💐ಪ್ರತಿಮಾನಾಟಕದ ಒಂದು ಸುಮ💐

*ताते धनुर्न मयि सत्यमवेक्षमाणे मुञ्चानि मातरि शरं स्वधनं हरन्त्याम् । दोषेषु बाह्यमनुजं भरतं हनानि किं रोषणाय रुचिरं त्रिषु पातकेषु ।।*

_ರಾಮನ ಗಂಭೀರ ವಾಣಿ. ದಶರಥ ನೀಡಿದ ವರಗಳಿಂದ ರಾಮನ ಅಭಿಷೇಕ ತಪ್ಪಿದೆ.ಲಕ್ಷ್ನಣನಿಗೆ ತಡೆಯಲಾರದಷ್ಟು ಸಿಟ್ಟುಬಂದು ಕೈಕೇಯಿಯನ್ನು ತಂದೆಯನ್ನು ನಿಂದಿಸುತ್ತಾನೆ , ರಾಮನಿಗೂ ಏನು ಮಾಡದೇ ಸುಮ್ಮನಿರುವ ನಿನ್ನ ವರ್ತನೆಗೆ ಅರ್ಥವೇನು ಎಂದೆಲ್ಲಾ ಪ್ರಶ್ನಿಸುತ್ತಾನೆ. ಆಗ ರಾಮನ ಮಾತು - ನೀನು ಹೇಳಿದಂತೆ ಮಾಡಿದರೆ ನಾನು ಪಾಪಿಯಾದೇನು. ಅಪ್ಪನ ವಚನ ಸತ್ಯ ಮಾಡಿಕೊಡುವ ಮಗನಾದ ನಾನು ಅಪ್ಪನ ಮೇಲೆಯೇ ಧನುಸ್ಸನ್ನು ಪ್ರಯೋಗಮಾಡಲೇ? ನಾನು ಅವನಂದಂತೆ ನಡೆದರೆ ಅವನ ಮಾತು ಸತ್ಯವೆನಿಸುತ್ತದೆ.ಅಪ್ಪನ ಮಾತಿಗೆ ಗೌರವ ಕೊಡುವುದನ್ನು ಬಿಟ್ಟು ಅಪ್ಪನ ಮೇಲೆಯೇ ಕೈಮಾಡಲೇ? ತಾನು ಹಿಂದೆ ಕೊಟ್ಟ ಮಾತಿನಂತೆ ವರಗಳನ್ನು ನೀಡಿದ್ದಾನೆ ಅದರಲ್ಲಿ ಅವನ ತಪ್ಪೇನಿದೆ! ಇನ್ನು ಕೈಕೇಯಿ ವಿವಾಹ ಸಮಯದಲ್ಲಿ ಕೊಡಲ್ಪಟ್ಟ ರಾಜ್ಯ ಲಕ್ಷ್ಮಿಯನ್ನು  ಈಗ ಪಡೆದುಕೊಂಡಿರುವಳು.ಅವಳ ಮೇಲೆ ಶರಪ್ರಯೋಗಿಸಲೇ? ಅವಳು ಅವಳದ್ದೇ ಧನವನ್ನು ಈಗ ಪಡೆದುಕೊಂಡಿದ್ದಾಳೆ. ಹಾಗಾಗಿ ಅವಳ ತಪ್ಪೊಂದೂ ಕಾಣುತ್ತಿಲ್ಲ. ಇನ್ನು ಈ ವಿಷಯಗಳ ಬಗ್ಗೆ ಗೊತ್ತೇ ಇರದ ಭರತನ ಮೇಲೆ ಅಸ್ತ್ರ ಬಿಡಲೇ? ಅವನಿಗೆ ಇಲ್ಲಿ ನಡೆಯುತ್ತಿರುವ ವಿಷಯಗಳೊಂದೂ ತಿಳಿದಿಲ್ಲ.ಅಷ್ಟೇ ಅಲ್ಲ ಯಾವೊಂದು ದೋಷಗಳೂ ಅವನ ಒಳಗಿಲ್ಲ.ಯಾವ ಅಪರಾಧವೆಂದು ಅವನನ್ನು ಕೊಲ್ಲಲಿ? ಇಂತಹ ಸಂದರ್ಭದಲ್ಲಿ ಮಾತೃ ಪಿತೃ ಭ್ರಾತೃ ವಧೆರೂಪದ ಮಹಾ ಪಾತಗಳಲ್ಲಿ ಯಾವ ಪಾತಕವು ಕೋಪದಿಂದ ಕಲಷಗೊಂಡ ನಿನ್ನ ಬುದ್ಧಿಗೆ ರುಚಿಸುವುದು? ಇವೆಲ್ಲ ತಿಳಿದೂ ಮಾತನಾಡುತ್ತಿರುವೆಯಾ ಅಥವಾ ಕೋಪದಲ್ಲಿ ಏನೇನೊ ನುಡಿಯುತ್ತಿರುವೆಯಾ? ತಪ್ಪೇ ಮಾಡದ ಮೂವರೂ ಆತ್ಮೀಯರು ಆಗಿರುವಾಗ ಹೇಗೆ ತಾನೇ ಕೊಲ್ಲಲಿ ಅಥವಾ ನಿಂದಿಸಲಿ? ಸ್ವಜನರಾದರೂ ಅಪಕಾರ ಎಸಗಿದಾಗ ಕೊಲ್ಲಬಹುದೆಂಬ ಮಾತಿದೆ. ಅಪರಾಧವೇ ಮಾಡದ ಸ್ವಜನರ ಹತ್ಯೆ ಮಹಾಪಾಪಕರ. ಹಾಗಾಗಿ ಕೋಪ ಬಿಟ್ಟು ಯೋಚಿಸು ನಿನಗೇ ಅರಿವಾಗುವುದು ಎಂದು ಅಭಿಪ್ರಾಯ. ರಾಮನಂತೆ ಜನರ ಭಿನ್ನ ಕಾಲದ ಭಿನ್ನ ವರ್ತನೆಗಳಲ್ಲಿ ನಾವೂ ತಪ್ಪನ್ನು ಕಾಣದೇ ಒಳಿತನ್ನು ಮಾತ್ರ ಕಂಡು ಗೌರವಿಸೋಣ.ಜಗತ್ತಿನ ಮಿತ್ರರಾಗೋಣ, ದ್ವೇಷವನ್ನು ಬಿಟ್ಟು ಪ್ರೀತಿ ಹಂಚೋಣ._

📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩