🌹ಶಾಕುಂತಲದ ಸುಂದರ ಕುಸುಮ🌹
*रम्याणि वीक्ष्य मधुरांश्च निशम्य शब्दान् पर्युत्सुकीभवति यत्सुखितोपि जन्तु: । तच्चेतसा स्मरति नूनमबोधपूर्वं भावस्थिराणि जननान्तरसौहृदानि ।।*
_ದುಷ್ಯಂತನ ಮಧುರ ಮಾತು.ಹಂಸಪದಿಕೆಯ ಮಧುರಸ್ವರದಲ್ಲಿ ಗಾನವೊಂದನ್ನು ಆಲಿಸಿದ ರಾಜ ಚಿಂತಿಸುತ್ತಿದ್ದಾನೆ. ಈ ಹಾಡನ್ನು ಕೇಳಿ ಪ್ರಿಯರ ವಿರಹ ಇಲ್ಲದಿದ್ದರೂ ಉದ್ವಿಗ್ನನಾಗುತ್ತಿದ್ದೇನೆ.ಏನು ಕಾರಣ. "ಸುಂದರವಾದ ವಸ್ತುಗಳನ್ನು ನೋಡಿ ಅಥವಾ ಮಧುರವಾದ ಧ್ವನಿಯನ್ನು ಕೇಳಿ ಸುಖವಾಗಿರುವ ವ್ಯಕ್ತಿಯೂ ನನ್ನಂತೆ ತುಂಬ ಭಾವುಕನಾದರೆ ಅಥವಾ ಉದ್ವಿಗ್ನನಾದರೆ , ಬಹುಶ: ಅವನು ತನಗೆ ತಿಳಿಯದಂತೆ ಸಂಸ್ಕಾರ ರೂಪದಲ್ಲಿ ಮನದಲ್ಲಿ ಅಚ್ಚೊತ್ತಿದ ಜನ್ಮ ಜನ್ಮಾಂತರದ ಯಾವುದೋ ಸ್ನೇಹವನ್ನು ಸ್ಮರಿಸುತ್ತಿರುತ್ತಾನೆ.ದುಷ್ಯಂತನಿಗೆ ಅವನ ಭಾವುಕತೆಗೆ ಕಾರಣ ತಿಳಿಯುತ್ತಿಲ್ಲ.ಆದರೂ ಯಾರನ್ನೋ ಬಿಟ್ಟವನಂತೆ ಅವನಿಗೆ ತೋರುತ್ತಿದೆ.( ನಿಜಕ್ಕಾದರೆ ಶಕುಂತಲೆ ಪರಿತ್ಯಕ್ತಳು ಆದರೆ ದೂರ್ವಾಸರ ಶಾಪದಿಂದ ಅದು ರಾಜನಿಗೆ ನೆನಪಿಲ್ಲ.) ಸಂಗೀತ ಶಾಲೆಯ ಹಂಸಪದಿಕೆಯ ಧ್ವನಿಯನ್ನು ಕೇಳಿದೊಡನೆ ದುಷ್ಯಂತನಿಗೆ ಅದೇಕೋ ಕಳವಳವುಂಟಾಯಿತು. ಮಧುರವಾದ ಹಾಡನ್ನು ಕೇಳಿ ಮನದಲ್ಲಿ ಕಳವಳವೇಕೆಂದು ಅವನು ಚಿಂತಿಸುತ್ತಿದ್ದಾನೆ. ಯಾವುದೋ ಪೂರ್ವಜನ್ಮದ ಘಟನೆ ಈ ಕಳವಳಕ್ಕೆ ಕಾರಣವಿರಬಹುದೆಂದು ಅವನ ಸಂಶಯ. ಪ್ರೀತಿಸಿರುವ ಶಕುಂತಲೆಯನ್ನು ಶಾಪದಿಂದಾಗಿ ಮರೆತಿರುವುದರಿಂದ ಅದು ಪೂರ್ವಜನ್ಮದ ಘಟನೆಯಂತೆ ಕೇವಲ ಸಂಸ್ಕಾರವಾಗಿ ಉಳಿದು ಅವಳ ಹಾಡಿನಿಂದ ಮನವು ಕಳವಳಗೊಳ್ಳುತ್ತಿದೆ.ಪಾಪ ದುಷ್ಯಂತನಿಗೆ ಅದರ ಅರಿವಿಲ್ಲ.ಎಷ್ಟು ಸುಂದರ ಕವಿಯ ಚಿತ್ರಣ.ನಮ್ಮ ಜೀವನದಲ್ಲೂ ಇಂತಹ ಕಳವಳಗಳು ಅನೇಕ ಬಾರಿ ಎದುರಾಗುತ್ತವೆ.ನಾವೂ ಯಾರ ಬಗ್ಗೆಯೋ ಎಂದು ನಿರ್ಲಕ್ಷಿಸುತ್ತೇವೆ. ನಮ್ಮದೇ ಎಂದು ಅರಿವಾದಾಗ ಶೋಕಿಸುತ್ತೇವೆ.ಅಪಾಯದ ಮುನ್ಸೂಚನೆ ದೊರೆತರೂ ಉಪಾಯ ಮಾಡುವುದನ್ನು ಮರೆತು ಆಮೇಲೆ ಪಾಯ ಬಿದ್ದುಹೋದಂತೆ ಗೋಳಿಡುತ್ತೇವೆ.ಮನಸ್ಸು ಮಧುರ ಸಂಗತಿಗಳನ್ನು ಕಂಡು ಎಂದಿಗೂ ಹರ್ಷಿಸುತ್ತದೆ.ಹೀಗಿಲ್ಲದಾಗ ವಿಕಾರಕ್ಕೆ ಏನೋ ಪ್ರಬಲ ಕಾರಣವಿರಬೇಕೆಂಬ ಮನೋವೈಜ್ಞಾನಿಕ ಶಂಕೆ ಕಾಳಿದಾಸನ ಉನ್ನತ ಚಿಂತನೆಯ ಒಂದು ಉದಾಹರಣೆ.ನಮ್ಮ ಮನ ಮಾಧುರ್ಯವನ್ನು ಎಂದಿಗೂ ಆಸ್ವಾದಿಸಲಿ , ಕಳವಳವನ್ನು ಕವಳದಂತೆ ನುಂಗಲಿ ಎಂದು ಆಶಿಸೋಣ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ