💐ಪ್ರತಿಮಾನಾಟಕದ ಒಂದು ಚಿಕ್ಕ ಸುಮ💐

*समं बाष्पेण पतता तस्योपरि ममाप्यध: । पितुर्मेक्लेदितौ पादौ ममापि क्लेदितं शिर: ।।*

_ಸೀತೆಗೆ ರಾಮ ಹೇಳುವ ಮಾತು.ದಶರಥನ ಕರೆಯಂತೆ ಅವನ ಬಳಿ ಸಾಗಿದಾಗ ಪಟ್ಟಕ್ಕೇರಲು ನಿರ್ದೇಶಿಸಿದರು ನನ್ನ ತಂದೆ.ಅನಂತರ ಇಬ್ಬರ ಸ್ಥಿತಿಯೂ ಒಂದೇ ಆಯಿತು.ಹೇಗೆಂದರೆ ಅವರ ಪಾದಗಳಿಗೆ ನಮಸ್ಕರಿಸಲು ತಲೆ ಬಾಗಿದಾಗ ನನ್ನ ತಲೆ ಆರ್ದ್ರವಾಯಿತು.ಅದೇ ಕ್ಷಣ ಅವರ ಕಾಲುಗಳೂ ಆರ್ದ್ರವಾದವು. ಪುತ್ರನ ಮೇಲಿನ ವಾತ್ಸಲ್ಯವು ದಶರಥನ ಕಣ್ಣುಗಳಲ್ಲಿ ಆನಂದಬಾಷ್ಪವನ್ನು ತರಿಸಿ ನಮಸ್ಕರಿಸುತ್ತಿದ್ದ ರಾಮನ ತಲೆಯನ್ನು ಸೋಕಿದವು.ಅವನ ತಲೆ ತಂದೆಯ ಪ್ರೀತಿಯ ಕಡಲಿನಲ್ಲಿ ಒದ್ದೆಯಾಯಿತು.ಅದೇ ಸಂದರ್ಭದಲ್ಲಿ ತಂದೆ ತನ್ನ ಮೇಲೆ ತೋರಿದ ಪ್ರೀತಿಯು ರಾಮನ ಕಣ್ಣುಗಳಲ್ಲಿಯೂ ಆನಂದಾಶ್ರುಗಳನ್ನು ಸುರಿಸಿತು.ಆಗ ದಶರಥನ ಪಾದಗಳು ಪುತ್ರನ ವಾತ್ಸಲ್ಯದ ಪಾದ್ಯದಿಂದ ಆರ್ದ್ರವಾದವು.ಹೀಗೆ ಇಬ್ಬರ ಸ್ಥಿತಿಯೂ ದೈಹಿಕವಾಗಿ ಭಿನ್ನವಿದ್ದರೂ ಮಾನಸಿಕವಾಗಿ ಒಂದೇ ಆಗಿತ್ತು.ಹರಿವೇ ಉಸಿರಾಗಿರುವ ನೀರಿನ ಗುಣದಂತೆ ಅತಿಶಯವಾದ ಪ್ರೀತಿಯೂ ಕೂಡ.ನಾವು ಒಬ್ಬರಲ್ಲಿ ಹೆಚ್ಚು ಪ್ರೀತಿ ತೋರಿದಷ್ಟೂ ನಮ್ಮಲ್ಲೂ ಅವರ ಪ್ರೀತಿ ಹೆಚ್ಚುತ್ತಲೇ ಹೋಗುವುದು ಎಂಬ ಮಧುರ ಸಂದೇಶ ಕವಿಯ ಮಾತಿನ ಭಾವ._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩