💐ಪ್ರತಿಮಾನಾಟಕದ ಸುಂದರ ಸುಮ💐

*शरीरे‌sरि: प्रहरति हृदये स्वजनस्तथा । कस्य स्वजनशब्दो मे लज्जामुत्पादयिष्यति ।।*

_ರಾಮನಾಡುವ ಮಾತು. ಕಂಚುಕಿ ಬಂದು ಅನರ್ಥವಾಯಿತು, ರಾಜನಿಗೆ ಎಂದು ಭೀತಿಯಿಂದ ನುಡಿದಾಗ ರಾಮನು ಯಾರಿಂದ ಎಂದು ಪ್ರಶ್ನಿಸುತ್ತಾನೆ.ಆಗ ತನ್ನವರಿಂದಲೇ ಅಂದರೇ ಸ್ವಜನರಿಂದಲೇ ಎನ್ನುತ್ತಾನೆ. ಆಗ ಹೇಳುವ ಮಾತು. ಶತ್ರುವು ಯುದ್ಧಭೂಮಿಯಲ್ಲಿ ಬಾಣಗಳಿಂದ ಅಥವಾ ಆಯುಧಗಳಿಂದ ಶರೀರವನ್ನು ಪ್ರಹರಿಸುತ್ತಾನೆ.ಆದರೆ ಸ್ವಜನರು ನಮ್ಮವರೆನಿಸಿಕೊಂಡವರು ಹೃದಯಕ್ಕೆ ಆಘಾತ ಕೊಡುತ್ತಾರೆ.ಹೃದಯಕ್ಕೆ ಹೊಡೆಯುತ್ತಾರೆ.ಮನಸ್ಸು ನೋಯಿಸುತ್ತಾರೆ.ಅಂತಹ ಆಘಾತ ಉಂಟುಮಾಡಿದ ರಾಜನ ಮನಸ್ಸನ್ನು ನೋಯಿಸಿದ ಯಾವ ವ್ಯಕ್ತಿಯನ್ನಾದರೂ ನಾನು ಸ್ವಜನ ಎಂಬ ಶಬ್ದದಿಂದ ಹೇಗೆ ಕರೆಯಲಿ! ಅದಕ್ಕೂ ನನಗೆ ನಾಚಿಕೆ ಆಗುತ್ತಿದೆ.ಅವರು ಸ್ವಜನರು ಹೌದೋ ಅಲ್ಲವೋ ಆ ಪದದಿಂದ ವ್ಯವಹಾರಕ್ಕೂ ಯೋಗ್ಯರಲ್ಲ. ರಾಜನ ಮನೋವೇದನೆಗೆ ಕಾರಣರಾದ ವ್ಯಕ್ತಿ ನಮ್ಮವರೆಂದು ಕರೆಸಿಕೊಳ್ಳಲು ಕೂಡ ಅನರ್ಹರು.ಅವರು ಶತ್ರುಗಳಿಗಿಂತಲೂ ಹೆಚ್ಚು ನಮ್ಮನ್ನು ಬಾಧಿಸುತ್ತಾರೆ.ಶತ್ರುಗಳ ಪ್ರಹಾರದ ಗಾಯ ದಿನಗಳೆದ ಹಾಗೆ ಮಾಸಬಹುದು.ಆದರೆ ಮನಕ್ಕಾದ ನೋವು ಆಪ್ತರೆನಿಸಿಕೊಂಡವರು ಕೊಟ್ಟ ವೇದನೆ ಅದು ಹೃದಯವನ್ನೇ ಸೀಳುವಂತಹದು.ನಮ್ಮ ಸುತ್ತಲೂ ಎಷ್ಟೋ ಸಲ ಇಂತಹ ಜನರಿರುತ್ತಾರೆ.ದಶರಥನಂತೆ ಮೈ ಮರೆತು ನಂತರ ದು:ಖಿಸುತ್ತೇವೆ.ಅವರು ಸ್ವಜನರೋ ಶ್ವಜನರೋ ಎಂಬ ಸಂಶಯ ಆ ಕಾಲದಲ್ಲಿ ಉದ್ಭವಿಸುತ್ತದೆ.ಅಂತಹವರ ಬಗ್ಗೆ ಜಾಗರೂಕರಾಗಿರಬೇಕು. ರಾಮನ ಈ ಮಾತು ಸಾರ್ವಕಾಲಿಕ ಸತ್ಯ.ಸ್ವಜನರೆಂದು ಅವರನ್ನು ಕರೆಯುವುದಾದರೂ ಹೇಗೆ! ನೋವುಂಟುಮಾಡುವವರು ಬೀದಿಯಲ್ಲಿ ಬಿದ್ದ ಮಾಂಸದ ತುಂಡನ್ನು ಕಲಹ ಮಾಡುತ್ತಾ ಕಿತ್ತು ತಿನ್ನುವ ನಾಯಿಗಳಂತೆ ಹೊರತು ನಮ್ಮವರಲ್ಲ. ನಮ್ಮ ನಡೆ ನುಡಿಗಳಲ್ಲಿ  ಸೌಮ್ಯರಾಗಿ, ಉಪಕಾರಿ ಬುದ್ಧಿಯನ್ನು ಹೊಂದುತ್ತಾ ಯಾರನ್ನೂ ದ್ವೇಷಿಸದೇ ಸದಾ ಒಳಿತನ್ನೇ ಬಯಸುತ್ತಾ ಎಲ್ಲರಿಗೂ ಸ್ವಜನರಾಗೋಣ ಎಂಬುದು ಭಾಸಕವಿಯ ಆಶಯ.( ಶ್ವ = ನಾಯಿ,ಅವುಗಳಿಗೂ ನಿಯತ್ತು ಇರುತ್ತದೆ.)_

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩