🌺 ಪ್ರತಿಮಾ ನಾಟಕದ ಒಂದು ಪುಷ್ಪ 🌺

*एते ते देवतानामसुरपुरवधे गच्छन्त्यभिसरीम् एते ते शक्रलोके सपुरजनपदा यान्ति स्वसुकृतै: । एते ते प्राप्नुवन्त: स्वभुजबलजितां कृत्स्नां वसुमतीम् एते ते मृत्युना ये चिरमनवसिताश्छन्दं मृगयता ।।*

_ಭರತನು ಇಕ್ಷ್ವಾಕು ಕುಲದ ಹಿರಿಯರ ಪ್ರತಿಮೆಯನ್ನು ನೋಡಿ ತನ್ನ ಕುಲದವರ ಬಗೆಗೆ ಹೆಮ್ಮೆಯಿಂದ ನುಡಿಯುವ ವಚನ. ಈ ರಾಜರು ಹೇಗಿದ್ದರೆಂದರೆ, ದೇವತೆಗಳು ಹಾಗೂ ರಾಕ್ಷಸರ ನಡುವೆ ಯುದ್ಧ ನಡೆದಾಗ ದೇವ ಸಹಾಯಕ್ಕಾಗಿ ತೆರಳುತ್ತಿದ್ದ ಮಹಾವೀರರಿವರು. ಧರ್ಮ ಪಕ್ಷಪಾತಿಯಾಗಿ ದೇವತೆಗಳ ಪರವಾಗಿ ಪ್ರಾಣವನ್ನು ಪಣಕ್ಕಿಟ್ಟು ಯುದ್ಧ ಮಾಡುತ್ತಿದ್ದರು. ಇದು ದೇವತೆಗಳಿಗೂ ಸಮಾನವಾದ ಅಥವಾ ಮಿಗಿಲಾದ ಪರಾಕ್ರಮ ಉಳ್ಳವರು. ಇನ್ನು ತಮ್ಮ ಉತ್ತಮ ಕಾರ್ಯಗಳಿಂದಲೇ ಪುರದ ಜನರ ಜೊತೆಗೆ ಸ್ವರ್ಗವನ್ನು ಯಾರು ಹೊಂದುತ್ತಿದ್ದರೋ ಅಂತಹ ಮಹಿಮರಿವರು. ತಾವು ಮಾತ್ರ ಸ್ವರ್ಗಕ್ಕೆ ಹೋಗದೇ ತಮ್ಮ ಪುರಜನರನ್ನೂ ಉದ್ಧಾರ ಮಾಡುತ್ತಿದ್ದ  ವಿಶಾಲ ಹೃದಯದವರು. ಅಷ್ಟಲ್ಲದೇ ಇವರು ತಮ್ಮ ಭುಜಬಲದಿಂದ ಸಂಪೂರ್ಣ ಪೃಥ್ವಿಯನ್ನು ಗೆದ್ದು ಆಳುತ್ತಿದ್ದ ಮಹಾವೀರರು. ಈಗಿನಂತೆ ವಂಶಪಾರಂಪರ್ಯವಾಗಿ ಮಾತ್ರ ಆಳುತ್ತಿದ್ದ ರಾಜರುಗಳಲ್ಲ. ಸದಾ ಶತ್ರುಗಳನ್ನು ಸದೆ ಬಡಿದು ಚಕ್ರವರ್ತಿಗಳಾಗಿ ಬಾಳ್ವೆ ನಡೆಸಿದವರು. ಇವರು ನಮಗೆ ಮೃತ್ಯು ಬರದಿರಲಿ ಎಂಬ ಇಕ್ಷ್ವಾಕುಗಳ ಮಾತಿನಂತೆ ಯಮನೂ ಅವರಾಗಿಯೇ ಅವಸಾನ ಹೊಂದುವುದನ್ನು ಬಯಸಿ ಕಾಯುತ್ತಿದ್ದ. ಯೋಗಾಗ್ನಿಯನ್ನು ಆಶ್ರಯಿಸಿ ತಪಸ್ಸಿನ ಕೊನೆಗೆ ಪ್ರಾಣ ಪರಿತ್ಯಜಿಸುತ್ತಿದ್ದರು ಹೊರತು ಯಮಪಾಶಕ್ಕೆ ಕೊರಳೊಡ್ಡುತ್ತಿರಲಿಲ್ಲ. ನಮ್ಮ ಬದುಕು ಹೀಗೆ ಇರಬೇಕು. ಧರ್ಮದ ಕಾರ್ಯ ಗಳು ನಡೆಯುವಲ್ಲೆಲ್ಲಾ ದೇವಕಾರ್ಯವೆಂದು ಬೆಂಬಲಿಸಬೇಕು. ಕೇವಲ ನಮ್ಮ ಸಂತೋಷವನ್ನು ಮಾತ್ರ ಬಯಸದೇ ಅಥವಾ ನಮ್ಮ ಒಳಿತನ್ನು ಮಾತ್ರ ಬಯಸದೇ ಲೋಕದ ಒಳಿತನ್ನೂ ಬಯಸಬೇಕು. ಕಷ್ಟಪಟ್ಟು ದುಡಿದು ಸಂಪಾದಿಸಿ ಅನುಭವಿಸಬೇಕೇ ಹೊರತು ಯಾರದೋ ಪುಣ್ಯದ ಫಲವನ್ನಲ್ಲ. ಮೃತ್ಯುವು ಬರುವನೆಂದು ಭಯಪಡದೇ ಮೃತ್ಯುವೇ ನಮ್ಮ ಪ್ರಾಣ ತೆಗೆಯುವುದೋ ಬೇಡವೋ ಎನ್ನುವ ಯೋಚನೆ ಮಾಡುವಂತೆ ಜೀವನ ನಡೆಸಬೇಕು. ಸುವದನಾ ಎಂಬ ಅಪರೂಪದ ಛಂದಸ್ಸು ಇಲ್ಲಿ ಕಂಡುಬಂದಿದೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩