ಸ್ತ್ರೀಯರ ಬಗ್ಗೆ ವ್ಯಾಸರ ದೃಷ್ಟಿಕೋನ ಎಷ್ಟು ವಿಶಾಲವಾಗಿತ್ತು ಎನ್ನುವುದರ ಬಗ್ಗೆ ಕೆಲವು ಶ್ಲೋಕಗಳು. ತಥಾಕಥಿತರು ಸ್ತ್ರೀಯರ ಬಗ್ಗೆ ಪುರಾಣಗಳ ಭಾವನೆ ಅರಿಯಲಿ ಎಂಬ ಉದ್ದೇಶ.

*क्रुद्धोपि पुरुषव्याघ्र भीम मा स्म स्त्रियं वधी: । शरीरगुप्त्याभ्यधिकं धर्मं  गोपय पाण्डव ।।*

ಯುಧಿಷ್ಠಿರ ಭೀಮಸೇನ ನಿಗೆ ಹೇಳುವ ಮಾತು.ನೀನು ಕೋಪಗೊಂಡಿದ್ದರೂ ಸ್ತ್ರೀಯನ್ನು ಕೊಲ್ಲಕೂಡದು.ಶರೀರ ರಕ್ಷಣೆಗಿಂತಲೂ ಹೆಚ್ಚಾಗಿ ಧರ್ಮವನ್ನು ರಕ್ಷಿಸು.ಹಿಡಿಂಬನ ವಧೆಯ ನಂತರ ಅವನ ತಂಗಿಯನ್ನು ಸಾಯಿಸಲು ಹೊರಟ ಭೀಮನಿಗೆ ಹೇಳುವ ಮಾತು.ಅಧರ್ಮ ಆಚರಿಸದ ಸ್ತ್ರೀಯ ವಧೆ ಅಧರ್ಮವಾಗುವುದು.ಹಾಗಾಗಿ ಶರೀರ ನಾಶವಾಗುವ ಸ್ಥಿತಿ ಇದ್ದರೂ ಸ್ತ್ರೀ ವಧೆ ಸಲ್ಲದು.

*कुत एव परित्यक्तुं सुतां शक्ष्याम्यहं सुतम् । बालामप्राप्तवयसमजातव्यञ्जनाकृतिम् ।। भर्तुरर्थाय निक्षिप्तां  न्यासं धात्रा महात्मना । यस्यां दौहित्रजाल्लोकानाशंसे पितृभि: सह । स्वयमुत्पाद्य तां बालां कथमुत्स्रष्टुमुत्सहे ।।*

ಏಕಚಕ್ರನಗರದ ಸಂಕಷ್ಟಕ್ಕೊಳಗಾದ ಬ್ರಾಹ್ಮಣ ಹೇಳುವ ಮಾತು.ಇನ್ನೂ ಹುಡುಗಿಯಾಗಿರುವ ವಯಸ್ಸಿಗೆ ಬಾರದ ಯೌವನದ ಗುರುತುಗಳು ಸ್ಪಷ್ಟವಾಗಿ ಕಾಣದಿರುವ ನನ್ನ ಮಗಳನ್ನು ನಾನಾಗಿಯೇ ಹೇಗೆ ತಾನೇ ರಾಕ್ಷಸನಿಗಾಗಿ ಪರಿತ್ಯಜಿಸಲಿ? ಮಹಾತ್ಮನಾದ ಬ್ರಹ್ಮನು ಒಬ್ಬ ವರನಿಗಾಗಿಯೇ ಅವಳನ್ನು ನನ್ನ ಬಳಿ ನ್ಯಾಸ ವಾಗಿ ಇಟ್ಟಿದ್ದಾನೆ.ನನ್ನ ಪಿತೃಗಳೊಡನೆ ನಾನೂ ಈ ಮಗಳ ಮಗನಿಂದ  ದೊರೆಯುವ ಲೋಕಗಳಿಗಾಗಿದ್ದೇನೆ. ಆದುದರಿಂದ ನಾನೇ ಜನ್ಮವಿತ್ತಿರುವ ಆ ಬಾಲಿಕೆಯನ್ನು ಹೇಗೆ ನಾನು ಪರಿತ್ಯಾಗ ಮಾಡಲು ಯತ್ನಿಸುವೆನು?

*मन्यन्ते केचिदधिकं स्नेहं पुत्रे पितुर्नरा: । कन्यायां नैव तु पुनर्मम तुल्यावुभौ ।।*

ತಂದೆಯಾದವನಿಗೆ ಮಗನಲ್ಲಿ  ಹೆಚ್ಚು ಪ್ರೀತಿ ಇರುವುದೆಂದು ,ಮಗಳಲ್ಲಿ ಇರುವುದೇ ಇಲ್ಲವೆಂದು ಕೆಲವರು ಭಾವಿಸುತ್ತಾರೆ. ಆದರೆ ಇಬ್ಬರೂ ಸಮಾನರಾದವರೆಂದೇ ನನ್ನ ಭಾವನೆ. ಎಷ್ಟು ಒಳ್ಳೆಯ ಮಾತು.ಹೆಣ್ಣು ಮಕ್ಕಳನ್ನು ಭ್ರೂಣದಲ್ಲೇ ಹತ್ಯೆ ಮಾಡುವ ಆಧುನಿಕ ವಿದ್ಯಾವಂತರೂ ಹಣವಂತರೂ ನಿಶ್ಚಿತವಾಗಿ ಅರಿಯಲೇಬೇಕಾದ ಸತ್ಯ.

*यस्मिन्ल्लोका: प्रसूतिश्च स्थिता नित्यमथो सुखम् । अपापां तामहं बालां कथमुत्स्रष्टुमुत्सहे ।।*

ಉತ್ತಮಲೋಕಗಳೂ ,ಸಂತಾನವೂ ಶಾಶ್ವತವಾದ ಸುಖವೂ ಸದಾ ನೆಲೆಸಿರುವ ಪಾಪರಹಿತಳಾದ ಆ ಬಾಲಿಕೆಯನ್ನು ನಾನು ಹೇಗೆ ತಾನೆ ಪರಿತ್ಯಾಗ ಮಾಡಲು ಪ್ರಯತ್ನಿಸುವೆನು? ಹೆಣ್ಣು ಮಕ್ಕಳೆಂದರೆ ಅಸಡ್ಡೆ ಮಾಡುವ ಸಮಾಜಕ್ಕೆ ಉತ್ತಮ ಸಂದೇಶ.

ಸಂಗ್ರಹ 🌹ಶ್ರೀನಿಧಿ ಅಭ್ಯಂಕರ್.
ಆಧಾರ : ಆದಿಪರ್ವ ೧೪೪-೧೪೫ ಅಧ್ಯಾಯ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩