💐ಪ್ರತಿಮಾ ನಾಟಕದ ಒಂದು ವೀರರಸದ ಶ್ಲೋಕ💐
*यदि न सहसे राज्ञो मोहं धनु: स्पृशा मा दया स्वजननिभृत: सर्वोप्येवं मृदु: परिभूयते । अथ न रुचितं मुञ्च त्वं मामहं कृतनिश्चयो युवतिरहितं लोकं कर्तुं यतश्छलिता वयम् ।।*
_ಕಂಚುಕಿಯು ರಾಜನು ಮೂರ್ಛೆ ಹೊಂದಿದನು ಕೈಕೇಯಿಯ ಕಾರಣದಿಂದ ಎಂದು ರಾಮನ ಬಳಿ ನುಡಿಯುತ್ತಾನೆ. ಆಗ ಸಮೀಪದಲ್ಲಿದ್ದ ಲಕ್ಷ್ಮಣನು ಕೋಪದಿಂದ ಈ ಮಾತನ್ನಾಡುವನು. ಶ್ರೀರಾಮ , ನೀನು ಒಂದು ವೇಳೆ ರಾಜನ ಈ ದುರವಸ್ಥೆಯನ್ನು ಸಹಿಸುವುದಿಲ್ಲ ಎಂದಾದರೆ ಈ ಕೂಡಲೇ ಧನುಸ್ಸನ್ನು ಸಜ್ಜುಗೊಳಿಸು.ದಯೆಯನ್ನು ದೂರ ಇಡು.ಯಾರು ರಾಜನ ಈ ಅವಸ್ಥೆಗೆ ಕಾರಣರೋ ಅವರ ಮೇಲೆ ಬಾಣ ಬಿಡಲು ಸಜ್ಜಾಗು. ನಮ್ಮವರೆನಿಸಿಕೊಂಡವರು ಅಪಕಾರ ಎಸಗಿದಾಗ , ಅವರ ಬಗ್ಗೆ ಕ್ರಮ ತೆಗೆದುಕೊಳ್ಳದೆ ಸ್ವಜನರೆಂದು ಕ್ಷಮಿಸುವ ಜನರನ್ನು ಅಥವಾ ಅವರ ವಿಷಯದಲ್ಲಿ ಕ್ರಮ ತೆಗೆದುಕೊಳ್ಳದ ಮೃದುಜನರನ್ನು ಪ್ರಜೆಗಳು ತಿರಸ್ಕರಿಸುವರು.ಅಂಥಹವರು ಜನರ ಅನಾದರಕ್ಕೆ ಪಾತ್ರರಾಗುತ್ತಾರೆ. ಅಣ್ಣ ಒಂದು ವೇಳೆ ನಿನಗೆ ಈ ಕಾರ್ಯ ಇಷ್ಟವಿಲ್ಲದಿರೆ ಪೇಳೆನಗೆ , ನೀನು ಚಿಂತಿಸದಿರು , ನನಗೆ ಸ್ವಾತಂತ್ರ್ಯ ನೀಡು. ಈ ಲೋಕವನ್ನು ಯುವತಿಯರಿಲ್ಲದಂತೆ ಮಾಡಲು ನಿಶ್ಚಯಿಸಿದ್ದೇನೆ. ಏಕೆಂದರೆ ಸ್ತ್ರೀಯ ಕಾರಣದಿಂದಲೇ ನಾವೂ ವಂಚನೆಗೊಳಗಾಗಿದ್ದೇವೆ. ಲಕ್ಮಣ ಭಾವೋದ್ವೇಗದಲ್ಲಾಡುವ ಮಾತು.ನಾಟಕದಲ್ಲಿ ಭಾವ ತೀವ್ರತೆ ಪ್ರೇಕ್ಷಕನ ಮನಕ್ಕೆ ಮುದ ನೀಡುತ್ತದೆ. ಇಲ್ಲೂ ರಾಮನ ಅಭಿಷೇಕ ನಿಂತು ಅಪ್ಪ ಮೂರ್ಛೆಹೊಂದಲು ಕಾರಣವಾದ ಕೈಕೇಯಿಯ ಬಗೆಗೆ ಲಕ್ಮ್ಣಣನಿಗೆ ಸಿಟ್ಟು ಬಂದು ಹೀಗೆ ಹೇಳುತ್ತಿದ್ದಾನೆ. ನೀನು ರಾಜನ ಕಷ್ಟವನ್ನು ಸಹಿಸುವುದೆಲ್ಲವೆಂದಾದರೆ ನೀನೇ ಕೈಕೇಯಿಯನ್ನು ಕೊಲ್ಲು. ತಪ್ಪು ಮಾಡಿದವರು ತಮ್ಮವರೆಂದು ಮನ್ನಿಸಿದವರನ್ನು ಲೋಕ ಕ್ಷಮಿಸಲಾರದು.ಅವರು ನಿಂದ್ಯರಾಗುವರು.ನೀನು ಅವಳನ್ನು ಕ್ಷಮಿಸಿ ಲೋಕನಿಂದಿತನಾಗದಿರು.ಇಲ್ಲಿ ಕವಿ ಕೊಡುವ ಸಂದೇಶ ನಮಗೆಲ್ಲರಿಗೂ ಮಾದರಿ. ದಂಡನೆ ವಿಧಿಸುವಾಗ ಅಪರಾದಿ ಹೌದೋ ಅಲ್ಲವೋ ನಿರ್ಣಯಿಸಿ ಶಿಕ್ಷೆ ವಿಧಿಸಬೇಕೇ ಹೊರತು ನಮ್ಮ ಜನ ,ಹೊರಗಿನವರು ಎಂದಲ್ಲ ನ್ಯಾಯ ನಿರ್ಣಯ. ಹಾಗೆ ಮಾಡಿದರೆ ಜನರ ತಿರಸ್ಕಾರ ಹೊಂದಬೇಕಾಗುವುದು. ನಿನಗಿಷ್ಟವಿಲ್ಲದಿರೆ ಎನಗೆ ಆದೇಶಿಸು, ನಾನು ನಿಶ್ಚಯಿಸಿದ್ದೇನೆ. ಈ ಲೋಕದಲ್ಲಿ ಯುವತಿಯರಿಂದಲ್ಲವೇ ಇಂತಹ ಅನರ್ಥ ಉಂಟಾಗುವುದು, ಅವರನ್ನೇ ಕೊಂದರೆ ಅನರ್ಥ ಪರಂಪರೆ ಎಲ್ಲವೂ ಕೊನೆಗೊಂಡೀತು ಎಂಬ ಸಿಟ್ಟಿನ ಪರಾಕಾಷ್ಠೆಯ ಭಾವ. ಅಪ್ಪನ ಹಾಗೂ ರಾಮನ ಮೇಲಿನ ಅತಿಯಾದ ಪ್ರೀತಿ ಲಕ್ಷ್ಮಣನಿಗೆ ಹೀಗೆ ಹೇಳಿಸುತ್ತದೆ. ನಮ್ಮ ಅತ್ಯಂತ ಆಪ್ತರು ಕಷ್ಟಕ್ಕೊಳಗಾದಾಗ ನಾವು ಏನೇನನ್ನೋ ಬಡಬಡಿಸುವುದಿಲ್ಲವೇ! ಇಲ್ಲೂ ಹಾಗೆಯೇ ಕೈಕೇಯಿಯ ಮೇಲಿನ ಸಿಟ್ಟು ಸ್ತ್ರೀ ಜಾತಿಯೆಡೆಗೆ ತಿರುಗಿ ಹೀಗೆ ಹೇಳಿಸುತ್ತದೆ. ತನ್ನ ತಾಯಿ , ಪತ್ನಿಯರು ಸ್ತ್ರೀಯರೇ ಎಂಬ ಸತ್ಯ ಈಗ ಕಾಣುತ್ತಿಲ್ಲ ಅವನಿಗೆ.ಮನದಲ್ಲಿ ಕಾಣುವುದೊಂದೇ ಅಪ್ಪನ ಮೇಲಿನ ಅಕ್ಕರೆ, ರಾಮನ ಮೇಲೆ ನಿರ್ವ್ಯಾಜ ಪ್ರೀತಿ. ಕವಿ ಇಷ್ಟು ಸಿಟ್ಟಿನ ಮಾತು ನುಡಿಸುವಾಗಲೂ ಸಂದೇಶ ಕೊಡುವ ಪರಿ, ಭಾವಾಭಿವ್ಯಕ್ತತೆಯ ತೀವ್ರತೆ ಪ್ರದರ್ಶಿಸುವುದು ತಾನೇ ಪಾತ್ರವಾಗಿ ಬರೆದಾಗ ಮಾತ್ರ ಸಾಧ್ಯ. ಅದು ಭಾಸನ ಮಹಿಮೆ. ನಾವೂ ಲಕ್ಷ್ಮಣನಂತೆ ರಾಮ ಪ್ರೀತಿ ಬೆಳೆಸಿಕೊಂಡು ಆದರ್ಶನರರಾಗೋಣ._
📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ