🌹ಶಾಕುಂತಲದ ಒಂದು ಶ್ಲೋಕ🌹


*स्वसुखनिरभिलाष: खिद्यसे लोकहेतो: प्रतिदिनमथवा ते वृत्तिरेवं विधैव । अनुभवति हि मूर्ध्ना पादपस्तीव्रमुष्णं शमयति परितापं छायया संश्रितानाम् ।।*

_ವೈತಾಲಿಕರಾಡುವ ಮಾತು. ಹೊಗಳುಭಟರನ್ನು ಸಂಸ್ಕೃತದಲ್ಲಿ ವೈತಾಲಿಕ ಎನ್ನುತ್ತಾರೆ. ರಾಜನೇ, ನೀನು ನಿನ್ನ ಸುಖದ ಅಭಿಲಾಷೆಯನ್ನು ತ್ಯಜಿಸಿ ಪ್ರಜೆಗಳ ಸುಖಕ್ಕಾಗಿ ದಿನವೂ ಪರಿಶ್ರಮಪಡುವೆ. ಇದು ನಿನ್ನ ಪ್ರತಿದಿನದ ಕೆಲಸವೇ ಆಗಿದ್ದರೂ ಕಷ್ಟವೇ ಸರಿ.ಹೇಗೆಂದರೆ ವೃಕ್ಷವು ತನ್ನ ತಲೆಯಲ್ಲಿ ತೀವ್ರವಾದ ಬಿಸಿಲಿನ ತಾಪವನ್ನು ಅನುಭವಿಸಿದರೂ ತನ್ನನ್ನು ನೆರಳಿಗಾಗಿ ಆಶ್ರಯಿಸಿದವರಿಗೆ ಮಾತ್ರ ತಂಪನ್ನೇ ಕೊಡುವುದು. ಮರ ತಾನು ಎಷ್ಟು ಬಿಸಿಲಿನ ತಾಪದಿಂದ ಕಷ್ಟ ಅನುಭವಿಸಿದರೂ ಬಿಸಿಲಿನಿಂದ ಬಳಲಿ ತನ್ನನ್ನು ಯಾರು ಆಶ್ರಯಿಸುವರೊ ಅವರ ಸಂತಾಪವನ್ನು ಎಂದಿಗೂ ಪರಿಹರಿಸುತ್ತದೆ. ರಾಜನ ಕಾರ್ಯವೂ ಹೀಗೆಯೇ ಇರುತ್ತದೆ. ತಾನು ಎಷ್ಟೇ ಕಷ್ಟ ಅನುಭವಿಸಿದರೂ ತನ್ನನ್ನು ನಂಬಿದ ಪ್ರಜೆಗಳ ಬದುಕಲ್ಲಿ ಸುಖವನ್ನೇ ಕರುಣಿಸುತ್ತಾನೆ. ನಮ್ಮ ರಾಜನ ಆಡಳಿತ ಹೀಗೆಯೇ ಇದೆ ಎಂದು ಸ್ತುತಿಸುವ ಮಾತು. ಆಕ್ಷೇಪ ಮತ್ತು ದೃಷ್ಟಾಂತ ಅಲಂಕಾರ. ನಾವು ನಮ್ಮ ಬದುಕನ್ನು ಹೀಗೆಯೇ ನಡೆಸಬೇಕು. ನಾವು ಕಷ್ಟ ಪಟ್ಟರೂ ಇನ್ನೊಬ್ಬರಿಗೆ ಒಳಿತನ್ನೇ ಬಯಸಬೇಕು. ಧರ್ಮರಾಜನು ತಾನು ಎಷ್ಟು ಕಷ್ಟ ಅನುಭವಿಸಿದರೂ ಇನ್ನೊಬ್ಬರ ಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದ. ಹಾಗಾಗಿಯೇ ಅವನು ಉತ್ತಮನೆನಿಸಿದ.ನಾವೂ ಕೂಡ ಕಷ್ಟದಲ್ಲಿರುವವರ ಬಾಳಿಗೆ ಆಸರೆಯಾಗೋಣ, ಮುಂದೆ ನಮ್ಮ ಕಷ್ಟಕ್ಕೂ ಯಾರಾದರೂ ಆಧಾರವಾಗಬಹುದು ಎಂಬ ವಿಶ್ವಾಸದಿಂದ._

📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩