🌹ಶಾಕುಂತಲದ ಒಂದು ಸುಮ🌹
*भानु: सकृद्युक्ततुरङ्ग एव रात्रिं दिवं गन्धवह: प्रयाति । शेष: सदैवाहितभूमिभार: षष्ठांशवृत्तेरपि धर्म एष: ।।*
_ಕಂಚುಕಿಯು ರಾಜನ ಬಗ್ಗೆ ನುಡಿಯುವ ಮಾತು. ರಾಜನ ಕೆಲಸ ಅವಿಶ್ರಾಂತವಾದುದು ಎನ್ನುತ್ತಾ ಹೀಗೆ ನುಡಿಯುತ್ತಾನೆ. ಸೂರ್ಯನು ಒಮ್ಮೆ ಮಾತ್ರ ತನ್ನ ರಥಕ್ಕೆ ಕುದುರೆಗಳನ್ನು ಹೂಡಿದ್ದು.ಅನಂತರ ಅವನ ರಥ ಮೂರು ಲೋಕಗಳನ್ನು ನಿರಂತರವಾಗಿ ಬೆಳಗಿಸುತ್ತಾ ಸುತ್ತುತ್ತಿದೆ.ಅವನೆಂದೂ ವಿರಾಮ ಬಯಸಿಲ್ಲ. ವಾಯುದೇವನು ಅಹರ್ನಿಶಿ ಬೇಸರವಿಲ್ಲದೆ ಬೀಸುತ್ತಾನೆ.ಅವನ ಗತಿ ನಿಂತರೆ ಉಳಿದವರ ಗತಿ ನಿಲ್ಲುತ್ತದೆ.ದೇವನ ಆಣತಿಯಂತೆ ಭೂಮಿಯ ಭಾರವನ್ನು ಹೊತ್ತ ಆದಿಶೇಷನು ಶ್ರಮವೆಂದು ಎಂದಿಗೂ ಇಳಿಸಲಿಲ್ಲ. ಪ್ರಜೆಗಳ ಪಾಪ ಪುಣ್ಯ ಧನ ಮುಂತಾದವುಗಳ ಆರನೇ ಒಂದು ಭಾಗವನ್ನು ಸ್ವೀಕರಿಸುವ ರಾಜನ ಕರ್ತವ್ಯವೂ ಹೀಗೆಯೇ ಇದೆ.ಪ್ರಜೆಗಳಿಗಾಗಿ ಸದಾ ಕರ್ತವ್ಯದಲ್ಲೇ ಇರಬೇಕು. ಆ ಪದವಿ ಪಡೆದ ಮೇಲೆ ಅವನಿಗೆ ಒದಗಿ ಬಂದ ಜವಾಬ್ದಾರಿ. ಲೋಕಕಾರ್ಯ ನಿರ್ವಹಿಸುವ ಅವನ ಅಧಿಕಾರಕ್ಕೆ ವಿಶ್ರಾಂತಿ ನಿಷಿದ್ಧ.ಸೂರ್ಯ ವಾಯು ಶೇಷ ಮತಾದವರು ಹೇಗೆ ವಿಶ್ರಾಂತಿ ಇಲ್ಲದೇ ಕಾರ್ಯನಿರ್ವಹಿಸುವರೋ ಹಾಗೆಯೇ ರಾಜನೂ ವಿಶ್ರಾಂತಿ ಇಲ್ಲದೇ ಪ್ರಜಾ ರಕ್ಷಣೆಯ ಕಾರ್ಯದಲ್ಲಿ ನಿರತನಾಗಿರಬೇಕಾಗುವುದು ಎಂದು ಅಭಿಪ್ರಾಯ. ಮಾಲಾಪ್ರತಿವಸ್ತೂಪಮಾ ಅಲಂಕಾರ. ನಮ್ಮ ಈಗಿನ ಪ್ರಧಾನಿಯ ಕಾರ್ಯ ವೈಖರಿ ಕವಿಯ ಆಶಯಕ್ಕೆ ಅನುಗುಣವಾಗಿದೆ.ರಾಜನು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ತಪ್ಪದಿದ್ದಾಗ ಪ್ರಜೆಗಳು ಕೂಡ ತಮ್ಮ ತಮ್ಮ ವೃತ್ತಿಯನ್ನು ನಿರ್ವಂಚನೆಯಿಂದ ನಿರ್ವಹಿಸುವರು.ಯಥಾ ರಾಜಾ ತಥಾ ಪ್ರಜಾ: ಎಂಬಂತೆ.ಹಾಗಾಗಿ ದುಷ್ಯಂತನ ಆಡಳಿತದ ವೈಖರಿ ಎಲ್ಲಾ ರಾಜರಿಗೂ ಅದರ್ಶಪ್ರಾಯ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ