🌹ಶಾಕುಂತಲದ ಒಂದು ಮಧುರ ಶ್ಲೋಕ🌹
*उद्गलिदर्भकवला मृग्य: परित्यक्तनर्तना मयूरा: । अपसृतपाण्डुपत्रा मुञ्चन्त्यश्रूणीव लता: ।।*
_ತಪೋವನವನ್ನು ಬಿಡಲು ಶಕುಂತಲೆಗೆ ಮನಸ್ಸೇ ಬರುತ್ತಿಲ್ಲ.ಅವಳಂತೆಯೇ ಆಶ್ರಮದ ಪ್ರಾಣಿಗಳ ಪರಿಸ್ಥಿತಿಯೂ ಆಗಿದೆ. ಅದನ್ನೇ ಪ್ರಿಯಂವದೆ ವ್ಯಕ್ತಪಡಿಸುತ್ತಿರುವಳು. ಜಿಂಕೆಗಳ ಬಾಯಿಯಿಂದ ದರ್ಭೆಯ ತುತ್ತುಗಳು ಕೆಳಗುದುರುತ್ತಿವೆ.ಅವು ತಿನ್ನುವುದನ್ನು ಮರೆತು ಶಕುಂತಲೆ ಹೊರಟುಹೋಗುವಳು ನಮಗಿನ್ಯಾರು ತುತ್ತು ಕೊಡುವರೆಂದು ದು:ಖಿಸುತ್ತಿವೆ. ಸಂತೋಷದಿಂದ ಆಶ್ರಮದ ಪರಿಸರದಲ್ಲಿ ನಲಿಯುತ್ತಿದ್ದ ಮಯೂರಗಳು ತಮ್ಮ ನರ್ತನವನ್ನು ನಿಲ್ಲಿಸಿ ಕ್ಲೇಶಪಡುತ್ತಿವೆ.ಬಳ್ಳಿಗಳು ಉದುರುವ ಎಲೆಗಳಿಂದ ಕಣ್ಣೀರು ಸುರಿಸುತ್ತಿರುವಂತೆ ಕಾಣುತ್ತಿವೆ.ಹೀಗೆ ಗಿಡ ಮರಗಳು, ಪ್ರಾಣಿ ಪಕ್ಷಿಗಳ ದು:ಖದಲ್ಲಿನ ಸಹಭಾಗಿತ್ವ ಕವಿಯ ಮಾತಿನಲ್ಲಿ ಕಂಡುಬರುತ್ತಿದೆ.ದಿನವೂ ಶಕುಂತಲೆ ಗಿಡಮರಗಳಿಗೆ ನೀರುಣಿಸುತ್ತಿದ್ದಳು.ಈಗ ಅವಳ ವಿರಹ ಅವುಗಳನ್ನು ಬಾಧಿಸುತ್ತಿದೆ.ನವಿಲು ಹಾಗೂ ಜಿಂಕೆಗಳಿಗೆ ಎಳೆ ಹುಲ್ಲಿನ ತುತ್ತನ್ನು ನೀಡಿ ಮುದ್ದಿಸುತ್ತಿದ್ದಳು. ಇನ್ನು ಆ ಪ್ರೇಮಸ್ಪರ್ಶ ಆರೈಕೆ ತಪ್ಪಿಹೋಗುವುದಲ್ಲ ಎಂಬ ಚಿಂತೆ ಅವುಗಳಿಗೆ.ಹೀಗಾಗಿಯೇ ತಮ್ಮ ಕಾರ್ಯ ಬಿಟ್ಟು ಚಿತ್ರದಂತೆ ಸ್ತಬ್ಧವಾಗಿವೆ.ಉತ್ಪ್ರೇಕ್ಷಾ ಅಲಂಕಾರ.ಎಲೆಗಳು ಉದುರುವುದು ಬಳ್ಳಿಯ ಸಹಜತೆ
ಕವಿ ಅದನ್ನೂ ಶಕುಂತಲೆಯ ಪ್ರಯಾಣದ ದು:ಖದಿಂದ ಮಾಡುತ್ತಿರುವ ಕ್ರಿಯೆಯೆಂಬಂತೆ ವರ್ಣಿಸಿರುವುದು ಕವಿ ಸಮಯ.ಶಕುಂತಲೆ ಇಷ್ಟು ದಿನ ಆಡಿ ಬೆಳೆದ ಪರಿಸರವನ್ನು ಬಿಟ್ಟುಹೋಗಬೇಕಲ್ಲ ಎಂದು ಚಿಂತಿಸುತ್ತಿದ್ದರೆ ಇತ್ತ ಪ್ರಾಣಿ ಹಾಗೂ ತರುಲತೆಗಳು ಶಕುಂತಲೆ ನಮ್ಮನ್ನಗಲಿ ದೂರ ಹೋಗುವಳು ಎಂದು ಚಿಂತಿಸುತ್ತಿವೆ.ಹೀಗೆ ಎರಡೂ ಕಡೆ ಪತಿಗೃಹದ ಅವಳ ಪಯಣ ದು:ಖಹೇತುವಾಗಿದೆ. ಕಾಳಿದಾಸ ರಘುವಂಶದಲ್ಲಿಯೂ ರಾಮನಿಂದ ಪರಿತ್ಯಕ್ತಳಾದ ಸೀತೆಯ ದು:ಖದಲ್ಲಿ ಪಾಲ್ಗೊಂಡ ಪ್ರಕೃತಿಯನ್ನು ಹೀಗೆಯೇ ವರ್ಣಿಸಿದ್ದಾನೆ.'ನೃತ್ಯಂ ಮಯೂರಾ:'ಎಂಬ ಶ್ಲೋಕದಲ್ಲಿ.ಪ್ರಕೃತಿಯೆಡೆಗೆ ನಮ್ಮ ನೋಟ ಸುಂದರವಾಗಿದ್ದರೆ ಅದೂ ನಮ್ಮೆಡೆಗೆ ಬರುವುದೇನೋ ಎಂಬ ಕವಿಯ ಭಾವ ಸುಂದರ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ