🌹ಶಾಕುಂತಲದ ಸುಂದರ ಪುಷ್ಪ🌹
*सतीमपि ज्ञातिकुलैकसंश्रयां जनोन्यथा भर्तृमतीं विशङ्कते । अत: समीपे परिणेतुरिष्यते प्रियाsप्रिया वीा प्रमदा स्वबन्धुभि: ।।*
_ಶಾಂರ್ಗರವನು ದುಷ್ಯಂತನ ನಡೆಯನ್ನು ಆಕ್ಷೇಪಿಸುತ್ತಿದ್ದಾನೆ. ಪತ್ನಿಯ ವಾಸ ಎಲ್ಲೆಂದು ಲೌಕಿಕರಾದ ನಿಮಗೆ ತಿಳಿದಿಲ್ಲವೇನು? ಅದನ್ನು ನಾವು ಹೇಳಿಕೊಡಬೇಕೇ ನಿಮಗೆ? ಗಂಡನಿದ್ದವಳು ಅಥವಾ ವಿವಾಹಿತ ಮಹಿಳೆ ತವರು ಮನೆಯಲ್ಲಿಯೇ ಬಹಳ ದಿನಗಳ ಕಾಲ ಉಳಿದರೆ ಜನರು ಅವಳ ವಿಷಯದಲ್ಲಿ ಕೆಟ್ಟದ್ದನ್ನೇ ಅಥವಾ ಬೇರೆ ರೀತಿಯಲ್ಲಿಯೇ ಯೋಚಿಸುತ್ತಾರೆ. ಹಾಗಾಗಿ ಗಂಡನಿಗೆ ಅಪ್ರಿಯಳಾದರೂ ಅವಳ ಬಂಧುಗಳು ತಮ್ಮ ಹುಡುಗಿ ಮದುವೆಯಾದವನ ಹತ್ತಿರವೇ ಇರಬೇಕೆಂದು ಅಪೇಕ್ಷಿಸುತ್ತಾರೆ. ಪತಿ ಬದುಕಿರುವಾಗಲೇ ಪತ್ನಿ ತವರು ಮನೆಯಲ್ಲಿಯೇ ಉಳಿದರೆ ಅದು ಜನರ ನಾನಾ ವಿಧದ ಸಂಶಯಗಳಿಗೆ ಕಾರಣವಾಗುತ್ತದೆ. ಅವರ ನಡುವೆ ಸರಿಯಿಲ್ಲವೇನೋ, ಅಥವಾ ಇವಳಿಗೋ/ ಅವನಿಗೋ ಬೇರೆ ಸಂಬಂಧಗಳಿವೆಯೆಂದೋ , ಸ್ವೈರಿಣಿ ಎಂದೋ ಹೀಗೆಲ್ಲ ಶಂಕಿಸುತ್ತಾರೆ. ಪತಿಯ ಮನೆಯಲ್ಲಿಲ್ಲದ ಕ್ಷಣವೇ ಜನರ ಬಾಯಿಗೆ ಅಂತಹ ಮಹಿಳೆ ಆಹಾರವಾಗುವಳು. ಹಾಗಾಗಿ ಗಂಡ ಅವಳನ್ನು ಇಷ್ಟಪಡುತ್ತಿರಲಿ ಇಲ್ಲದಿರಲಿ ಮದುವೆಯಾದ ಕಾರಣ ಅವನ ಮನೆಯಲ್ಲೇ ಅವಳಿರಬೇಕು.ಇದನ್ನೇ ಅವಳ ಬಂಧುಗಳು ಬಯಸುವರು.ಪ್ರಕೃತ ನೀನು ವನದಲ್ಲಿ ಇವಳನ್ನು ವರಿಸಿದ್ದಿ. ಇನ್ನು ಈ ಶಕುಂತಲೆ ನಿನ್ನ ಬಳಿ ಇರಬೇಕಾದವಳು ಹೊರತು ಅಪ್ಪನ ಮನೆಯಲ್ಲಿ ಅಲ್ಲ. ಹಾಗಾಗಿ ನಿನಗೆ ಇಷ್ಟವಿರಲಿ ಇಲ್ಲದಿರಲಿ ಇವಳ ವಾಸ ಇಲ್ಲಿಯೇ ಸೂಕ್ತವಾದುದು.ಕಾಳಿದಾಸನ ಆ ಕಾಲದ ಈ ವ್ಯವಸ್ಥೆ ಈಗಲೂ ಹೆಚ್ಚಾಗಿ ಹಾಗೆಯೇ ಉಳಿದಿದೆ. ಹೆಚ್ಚು ದಿನ ಮಗಳು ತವರಲ್ಲೇ ಉಳಿದರೆ ಜನರು ಅವಳ ನಡತೆಯನ್ನೇ ಶಂಕಿಸುತ್ತಾರೆ ಹೊರತು ಪತಿಯ ಯಾವ ಗುಣಗಳನ್ನೂ ನಿಂದಿಸುವುದಿಲ್ಲ. ಮದುವೆ ಮಾಡಿಕೊಳ್ಳುವಾಗ ಈ ಕಾತಣದಿಂದಲೇ ಜಾಗರೂಕತೆ ವಹಿಸಬೇಕು.ಇಲ್ಲದಿದ್ದರೆ ಮುಂದೆ ಇಂತಹ ಸಂದರ್ಭಗಳಲ್ಲಿ ತೊಂದರೆಯಾದೀತು._
📜ಸಂಗ್ರಹ ✍ ಶ್ರೀನಿಧಿ
ಅಭ್ಯಂಕರ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ