🌹ಶಾಕುಂತಲದ ಒಂದು ಸುಮ🌹

*अर्थो हि कन्या परकीय एव तामद्य सम्प्रेष्य परिग्रहीतु: । जातो ममायं विशद: प्रकामं प्रत्यर्पितन्यास इवान्तरात्मा ।।*

_ಶಕುಂತಲೆ ಮರಗಳ ಸಾಲಿನಲ್ಲಿ ಮರೆಯಾಗಿದ್ದಾಳೆ.ಕಣ್ವರು ಒಂದೆಡೆ ದು:ಖಪಡುತ್ತಿದ್ದಾರೆ.ಮತ್ತೊಂದೆಡೆ ಸಂತೋಷವೂ ಆಗಿದೆ.ಅವರದೇ ಮಾತಿನಿಂದ ಅದು ಅಭಿವ್ಯಕ್ತವಾಗಿದೆ. ಕನ್ಯೆ ಎಂದಿಗಾದರೂ ಪರರ ಸ್ವತ್ತೇ. ಹಡೆದ ಮಗಳೆಂದು ಮನೆಯಲ್ಲೇ ಇಟ್ಟುಕೊಳ್ಳಲು ಸಾಧ್ಯವಿಲ್ಲ.ಯಾವತ್ತಿದ್ದರೂ ಯೋಗ್ಯನ ಜೊತೆ ವಿವಾಹ ಮಾಡಿಕೊಡಬೇಕು. ಅವಳನ್ನು ಇಂದು ಪತಿಯ ಮನೆಗೆ  ಕಳುಹಿಸಿ ನನ್ನ ಮನಸ್ಸು ಬೇರೆಯವರು ನನ್ನಲ್ಲಿ ಇಟ್ಟ 'ನ್ಯಾಸ' ವನ್ನು ಅವರಿಗೆ ಹಿಂತಿರುಗಿ ಕೊಟ್ಟಷ್ಟು ಹಗುರಾಗಿದೆ.ನಿಕ್ಷೇಪವಾಗಿ ಇಟ್ಟ ನಿಧಿಯನ್ನು ಅದರ ಒಡೆಯನಿಗೆ ಹಿಂದಿರುಗಿಸಿದಾಗ ಆಗುವ ಋಣಮುಕ್ತತೆಯ ಭಾವಕ್ಕೂ ಮಗಳನ್ನು  ಪತಿಯ ಮನೆಗೆ ಕಳುಹಿಸಿದ ಮೇಲೆ ಜವಾಬ್ದಾರಿ ಪೂರೈಸಿದ ತಂದೆಯ ಮನಸ್ಸಿನಲ್ಲಿ ಉಂಟಾಗುವ ಕೃತಕೃತ್ಯಭಾವಕ್ಕೂ ಸಾಮ್ಯವನ್ನು ಮನೋಹರವಾಗಿ ಕಲ್ಪಿಸಲಾಗಿದೆ. ಹೀಗೆ ಕಣ್ವರ ಮನಸ್ಸು ಹಗುರವಾಗಿ ಆನಂದ ಅನುಭವಿಸುತ್ತಿದ್ದಾರೆ. ಜವಾಬ್ದಾರಿ ಪೂರೈಸಿದ ತೃಪ್ತಿಯೂ ಇದೆ. ಅದರೂ ಮಗಳ ಅಗಲುವಿಕೆ ಕೆಲವೊಮ್ಮೆ ಮನಕ್ಕೆ ಕಳವಳ ತಂದುಕೊಡುತ್ತದೆ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩