ಅರ್ಧಾಕೃತಿಯ ಚಂದ್ರನನ್ನು ಶಿರದಲ್ಲಿ ಧರಿಸಿದ ದುರ್ಗೆಯ ರೂಪ.ಅದು ಗಂಟೆಯಂತೆ ಕಾಣುವುದರಿಂದ ಅವಳು ಚಂದ್ರಘಂಟಾ ಎಂದೇ ಪ್ರಸಿದ್ಧಳಾಗಿದ್ದಾಳೆ.ಗಂಟೆಯು ಪೂಜೆಗೆ ಅತ್ಯಂತ ಮುಖ್ಯವಾದುದು.ದೇವತೆಗಳ ಆಗಮನ ಅಸುರರ ನಿರ್ಗಮನ ಎರಡೂ ಏಕಕಾಲದಲ್ಲಿ ಗಂಟೆಯ ನಾದದಿಂದಲೇ ನಡೆಯುವುದು.( ಆಗಮಾರ್ಥಂ ತು . . .) ನಮ್ಮ ಮನದ ಕೊಳಕುಗಳನ್ನು ನಿವಾರಿಸಿಕೊಂಡು ಭಕ್ತಿಯನ್ನು ತುಂಬಿಕೊಳ್ಳುವುದರ ಸಂಕೇತ ಈ ಗಂಟೆ.( ಸಂಸ್ಕೃತದಲ್ಲಿ ಘಂಟೆ) ಹಾಗೆ ಭಕ್ತಿತುಂಬಿಕೊಂಡಾಗ ಚಂದ್ರನ ಬೆಳದಿಂಗಳಿನಂತೆ ನಮಗೆ ಶುಭವನ್ನು ಕರುಣಿಸುತ್ತಾಳೆ ಆ ಮಹಾಮಾತೆ.ಈ ರೂಪ ಅವಳ ಯುದ್ಧಕ್ಕೆ ಹೊರಟ ರೂಪವೂ ಹೌದು.ನಮ್ಮ ಒಳ ಹಾಗೂ ಹೊರಶತ್ರುಗಳನ್ನು ಆ ದೇವಿ ನಾಶಮಾಡಿ ನಮ್ಮ ಪಾಲಿನ ಸುದಿನದ ಆರಂಭದ ಗಂಟೆ ನುಡಿಸಲೆಂದು,ಬಾಳಿನಲ್ಲಿ ಚಿಂತೆಗಳಿಲ್ಲದ ತಂಪನ್ನು ನೀಡಲೆಂದು ಪ್ರಾರ್ಥಿಸೋಣ.
ಶ್ರೀನಿಧಿ ಅಭ್ಯಂಕರ್.
ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ