವನ್ನೇ ತಗ್ಗಿಸಿ ಸ್ವಾಗತಿಸುತ್ತದೆ. ಮೋಡ ದೇಹ ತುಂಬಿದ ಮೇಲೆ ಜನರ ಉಪಯೋಗಕ್ಕೆ ಮಳೆ ಸುರಿಸಲು ಮತ್ತಷ್ಟು ಕೆಳಗಿಳಿದು ಬರುತ್ತದೆ. ಸಜ್ಜನರು ತಮಗೆ ಒದಗಿದ ವಿವಿಧ ರೀತಿಯ ಸಮೃದ್ಧಿಯ ಸಮಯದಲ್ಲಿ ಇನ್ನಷ್ಟು ವಿನೀತರಾಗುವರು ಹೊರತು ಅಹಂಕಾರಿಗಳಲ್ಲ. ರಾಜನ ಸ್ವಭಾವವೂ ಉತ್ತಮವಾದ್ದರಿಂದ ಪ್ರಕೃತ ಅವನ ನಡತೆ ಸಹಜವಾಗಿಯೇ ವಿನಯದಿಂದ ಕೂಡಿದೆ ಎಂಬ ಭಾವ. ನಾವೂ ಸಮೃದ್ಧಿಯಲ್ಲಿ ಅಹಂಕಾರ ಪಡದೆ ನಯವನ್ನು ಇನ್ನೊಬ್ಬರ ಮಾತಿಗೆ ದನಿಯಾಗುವುದನ್ನೂ ಹಿರಿಯರಿಗೆ ಗೌರವ ಕಿರಿಯರಿಗೆ ಪ್ರೀತಿ ತೋರಿ ಸಜ್ಜನರಾಗೋಣ. ಕ್ರಿಯಾದೀಪಕ ಅಲಂಕಾರ._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩