🌹ಶಾಕುಂತಲದ ಸುಂದರ

*आचार इत्यवहितेन मया गृहीता या वेतृयष्टिरवरोधगृहेषु राज्ञ: । काले गते बहुतिथे मम सैव जाता प्रस्थानविक्लवगतेरवलम्बनार्था ।।*

_ಕಾಳಿದಾಸನ ಒಂದು ಮಾರ್ಮಿಕ ಮಾತು. ಕಂಚುಕಿ ನುಡಿಯುತ್ತಿದ್ದಾನೆ. ರಾಜನ ಅಂತ:ಪುರದಲ್ಲಿ ನಿಯಮಿಸಲ್ಪಟ್ಟವರು ಹಿಡಿದುಕೊಳ್ಳಬೇಕೆಂಬ ಸಂಪ್ರದಾಯವನ್ನನುಸರಿಸಿ ಯಾವ ಬೆತ್ತದ ದಂಡ ಇಷ್ಟು ಕಾಲ ಹಿಡಿದೆನೋ ಅದೇ ದಂಡವು ಬಹಳ ಸಮಯದ ನಂತರ ಈಗ ನಡೆಯುವಾಗ ತಡವರಿಸುವ ನನಗೆ ಊರಿಕೊಳ್ಳಲು ಆಧಾರವಾಗಿ ಇಟ್ಟುಕೊಳ್ಳಲು ಬೇಕಾಗಿದೆ.ಬಿದಿರಿನ ಕೋಲು ಅಂತ:ಪುರದ ಅಧಿಕಾರಿ ಹಿಡಿಯುವುದು ರಾಜರ ಮನೆಯ ಪದ್ಧತಿ.ಈಗಲೂ ದೇವಸ್ಥಾನಗಳ ಉತ್ಸವಗಳಲ್ಲಿ ಇಬ್ಬರು ದಂಡಧಾರಿಗಳಿರುತ್ತಾರೆ. ಹೆಚ್ಚು ಸನಿಹ ಯಾರೂ ಬರದಂತೆ ತಡೆಯುವ ಕೋಲೂ ಹೌದದು. ಈಗ ನಡಿಗೆಯ ಕಂಪನದಿಂದಾಗಿ ( ಹೆಚ್ಚು ವಯಸ್ಸಾದದ್ದರಿಂದ) ಬೀಳುವೇನೋ ಎಂದೆನಿಸಿದಾಗ ಆಧಾರವಾಗಿ ಈ ಕೋಲೇ ಉಪಯೋಗಿ ಆಗಿದೆ. ಈಗ ಅದರ ಪ್ರಯೋಜನ ಅವಲಂಬನೆಯೇ ಆಗಿದೆ.ಹಿಂದೆ ಯಾರನ್ನಾದರೂ ಗದರಿಸಲು ಸಾಧ್ಯವಾಗುತ್ತಿತ್ತೇನೋ ಆದರೆ ಈಗ ನನ್ನ ಪರಿಸ್ಥಿತಿಗೆ ಸಹಾಯಕವಾಗಿ ನಿಂತಿದೆ ಈ ದಂಡ.ನಮ್ಮ ಆಚರಣೆಗಳನೇಕ ಕಂಚುಕಿಯ ದಂಡಧಾರಣೆಯಂತೆಯೇ ಇವೆ.ನಮಸ್ಕಾರ ಮಾಡುತ್ತೇವೆ.ಯಾರಿಗೆ ಮಾಡುವೆವೋ ಅವರ ಬಗ್ಗೆ ಯಾವ ಭಾವನೆಯೂ ಇಲ್ಲದೇ ಕಾಟಾಚಾರಕ್ಕೆಂಬಂತೆ ಮಾಡುತ್ತೇವೆ.ದೇವರಿಗೆ ನಮನ ಸಲ್ಲಿಸುವಾಗಲೂ ಭಕ್ತಿಯ ಕೊರತೆ ಕಾಡುತ್ತದೆ. ಪ್ರಸಾದದಲ್ಲಿ ರುಚಿ ಹುಡುಕುತ್ತೇವೆ, ಹೇಗೆ ಇರಲಿ ದೇವರದೆಂದು ಯಥೇಚ್ಛ ತಿನ್ನುವುದಿಲ್ಲ.ರುಚಿಯಾಗಿದ್ದರೆ ಸಾಕೆನಿಸುವಷ್ಟು ಪ್ರಸಾದ ಸ್ವೀಕರಿಸುತ್ತೇವೆ.ಯಾವ ಕರ್ಮವನ್ನೂ ನಮ್ಮದೆಂದು ದೇವರಿಗೆಂದು ಮಾಡುವುದಿಲ್ಲ.ಯಾರದೋ ಕೆಲಸವೆಂಬಂತೆ ಮಾಡುತ್ತಾ ಹೋಗುತ್ತೇವೆ.ಇವೆಲ್ಲಕ್ಕೆ ಪರಿಹಾರ ಅರ್ಥಪೂರ್ಣ ಅಚರಣೆ.ಕಾಳಿದಾಸನ ಮಾತೂ ಇದನ್ನೇ ಧ್ವನಿಸುತ್ತಿದೆಯೋ ಏನೋ! ಕಂಚುಕಿಯ ಸ್ಥಿತಿಯಂತೆ ಆಗದಿರಲಿ ನಮ್ಮ ಕರ್ಮದಂಡಧಾರಣೆ.ಜೀವನದ ಸಾರ ಪ್ರತಿಯೊಂದು ಕ್ಷಣಗಳಲ್ಲೂ ಅನುಭವಿಸಿ ಮುನ್ನಡೆಯೋಣ._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩