💐ಪ್ರತಿಮಾನಾಟಕದ ಒಂದು ಕುಸುಮ💐
*मङ्गलार्थेsनया दत्तान् वल्कलांस्तावदानय । करोम्यन्यैर्नृपैर्धर्मं नैवाप्तं नोपपादितम् ।।*
_ಹದಿನಾಲ್ಕು ವರ್ಷ ವನವಾಸ ಮಾಡುವ ಬಗ್ಗೆ ನನಗೆ ದು:ಖವಾಗುತ್ತಿರುವುದು, ರಾಜ್ಯ ನಿನ್ನಿಂದ ತಪ್ಪಿಹೋಗುತ್ತದೆ ಎಂದಲ್ಲ , ನಿಷ್ಕಾರಣವಾಗಿ ನಿನಗೆ ಯಾಕೆ ಈ ಶಿಕ್ಷೆ ಎಂದು ಲಕ್ಷ್ಮಣ ಮರುಗಿದಾಗ ರಾಮನ ಸಹಜ ಮಾತು. ಮೈಥಿಲಿ, ಲಕ್ಷ್ಮಣ ಮೂರ್ಛೆ ಹೊಂದಿದ. ಇರಲಿ ಪಿತನ ಆಜ್ಞೆ ನನ್ನ ಕರ್ತವ್ಯ. ತಂದೆಯ ಆಜ್ಞೆಯ ಪಾಲನೆ ಎಂಬ ಮಂಗಳ ಕಾರ್ಯಕ್ಕಾಗಿ ಈ ನಿನ್ನ ಸಖಿ ಕೊಟ್ಟ ನಾರುಬಟ್ಟೆಗಳನ್ನು ಬೇಗ ತಾ. ( ಅಂಕದ ಆದಿಯಲ್ಲಿ ಸಖಿ ಸೀತೆಯ ಒತ್ತಾಯದಂತೆ ತಮಾಷೆಗಾಗಿ ನಾರು ಬಟ್ಟೆ ತಂದಿರುತ್ತಾಳೆ) ಇದು ನನಗೆ ಅತ್ಯಂತ ಮಂಗಳ ಕಾರ್ಯ.ಏಕೆಂದರೆ ಬೇರೆ ನೃಪರು ಈವರೆಗೆ ಮಾಡದಿರುವ ಅಥವಾ ಅವರಿಗೆ ಒದಗಿಬರದ ಬಾಲ್ಯದಲ್ಲೇ ವನವಾಸವೆಂಬ ಉತ್ತಮ ಕೆಲಸ ನನ್ನ ಪಾಲಿಗೆ ಒದಗಿದೆ.ಇದೊಂದು ಸದವಕಾಶ. ನಮ್ಮ ವಂಶದ ನೃಪರೆಲ್ಲರೂ ವಾರ್ಧಕ್ಯದಲ್ಲಿ ಮಾತ್ರ ವನವಾಸ ಕೈಗೊಳ್ಳುತ್ತಿದ್ದರು.ನನಗಾದರೋ ಈ ತರುಣ ವಯಸ್ಸಿನಲ್ಲಿಯೇ ಅದು ಒದಗಿದೆ.ಎಂದಾದರೂ ಮಾಡಲೇಬೇಕಾದ ಕಾರ್ಯ ಇಷ್ಟು ಬೇಗ ಒದಗಿಬಂದಿರುವುದು ನನ್ನ ಪಾಲಿನ ಅದೃಷ್ಟ.ಹಾಗಾಗಿ ತಡಮಾಡದೆ ಕೇವಲ ಹದಿನಾಲ್ಕು ವರ್ಷಗಳಷ್ಟು ಕಾಲದ ಈ ಉತ್ತಮ ಕಾರ್ಯವನ್ನು ಪೂರೈಸಿಬಿಡೋಣ. ಎಂತಹ ಧನಾತ್ಮಕ ಮಾತು. ಕಷ್ಟಗಳು ಬಂದಾಗಲೆಲ್ಲ ನಮ್ಮ ಚಿಂತನೆ ಈ ದಿಕ್ಕಿನಲ್ಲಿ ಸಾಗಿದರೆ ನಮ್ಮ ಪಾಲಿನ ಸುದಿನಗಳೇ ಎಲ್ಲವೂ ಆಗುವವು.ದುರ್ದಿನ ಸಿಗಲಾರದು. ಜೀವನದಲ್ಲಿ ಬರುವ ಪ್ರತಿಯೊಂದು ಕ್ಲಿಷ್ಟ ಪರಿಸ್ಥಿತಿಯನ್ನು ನಮಗೆ ಅನುಕೂಲವೆಂದೇ ಭಾವಿಸಿದಾಗ ನಮಗಿಂತ ಸುಖಿಗಳು ಯಾರಿರುವರು ಈ ಲೋಕದಲ್ಲಿ. ರಾಮನ ನಡತೆ ನಮಗೆ ಯಾಕೆ ಆದರ್ಶ, ಅವನ ಪ್ರತಿಯೊಂದು ಮಾತೂ ಹೇಗೆ ಜೀವನಕ್ಕೆ ಅಳವಡಿಸಿಕೊಳ್ಳಲು ಸಾಧ್ಯ ಎಂಬುದನ್ನು ಅರಿತಾಗ ಜೀವನ ಸುಗಮ._
📜 ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ