ಬ್ರಹ್ಮಣಿ = ವೇದೇ ,ಚರತೀತಿ = ಸ್ತುತಿರೂಪೇಣ ವರ್ತತೇ ಎಂಬಂತೆ ವೇದಗಳಲ್ಲಿ ಸ್ತುತಿಸಲ್ಪಟ್ಟವಳು  ದುರ್ಗೆ.ಅಥವಾ ವೇದಗಳ ಸಾರವೇ ಅವಳು.ನವರಾತ್ರಿಯ ಎರಡನೇ ದಿನದ ದುರ್ಗೆಯ ರೂಪ ವೇದಪ್ರತಿಪಾದ್ಯ ದೇವಿಯ ರೂಪ.ಇನ್ನೊಂದು ಅರ್ಥ= ಬ್ರಹ್ಮಚರ್ಯ ವ್ರತದಲ್ಲೇ ಇರುವವಳು.ಅಂದರೆ ಗುಣಗಳ ನಿಯಂತ್ರಣ ಹೊಂದಿದವಳು.ಬ್ರಹ್ಮಚಾರಿಣಿ ಸ್ತ್ರೀ ಉತ್ತಮ ಪತ್ನಿ ಎಂಬ ಮನುವಿನ ಮಾತಿನಂತೆ ಸ್ತ್ರೀಯರಿಗೆಲ್ಲ ಆಕೆ ಆದರ್ಶಳು.(೫ಅಧ್ಯಾಯ ).ಕ್ರೋಧ ದುಷ್ಟರ ನಿಗ್ರಹ ಕಾಲದಲ್ಲಿ ಮಾತ್ರ.ವೇದಗಳಲ್ಲಿ ನಾನಾ ಮಂತ್ರಗಳಿಂದ ಸ್ತುತಿಸಲ್ಪಟ್ಟ ಆ ದೇವಿ ನಮಗೆ ವೇದ ಅಂದರೆ ಪರಮಾರ್ಥ ಸತ್ಯದ ಜ್ಞಾನ ತಂದುಕೊಡಲಿ.ವಸಿಷ್ಟರು ವಿವಾಹಿತರಾಗಿದ್ದರೂ  ತನ್ನ ಕರ್ಮಗಳನ್ನೆಲ್ಲ ಭಗವಂತನಿಗೆ ಅರ್ಪಿಸಿ ಬ್ರಹ್ಮಚಾರಿ,ನಿತ್ಯೋಪವಾಸಿಗಳಾಗಿದ್ದರಂತೆ.ಹಾಗೆ ಬ್ರಹ್ಮಚರ್ಯದ  ಅಂದರೆ ದೇವರೆಡೆಗೆ ಸದಾ ತುಡಿಯುವ ಮನ ನಮ್ಮದಾಗಲಿ. ಅಂತಹ ಪ್ರೇರಣೆ ಬ್ರಹ್ಮಚಾರಿಣಿ ಆ ಮಾತೆ ನಮ್ಮೆಲ್ಲರಿಗೂ ನೀಡಲಿ.
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩