📙 ವೇದ- ಧರ್ಮ ಭಾಗ-೧೪
*ವೇದದ ಬ್ರಾಹ್ಮಣಗಳು*
ಅಥರ್ವವೇದದ ಬ್ರಾಹ್ಮಣಗಳು
*ಗೋಪಥ ಬ್ರಾಹ್ಮಣ*= ಅಥರ್ವವೇದದ ಪಿಪ್ಪಲಾದ ಶಾಖೆಯ ಏಕೈಕ ಬ್ರಾಹ್ಮಣಗ್ರಂಥ. ಅಥರ್ವವೇದದ ಶೌನಕ ಸಂಹಿತೆಯನ್ನು ಸಾಕ್ಷಾತ್ಕರಿಸಿಕೊಂಡವನು ಗೋಪಥ ಎಂಬ ಮಹರ್ಷಿ. ಅವನ ಹೆಸರಲ್ಲೇ ಈ ಗ್ರಂಥ ಪ್ರಸಿದ್ಧ ಆಗಿದೆ.
ಇದರಲ್ಲಿ ಪೂರ್ವ ಗೋಪಥ ಹಾಗೂ ಉತ್ತರ ಗೋಪಥಗಳೆಂಬ ಎರಡು ವಿಭಾಗಗಳಿವೆ. ಪೂರ್ವಗೋಪಥದಲ್ಲಿ ೬ ಪ್ರಪಾಠಕಗಳು, ಉತ್ತರದಲ್ಲಿ ೧೧ಪ್ರಪಾಠಕಗಳು ಇವೆ. ಅಥರ್ವವೇದದ ಪರಿಶಿಷ್ಟದಲ್ಲಿ ಬರುವಂತೆ ಈ ಗ್ರಂಥ ಮೊದಲಿಗೆ ೧೦೦ ಪ್ರಪಾಠಕಗಳನ್ನು ಒಳಗೊಂಡಿತ್ತು. ಅನಂತರ ಕಲಿಯುವವರ ಅಭಾವದಿಂದ ಕೆಲವು ಪ್ರಪಾಠಕಗಳು ಕಾಣೆಯಾದವು ಎನ್ನಬಹುದು.
ಪೂರ್ವ ಗೋಪಥದಲ್ಲಿ ಸೃಷ್ಟಿ ಪ್ರಕ್ರಿಯೆಯ ನಿರೂಪಣೆ ಇದೆ. ಪುಷ್ಕರವೆಂಬ ಕ್ಷೇತ್ರದಲ್ಲಿ ಬ್ರಹ್ಮನು ಸೃಷ್ಟಿಯನ್ನು ಪ್ರಾರಂಭಿಸಿದ ಕಥೆ, ಓಂ ಕಾರದ ಮಹಿಮೆಯ ಕಥೆ, ಓಂಕಾರದ ವಿಷಯದಲ್ಲಿ ೩೬ ಪ್ರಶ್ನೆಗಳು ಉತ್ತರಗಳು, ಗಾಯತ್ರೀ ಮಂತ್ರದ ಉಪಯುಕ್ತತೆ, ಆಚಮನದ ಮಹತ್ವ ಇತ್ಯಾದಿ ಅನೇಕ ವಿಷಯಗಳು ಅಧ್ಯಯನಕ್ಕೆ ಉಪಯುಕ್ತವಾಗಿವೆ.
ಎರಡನೆಯ ಪ್ರಪಾಠಕದಲ್ಲಿ ಬ್ರಹ್ಮಚರ್ಯದ ಆಚರಣೆ ಅದರ ಫಲ, ಬ್ರಹ್ಮಚಾರಿಯ ಕರ್ತವ್ಯಗಳು, ಯಜ್ಞದಲ್ಲಿ ಪಾಲ್ಗೊಳ್ಳುವ ಹಿಂದೆ ಹೆಸರಿಸಿದ ನಾಲ್ವರ ಕಾರ್ಯದ ಬಗ್ಗೆ ಮಾಹಿತಿ ಇದೆ. ಮೂರನೆಯ ಪ್ರಪಾಠಕದಲ್ಲಿ ವಿವಿಧ ಯಜ್ಞಗಳ ವಿವರಣೆ, ಯಜ್ಞಗಳಲ್ಲಿ ಬ್ರಹ್ಮನ ಸ್ಥಾನಮಾನ, ವ್ರತಗಳು ಭಂಗಗೊಂಡಾಗ ಆಚರಿಸಬೇಕಾದ ಪ್ರಾಯಶ್ಚಿತ್ತ, ಅಗ್ನಿಹೋತ್ರ ಹಾಗೂ ದರ್ಶಪೂರ್ಣಮಾಸ ಯಜ್ಞಗಳ ಆಚರಣೆ, ಯಜ್ಞದಲ್ಲಿ ಪಾಲ್ಗೊಳ್ಳುವ ಋತ್ವಿಜರಿಗೆ ದೀಕ್ಷೆ ಕೊಡುವ ವಿಧಾನ ಇತ್ಯಾದಿ ವಿಷಯಗಳು ಹೇಳಲ್ಪಟ್ಟಿವೆ.
ಹೀಗೆ ಈ ಬ್ರಾಹ್ಮಣವು ಸ್ಮೃತಿಗಳಲ್ಲಿ ಹೇಳುವ ಮುಕ್ಕಾಲು ವಾಸಿ ವಿಷಯಗಳನ್ನು ಒಳಗೊಂಡಿರುವ ಕಾರಣ ಇದನ್ನು ವೇದರೂಪದ ಸ್ಮೃತಿ ಎನ್ನಬಹುದು.
*ವೇದದ ಆರಣ್ಯಕಗಳು*
ಮಹಾಭಾರತದ ಈ ಮಾತು ಆರಣ್ಯಕಗಳ ಮಹತ್ವ ಹೇಳುವುದು. *ನವನೀತಂ ಯಥಾ ದಧ್ನೋ ಮಲಯಾಚ್ಚಂದನಂ ಯಥಾ ಆರಣ್ಯಕಂ ಚ ವೇದೇಭ್ಯ: ಓಷಧೀಭ್ಯೋಮೃತಂ ಯಥಾ*
ಮೊಸರಿನಿಂದ ಬೆಣ್ಣೆ ತೆಗೆದಂತೆ, ಮಲಯಪರ್ವತದಿಂದ ಗಂಧ ಆರಿಸಿದಂತೆ, ಔಷಧೀಯ ಸಸ್ಯಗಳಿಂದ ಅಮೃತ ತಯಾರಾದಂತೆ, ವೇದಗಳಿಂದ ಅದರ ಸಾರಭೂತವಾದ ಆರಣ್ಯಕಗಳು ಹೊರಟಿವೆ.
*ಅರಣ್ಯಾದಧ್ಯಯನಾದ್ ಏತದ್ ಆರಣ್ಯಕಮಿತೀರ್ಯತೇ ಅರಣ್ಯೇ ತದ್ಧೀಯತೇತ್ಯೇವಂ ವಾಕ್ಯಂ ಪ್ರವಿದಿಯತೆ*
ವನದಲ್ಲಿ ಅಧ್ಯಯನ ಮಾಡುವ ಕಾರಣ ಇದಕ್ಕೆ ಈ ಹೆಸರು ಮೇಲ್ನೋಟಕ್ಕೆ ಕಾಣುವುದು. ಇನ್ನು ಜಗವೆಲ್ಲ ಒಂದು ರೀತಿಯ ಅರಣ್ಯವೇ. ಇಲ್ಲಿ ಭಿನ್ನ ಭಿನ್ನ ಪ್ರಕೃತಿಯ ನರಿ ಸಿಂಹ ಹುಲಿಗಳ ಗುಣಗಳ ನರರ ನಡುವೆ ಇದ್ದು ಸಾರ ಸಂಗ್ರಹಿಸುವ ಕೆಲಸ ಇವುಗಳ ಅಧ್ಯಯನ.
ಉಪನಿಷತ್ತುಗಳು ಇವುಗಳ ಕೊನೆಗೆ ಕಂಡುಬರುತ್ತವೆ. ಹಾಗಾಗಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಮಹತ್ವ ಹೆಚ್ಚಿದೆ. ವನದ ಶಾಂತ ವಾತಾವರಣದಲ್ಲಿ ಪ್ರಾಣವಿದ್ಯೆಯ ಉಪಾಸನೆ ಸಾಧ್ಯ ಎಂಬ ನೆಲೆಗಟ್ಟಿನಲ್ಲಿ ಆರಣ್ಯಕ ಪದ ಹೊಂದುತ್ತದೆ.
*ಋಗ್ವೇದದ ಆರಣ್ಯಕ= ಐತರೇಯ ಆರಣ್ಯಕ*
ಇದರಲ್ಲಿ ಐದು ವಿಭಾಗಗಳಿವೆ. ಮೊದಲಿಗೆ ಮಹಾವ್ರತ ಎಂಬ ಸಂಸ್ಕಾರದ ಬಗೆಗೆ, ಮುಂದೆ ವಿದ್ಯೆಯ ಸಂಪಾದನೆ ಹೇಗೆ ಉಪಯುಕ್ತ ಅನ್ನುವ ವಿಷಯ, ಹಾಗೂ ಪರಮ ಪುರುಷನ ವರ್ಣನೆ, ಮುಂದೆ ವೇದಮಂತ್ರಗಳ ಪದಪಾಠ, ಕ್ರಮಪಾಠ, ಸ್ವರಗಳನ್ನು ಹೇಗೆ ಗುರುತಿಸುವುದು ಇತ್ಯಾದಿ, ಮುಂದೆ ಮಹಾನಾಮ್ನೀ ಎಂಬ ಮಂತ್ರಗಳ ವರ್ಣನೆ ಇದೆ.
*ಶಾಂಖಾಯನ ಆರಣ್ಯಕ*
ಇದು ಋಗ್ವೇದದ ಇನ್ನೊಂದು ಆರಣ್ಯಕ. ಮಂತ್ರಗಳನ್ನು ಉಚ್ಚಾರಣೆ ಮಾಡುವ ಕಾಲದಲ್ಲಿ ಗಮನಿಸಬೇಕಾದ ವಿಷಯಗಳ ಬಗ್ಗೆ ಇದು ಬೆಳಕು ಚೆಲ್ಲುವುದು.
ಇನ್ನು ಶುಕ್ಲಯಜುರ್ವೇದದಲ್ಲಿ ಬೃಹದಾರಣ್ಯಕ ಎಂಬ ಆರಣ್ಯಕವೂ, ಕೃಷ್ಣದಲ್ಲಿ ತೈತ್ತಿರೀಯ ಆರಣ್ಯಕವೂ, ಸಾಮವೇದದಲ್ಲಿ ತವಲಕಾರ ಅಥವಾ ಜೈಮಿನಿಯೋಪನಿಷದ್ ಎಂಬ ಆರಣ್ಯಕವೂ ಪ್ರಸಿದ್ಧವಾಗಿವೆ. ಇದರ ವಿಷಯಗಳ ಬಗ್ಗೆ ಮುಂದೆ ದೀರ್ಘವಾದ ವಿವರಣೆ ಅವಲೋಕಿಸೋಣ.
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ