💐ಪ್ರತಿಮಾನಾಟಕದ ಒಂದು ಸುಮ💐
*मा स्वयं मन्युमुत्पाद्य परिहासे विशेषत: । शरीरार्धेन मे पूर्वमाबद्धा हि यदा त्वया ।।*
_ರಾಮನಾಡುವ ಮಾತಿದು.ಸೀತೆ ತಮಾಷೆಗೆಂದು ನಾರುಬಟ್ಟೆ ಉಟ್ಟಾಗ ರಾಮ ಇದೇನು ಸನ್ಯಾಸಿನಿಯ ಭಾವವೋ ಅಥವಾ ಸುಮ್ಮನೆ ಉಟ್ಟುಕೊಂಡಿಯೋ ಎಂದು ಕೇಳುವನು.ಅನಂತರ ಸೀತೆ ಈಗೇನು ನಾನು ಸುಂದರವಾಗಿ ಕಾಣುವೆನೇ ಇಲ್ಲವೇ ಎಂದು ಪ್ರಶ್ನಿಸುವಳು. ಆಗ ರಾಮನು ಇಕ್ಷ್ವಾಕುಗಳ ಮುದಿತನದ ಅಲಂಕಾರ ಕಾಣುವುದು ಎನ್ನುತ್ತಾನೆ. ಆಗ ಸೀತೆ ಬೇಡ ಅಭಿಷೇಕದ ಸಮಯದಲ್ಲಿ ಅಮಂಗಳ ನುಡಿಯಬೇಡ ಎಂದು ವಿನಂತಿಸುತ್ತಾಳೆ. ಆಗ ರಾಮನಾಡುವ ಮಾತು. 'ಸೀತೆ, ನಾನು ತಮಾಷೆ ಮಾಡಿದಾಗ ನೀನೇ ಸ್ವತ: ಸಿಟ್ಟು ಮಾಡಿಕೊಂಡು ಅಮಂಗಳವನ್ನು ಸಂದೇಹಿಸುತ್ತಿದ್ದಿ. ಆದರೆ ನನ್ನ ಅರ್ಧಾಂಗಿಯಾದ ನೀನು ನಾರುಬಟ್ಟೆ ಉಟ್ಟಾಗ ನಾನೂ ಉಟ್ಟಂತೆ ಅಲ್ಲವೇ! ಎಷ್ಟೊಂದು ಪ್ರೀತಿ ತುಂಬಿದ ಮಾತು.ನಾನು ಉಟ್ಟರೇನು ನೀನು ಉಟ್ಟರೇನು ದೇಹವೆರಡು ಮನವು ಒಂದು ಎಂದು ವಿವಾಹ ಮಾಡಿಕೊಂಡಿರುವಾಗ ನೀನು ಅಮಂಗಳ ಸೂಚಕ ನಾರುಬಟ್ಟೆ ಉಟ್ಟಿದ್ದು ನನಗೂ ಉಡಿಸಿದಂತೇ ಆಯಿತಲ್ಲವೇ! ಹಾಗಾಗಿಯೇ ನನ್ನ ತಮಾಷೆಗೆ ಸಿಟ್ಟು ಮಾಡಿಕೊಳ್ಳದಿರು. ತಮಾಷೆಯ ಸಂದರ್ಭದಲ್ಲಿ ನಕ್ಕು ಹಗುರಾಗಿಸು ನಿನ್ನ ಮನದ ತುಮುಲವನ್ನು. ನಾನೂ ಧರಿಸಿದಂತೆ ಆಗುವುದೆಂದು ನೀನು ಯಾಕೆ ಯೋಚಿಸಲಿಲ್ಲ. ಚಿಂತೆ ಮಾಡದಿರು. 'ಅರ್ಧೋ ವಾ ಏಷ ಆತ್ಮನೊ ಯತ್ ಪತ್ನೀ ' ಎಂಬ ವೇದದ ಮಾತಿನಂತೆ ಪತಿ ಪತ್ನಿಯರು ಅರ್ಧ ಭಾಗಗಳಲ್ಲವೇ! ಅವರು ಒಂದಾದಾಗ 'ದಂಪತಿ' ಗಳಾಗುವರು. ಹಾಗಾಗಿ ನಾನು ಧರಿಸಿದರೂ ಈಗ ಏನೂ ವಿಷಮ ಪರಿಣಾಮ ಉಂಟಾಗದು.ಚಿಂತೆಸದಿರು ಪ್ರಾಣಕಾಂತೆ ಎಂದು ರಾಮನ ಅರ್ಥಪೂರ್ಣವಾದ ಮಾತು.ಆದರೆ ಮುಂದಿನ ಕ್ಷಣವೇ ಅಭಿಷೇಕ ನಿಲ್ಲುವ ಸಂದೇಶ ನಾಟಕದಲ್ಲಿ ಕಂಡುಬರುವುದು.ಅದು ಭಾಸನ ನಾಟಕೀಯ ತಿರುವುಗಳ ಸುಂದರ ಸನ್ನಿವೇಶ ಎನ್ನಬಹುದೇನೊ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ