🌺 ಪ್ರತಿಮಾನಾಟಕದ ಒಂದು ಸುಮ 🌺
*अन्वास्यमानश्चिरजीवदोषै: कृतघ्नभावेन विडम्ब्यमान: । अहं हि तस्मिन् नृपतौ विपन्ने जीवामि शून्यस्य रथस्य सूत: ।।*
_ಸುಮಂತ್ರನ ದು:ಖದ ಮಾತು. ತಾಯಂದಿರಿಗೆ ನಮಸ್ಕರಿಸುವ ವಿಧಾನವನ್ನು ಹೀಗೆ ಹೀಗೆ ಎಂದು ಉಪದೇಶಿಸಿದಾಗ ಭರತನಿಗೆ ಸಂಶಯ ಬಂದು ನೀನು ಹಿರಿಯ ಸುಮಂತ್ರನಲ್ಲವೇ? ಎಂದು ಪ್ರಶ್ನಿಸುತ್ತಾನೆ. ಆಗ ಸುಮಂತ್ರನಾಡುವ ಮಾತಿದು. ಹೌದಪ್ಪಾ ನಾನೇ ನತದೃಷ್ಟ ಸುಮಂತ್ರ. ಇನ್ನೂ ಸತ್ತಿಲ್ಲ. ಬಹುಕಾಲ ಬದುಕುವುದೆಂಬ ದೋಷವು ನನ್ನನ್ನು ಕಾಡುತ್ತಿದೆ. ನನ್ನ ಆಪ್ತರನೇಕರ ಮರಣ, ದು:ಖಪಡುವಿಕೆ, ನಾಶ ಮುಂತಾದವುಗಳನ್ನು ಕಣ್ಣಾರೆ ಕಾಣಬೇಕಾದ ಯೋಗ ಅಥವಾ ದೌರ್ಭಾಗ್ಯ ನನ್ನದು. ಒಡೆಯ ತೀರಿದರೂ ಅವನನ್ನುಸರಿಸದೆ ಬದುಕಿ ಕೃತಘ್ನತೆಯನ್ನು ವ್ಯಕ್ತಪಡಿಸುತ್ತಿದ್ದಾನೆ ಎಂದು ಲೋಕ ನನ್ನ ಬಗೆಗೆ ತಮಾಷೆ ಮಾಡುತ್ತಿದೆ. ಒಡೆಯನನ್ನು ( ದಶರಥನನ್ನು ) ಎಲ್ಲಾ ಕಾಲಕ್ಕೂ ಅನುಸರಿಸಿದವನು ಇಂದು ಮಾತ್ರ ಮರಣ ಸಮಯದಲ್ಲಿ ಬಿಟ್ಟು ಬದುಕುತ್ತಿರುವನು. ನಿಜವಾಗಿ ಕೃತಘ್ನ. ಒಡೆಯನ ಬಗೆಗೆ ಪ್ರೀತಿಯೇ ಹೊಂದಿಲ್ಲ ಎಂದೆಲ್ಲಾ ಹಾಸ್ಯ ಮಾಡುತ್ತಿರುವರು._
_ನಾನೇ ನೀನು ಹೇಳಿದ ಸುಮಂತ್ರ. ಅಂತಹ ಲೋಕದೀಪಕನಾದ ಮಹಾರಾಜ ಅಳಿದರೂ ಇನ್ನೂ ಬದುಕಿರುವ ಪಾಪಿ. ಕವಿ ಇಲ್ಲಿ ಸುಂದರವಾದ ದೃಷ್ಟಾಂತ ಕೊಟ್ಟಿದ್ದಾನೆ. ಖಾಲಿ ರಥಕ್ಕೆ ಸೂತ ಯಾಕೆ ಬೇಕು? ರಥದಲ್ಲಿ ಯಾರಾದರೂ ಹೋಗುವವರಿದ್ದರೆ ಆಗ ಸಾರಥಿಯ ಅವಶ್ಯಕತೆ ಇದೆ. ಈಗ ನನ್ನ ಸ್ಥಿತಿಯೂ ಹಾಗೇ ಇದೆ. ಖಾಲಿ ರಥದ ಸೂತನಂತೆ ಇನ್ನೂ ಬದುಕಿದ್ದೇನೆ. ಸುಮಂತ್ರ ದಶರಥನ ಮಂತ್ರಿಯಲ್ಲದೆ ಕೆಲವೊಮ್ಮೆ ಸೂತನಾಗಿಯೂ ಕಾರ್ಯ ನಿರ್ವಹಿಸಿದ್ದಾನೆ. ಕವಿ ಅದನ್ನು ಹೀಗೆ ಸೂಚಿಸಿದ್ದಾನೆ. ಮುಂದೆಯೂ ಅವನ ಸಾರಥ್ಯ ಕಂಡುಬರುತ್ತದೆ. ಚಿರಕಾಲ ಬದುಕಿಯೂ ಸಾವು ಇಚ್ಛಿಸದ ನಮ್ಮ ನಡುವೆ ಸುಮಂತ್ರನಂತೆ ಯೋಚಿಸುವವರು ಕಡಿಮೆ ಅಲ್ಲವೇ? ಕವಿ ಸುಮಂತ್ರನ ದು:ಖವನ್ನು ಮಾರ್ಮಿಕವಾಗಿ ಪದಗಳಲ್ಲಿ ಚಿತ್ರಿಸಿದ್ದಾನೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ