💐ಪ್ರತಿಮಾನಾಟಕದ ಒಂದು ಸುಮ💐
*निर्योगाद् भूषणान्माल्यात् सर्वेभ्योर्धं प्रदाय मे । चिरमेकाकिनाबद्धं चीरे खल्वसि मत्सरी ।।*
_ರಾಮ ಸೀತೆಯರು ವನಕ್ಕೆ ನಾರು ಮಡಿ ಉಟ್ಟು ಹೊರಟಿದ್ದಾರೆ.ಲಕ್ಷ್ಮಣನಿಗೆ ರಾಮನು ನಿರಾಕರಿಸಿದ್ದಾನೆ.ಆಗ ಅವನಾಡುವ ನುಡಿ- ಹೊಸ ವಸ್ತ್ರಗಳನ್ನು ಧರಿಸುವ ಸಂದರ್ಭದಲ್ಲಿ ನನಗೆ ನೀಡಿಯೇ ನೀನು ಧರಿಸುತ್ತಿದ್ದಿ. ಆಭರಣಗಳನ್ನು ಧರಿಸುವ ಸಂದರ್ಭದಲ್ಲೂ ನನಗೂ ಕೆಲವನ್ನು ನೀಡಿ ಧರಿಸುತ್ತಿದ್ದಿ.ಪುಷ್ಪ ಮಾಲೆಗಳನ್ನು ಹಾಕಿಕೊಳ್ಳುವಾಗಲೂ ಲಕ್ಷ್ಮಣನಿಗೆ ಕೊಟ್ಟೇ ಹಾಕಿಕೊಳ್ಳುತ್ತಿದ್ದಿ. ಆದರೆ ಈಗ ಅತ್ಯಂತ ಕಡಿಮೆ ಬೆಲೆಯ ಈ ನಾರುಮಡಿಯನ್ನುಡುವ ಸಂದರ್ಭದಲ್ಲಿ ನಿನಗೆ ನನ್ನ ನೆನಪಾಗಲಿಲ್ಲವೇ? ಈ ಸಾಮಾನ್ಯ ವಸ್ತುವಿನಲ್ಲಿ ನಿನಗೆ ಮತ್ಸರ ಭಾವ ಬಂದುಬಿಟ್ಟಿತಲ್ಲ ಇದು ನಿಜಕ್ಕೂ ಆಶ್ಚರ್ಯ. ಒಬ್ಬನೇ ಉಟ್ಟುಕೊಳ್ಳುತ್ತಿರುವುದು ನ್ಯಾಯವೇ? ಅಂತಹ ಬೆಲೆಬಾಳುವ ಬಟ್ಟೆಗಳನ್ನು, ಆಭರಣಗಳನ್ನು, ಹಾರಗಳನ್ನು ಧರಿಸುವ ಸಂದರ್ಭದಲ್ಲಿ ಎಂದೆಂದಿಗೂ ನೆನಪಾಗುತ್ತಿದ್ದ, ಅವನೊಡನೆ ಹಂಚಿಕೊಳ್ಳುತ್ತಿದ್ದ ನೀನು ಈ ತುಂಬಾ ಕಡಿಮೆ ಬೆಲೆಯ ನಾರು ಬಟ್ಟೆಯನ್ನು ಧರಿಸುವಾಗ ನನಗೆಂದು ಎತ್ತಿಟ್ಟಲಿಲ್ಲವೇ? ಅಥವಾ ಈ ವಸ್ತುವಿನಲ್ಲಿ ನಿನಗೆ ಮತ್ಸರವೇ? ನನಗೆ ತಿಳಿಯುತ್ತಿಲ್ಲ. ಇಲ್ಲಿ ರಾಮ - ಲಕ್ಷ್ಮಣರ ಗೆಳೆತನ ಎಷ್ಟು ಹೃದ್ಯವಾಗಿತ್ತು ಎನ್ನುವುದನ್ನು ಗಮನಿಸಬಹುದು. ರಾಮ ತನ್ನ ತಮ್ಮನಿಗೆ ನೀಡದೇ ಯಾವ ಸುಖವನ್ನೂ ಅನುಭವಿಸುತ್ತಿರಲಿಲ್ಲ. ಅಂತಹುದರಲ್ಲಿ ದು:ಖ ಪಡುವ ಕಾಲಕ್ಕೆ ಲಕ್ಷ್ಮಣನನ್ನು ಮರೆತು ತಾನೊಬ್ಬನೇ ಹೊರಟಿರುವುದು ಯಾವ ನ್ಯಾಯ ಎನ್ನುವುದು ಲಕ್ಷ್ಮಣನ ಭಾವ. ನಾವೂ ರಾಮನಂತೆ ಸುಖವನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣ. ಕಷ್ಟಗಳನ್ನು ದು:ಖಗಳನ್ನು ನಾವು ಮಾತ್ರ ಅನುಭವಿಸೋಣ._
📜ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ